Sidlingu: ಮತ್ತೆ ಬರಲಿದೆ ಲೂಸ್ ಮಾದನ ಸಿದ್ಲಿಂಗು ಸಿನಿಮಾ: ನಾಯಕಿಯಾಗ್ತಾರಾ ನಟಿ ರಮ್ಯಾ?

ದುನಿಯಾ ಸಿನಿಮಾದ ಮೂಲಕವೇ ಗುರುತಿಸಿಕೊಂಡರೂ ಲೂಸ್ ಮಾದ ಯೋಗಿಯ ನಟನೆಯನ್ನು ಪರಿಚಯಿಸಿದ್ದು, ಸಿದ್ಲಿಂಗು ಸಿನಿಮಾ. ಈ ಸಿನಿಮಾದ ಸಿಕ್ವೆಲ್ ಮತ್ತೆ ತೆರೆಗೆ ಬರಲು ಸಿದ್ಧವಾಗಿದ್ದು, ನಾಯಕಿಯಾಗಿ ರಮ್ಯ ಬರ್ತಾರಾ ಎಂಬ ಕುತೂಹಲದಲ್ಲಿದೆ ಸ್ಯಾಂಡಲ್ ವುಡ್.

2012 ರಲ್ಲಿ ಬಿಡುಗಡೆಯಾದ ಸಿದ್ಲಿಂಗು ಸಿನಿಮಾ ಸ್ಯಾಂಡಲ್  ವುಡ್ ಸಿನಿರಸಿಕರು, ವಿಮರ್ಶಕರಿಂದಲೂ ಹೊಗಳಿಸಿಕೊಂಡ ಸಿನಿಮಾ. ತಮ್ಮ ಮುಗ್ಧ ಅಭಿನಯದಿಂದ ಲೂಸ್ ಮಾದಾ ಪ್ರೇಕ್ಷಕರನ್ನು ಸೆಳೆದಿದ್ದರು. ನಟಿ ರಮ್ಯ ಹಾಗೂ ಸುಮನ್ ರಂಗನಾಥ ಕೂಡ ಸಿನಿಮಾದ ಗೆಲುವಿಗೆ ಕಾರಣವಾಗಿದ್ದರು.

ಅಭಿಮಾನಿಗಳು ಸಾಕಷ್ಟು ಭಾರಿ ಒತ್ತಾಯಿಸಿದ್ದರಿಂದ ಸಿದ್ಲಿಂಗು ಸಿಕ್ವೇಲ್  ತರಲು ನಿರ್ದೇಶಕ ವಿಜಯ್ ಪ್ರಸಾದ್ ಸಿದ್ಧವಾಗಿದ್ದು, ಮೊದಲನೇ ಚಿತ್ರದಲ್ಲಿರುವ ಬಹುತೇಕ ಪಾತ್ರಗಳು ಎರಡನೇ ಸಿನಿಮಾದಲ್ಲೂ ಇರಲಿದೆ. ಸಿದ್ಲಿಂಗು ಸಿನಿಮಾದಲ್ಲಿ ಮೈಸೂರಿನ ಚಿತ್ರಣವಿದ್ದಂತೆ ಮುಂದಿನ ಭಾಗದಲ್ಲಿ ಮತ್ತೊಂದು ನಗರವಿರಲಿದೆ ಎಂದಿದ್ದಾರೆ ವಿಜಯ್ ಪ್ರಸಾದ್.

ಅಲ್ಲದೇ ಸಿನಿಮಾದಲ್ಲಿ ಸುಮನ್ ರಂಗನಾಥ್ ಕೂಡ ನಟಿಸಲಿದ್ದು, ರಮ್ಯ ಪಾತ್ರಕ್ಕೆ ಮಾತ್ರ ಬೇರೆ ನಾಯಕಿಯ ಹುಡುಕಾಟ ನಡೆದಿದೆಯಂತೆ. ಸದ್ಯ ಸ್ಯಾಂಡಲ್ ವುಡ್ ಹಾಗೂ ನಟನೆ ಎರಡರಿಂದಲೂ ಅಂತರ ಕಾಯ್ದುಕೊಂಡಿರುವ ರಮ್ಯ ಸಿನಿಮಾಗೆ ಮರಳುವ ಸಾಧ್ಯತೆಗಳಿಲ್ಲ. ಹೀಗಾಗಿ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರಂತೆ ನಿರ್ದೇಶಕರು.

ಸಿದ್ಲಿಂಗು ಸಿನಿಮಾದಂತೆ ಇಲ್ಲಿಯೂ ಭಾವನಾತ್ಮಕ ಸನ್ನಿವೇಶಗಳು ಇರಲಿದ್ದು, ಯೋಗಿ ಹಾಗೂ ವಿಜಯ್ ಪ್ರಸಾದ್ ಜಂಟಿಯಾಗಿ ಸಿನಿಮಾ ನಿರ್ಮಿಸಲಿದ್ದಾರಂತೆ. ಸಿದ್ಲಿಂಗು ಸಿಕ್ವೇಲ್ ನಲ್ಲಿ ಯೋಗಿ ಮಧ್ಯವಯಸ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆಯಂತೆ.

(sandalwood movie sidlingu part two movie coming soon)

Comments are closed.