ಭಾನುವಾರ, ಏಪ್ರಿಲ್ 27, 2025
HomeNationalGoogle: ಗೂಗಲ್ ಗೆ 23 ರ ಸಂಭ್ರಮ: ಸ್ಪೆಶಲ್ ಡೂಡಲ್ ಜೊತೆ ಸೆಲಿಬ್ರೇಶನ್

Google: ಗೂಗಲ್ ಗೆ 23 ರ ಸಂಭ್ರಮ: ಸ್ಪೆಶಲ್ ಡೂಡಲ್ ಜೊತೆ ಸೆಲಿಬ್ರೇಶನ್

- Advertisement -

ಜಗತ್ತಿನ ನಂಬರ್ ಒನ್ ಸರ್ಚ್ ಇಂಜಿನ್ ಎನ್ನಿಸಿರುವ ಗೂಗಲ್ ಗೆ ಇಂದು 23 ನೇ ಹುಟ್ಟುಹಬ್ಬದ ಸಂಭ್ರಮ. ಎಲ್ಲಾ ವಿಶೇಷ ಸಂದರ್ಭಗಳಿಗೂ ಸ್ಪೆಶಲ್ ಡೂಡಲ್ ಜೊತೆ ಗೌರವಿಸೋ ಗೂಗಲ್ ತನ್ನ ಬರ್ತಡೇಗೂ ಸ್ಪೆಶಲ್ ಡೂಡಲ್ ಮೂಲಕ ಸಂಭ್ರಮಿಸಿದೆ.

ಗೂಗಲ್ ಸರ್ಚ್ ಇಂಜಿನ್ ನಲ್ಲಿ 23 ನಂಬರ್ ಜೊತೆಗೆ ಕೇಕ್ ಚಿತ್ರ ಹಾಕಲಾಗಿದ್ದು, ಎಲ್  ಅಕ್ಷದ ಸ್ಥಾನದಲ್ಲಿ ಉರಿಯುತ್ತಿರುವ ಕ್ಯಾಂಡಲ್ ಚಿತ್ರ ಅಳವಡಿಸಿದೆ. ಆ ಮೂಲಕ ಗೂಗಲ್ ಬರ್ತಡೇ ಸಂಭ್ರಮಾಚರಣೆಯಲ್ಲಿದೆ.

ತಾಂತ್ರಿಕವಾಗಿ ಗೂಗಲ್ ಸೆ.4 1998 ರಲ್ಲಿ ಆರಂಭವಾದರೂ ಹುಟ್ಟುಹಬ್ಬವಾಗಿ ತನ್ನ ಸಾರ್ವಕಾಲಿಕ ಪೇಜ್ ಗಳ ದಾಖಲೆ ಬರೆದ ದಿನವಾದ ಸೆ.27 ನ್ನು ಗೂಗಲ್ ಆಯ್ಕೆ ಮಾಡಿಕೊಂಡಿದೆ. ಮೊದಲ ಬಾರಿಗೆ ಗೂಗಲ್ ಬ್ಲ್ಯಾಕ್ ರಾಕ್ ಸಿಟಿಯ ಬ್ಲ್ಯಾಕ್ ಮ್ಯಾನ್  ಡೂಡಲ್ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿತ್ತು.

ಲ್ಯಾರಿ ಪೇಜ್ ಹಾಗೂ ಸೆಗ್ರಿಬ್ರೆನ್ ಗೂಗಲ್ ಸ್ಪಾಪಿಸಿದ್ದು, ಇಂದು ವಿಶ್ವದಾದ್ಯಂತ ನಂಬರ್ ಒನ್ ಸರ್ಚ್ ಪೇಜ್ ಎನ್ನಿಸಿದೆ. ಅಕ್ಟೋಬರ್ 24, 2015 ರಿಂದ ಸುಂದರ್ ಪಿಚೈ ಗೂಗಲ್ ಮುನ್ನಡೆಸುತ್ತಿದ್ದಾರೆ.

(Search Engine Google turns 23 celebrates birthday)

RELATED ARTICLES

Most Popular