ಪತಿ ಎಸಿ ಕೊಡಿಸಲ್ಲ ಅಂದಿದ್ದಕ್ಕೆ ಪತ್ನಿ ಆತ್ಮಹತ್ಯೆ..!

ಸೆಖೆ ತಾಳಲಾರದೇ ಮೋನಿಕಾ ಮನೆಗೆ ಎಸಿ ಬೇಕೆಂದು ಪತಿಯಲ್ಲಿ ಡಿಮ್ಯಾಂಡ್​ ಮಾಡಿದ್ದಾಳೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಆಕಾಶ್​, ಎಸಿ ಕೊಡಿಸಲ್ಲ ಎಂದು ಹೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ದೇಶಾದ್ಯಂತ ಬೇಸಿಗೆಯ ಧಗೆ ಮಿತಿಮೀರಿದೆ. ಬದುಕಲು ಸಾಧ್ಯವಿಲ್ಲ ಎಂಬಂತೆ ಬೇಸಿಗೆ ಎಲ್ಲರಿಗೂ ಬೆವರಿಳಿಸುತ್ತಿದೆ. ಹೀಗಾಗಿ ಎಲ್ಲರೂ ಫ್ಯಾನ್​ನ ಗಾಳಿ ಸಾಲದೇ ಎಸಿ, ಕೂಲರ್​ಗಳ ಮೊರೆ ಹೋಗುತ್ತಿದ್ದಾರೆ. ಆದರೆ ತಮಿಳುನಾಡಿನ ತಿರವಳ್ಳೂರಿನಲ್ಲಿ ಎಸಿ ಕೊಡಿಸುವ ವಿಚಾರಕ್ಕೆ ಶುರುವಾದ ವಾಗ್ವಾದವೊಂದು ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.

ಹೌದು..! ತಿರವಳ್ಳೂರಿನ ನಿವಾಸಿಗಳಾದ 26 ವರ್ಷದ ಆಕಾಶ್ ಮತ್ತು 25 ವರ್ಷದ ಮೋನಿಕಾ ಪರಸ್ಪರ ಪ್ರೀತಿಸಿ 2 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದ ಈ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ವಿವಾಹದ ಬಳಿಕ ಮೋನಿಕಾ ಕೆಲಸ ಬಿಟ್ಟು ಗೃಹಣಿಯಾಗಿದ್ದರೆ, ಆಕಾಶ್​ ಸೇಲ್ಸ್​ಮ್ಯಾನ್​ ಆಗಿ ಸೇವೆ ಸಲ್ಲಿಸುತ್ತಿದ್ದ. ಹೆಚ್ಚಿನ ಸಂಬಳವಿಲ್ಲದ ಆಕಾಶ್​ಗೆ ಮನೆ ನಡೆಸುವುದೇ ದೊಡ್ಡ ಸವಾಲಾಗಿತ್ತು.

ಈ ನಡುವೆ ಸೆಖೆ ತಾಳಲಾರದೇ ಮೋನಿಕಾ ಮನೆಗೆ ಎಸಿ ಬೇಕೆಂದು ಪತಿಯಲ್ಲಿ ಡಿಮ್ಯಾಂಡ್​ ಮಾಡಿದ್ದಾಳೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಆಕಾಶ್​, ಎಸಿ ಕೊಡಿಸಲ್ಲ ಎಂದು ಹೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ರಾತ್ರಿ ವೇಳೆ ಸೆಖೆ ಅತಿಯಾಗಿದ್ದ ಕಾರಣ ಆಕಾಶ್​ ತನ್ನ ತಮ್ಮಂದಿರು ಹಾಗೂ ಪೋಷಕರ ಜೊತೆ ಟೆರೇಸಿನಲ್ಲಿ ಮಲಗಿದ್ದ ಎನ್ನಲಾಗಿದೆ. ಮೋನಿಕಾ ಒಬ್ಬಳೇ ತನ್ನ ಕೋಣೆಯಲ್ಲಿ ಮಲಗಿದ್ದಳು.

Also Read : ಕೌಟುಂಬಿಕ ಕಲಹಕ್ಕೆ ದಂಪತಿ ದುರಂತ ಅಂತ್ಯ..! ರಾಜ್ಯ ರಾಜಧಾನಿಯಲ್ಲಿ ದಂಪತಿ ನಿಗೂಢ ಸಾವು

ಬೆಳಗ್ಗೆ ನಿದ್ದೆಯಿಂದ ಎದ್ದು, ತನ್ನ ರೂಮಿಗೆ ಬಂದು ನೋಡಿದಾಗ ಮೋನಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಪುಲ್ಲರಂಬಕ್ಕಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೋನಿಕಾಳ ಶವವನ್ನು ವಶಪಡಿಸಿಕೊಂಡು ತಿರುವಲ್ಲೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

Also Read : ಕಾರ್ಪೋರೇಟ್​ ಜಿಹಾದ್​ ಪ್ರಕರಣ : ಟಿಸಿಎಸ್​ ಉದ್ಯೋಗಿಗಳಿಗೆ ವರ್ಕ್​ ಫ್ರಾಂ ಹೋಂ

ಪ್ರಾಥಮಿಕ ತನಿಖೆಯ ಪ್ರಕಾರ ಮೋನಿಕಾ ತನ್ನ ಗಂಡನ ಮನೆಯವರೊಂದಿಗೆ ಉತ್ತಮ ಸಂಬಂಧವನ್ನೇ ಹೊಂದಿದ್ದಳು ಎನ್ನಲಾಗಿದೆ. ಸದ್ಯಕ್ಕೆ ಇದು ಎಸಿ ವಿಚಾರಕ್ಕೆ ನಡೆದ ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

wife commits suicide husband refused to buy air conditioner karnataka news

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories