ಧರ್ಮಸ್ಥಳ : ಎಸ್ಡಿಪಿಐಗೂ ಹೋರಾಟಗಾರಿಗೂ ಏನು ಸಂಬಂಧ : ಶಾಸಕ ಸುನಿಲ್ ಕುಮಾರ್ ಪ್ರಶ್ನೆ

ಕಾರ್ಕಳ : ಧರ್ಮಸ್ಥಳ (Dharmasthala) ದಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ವೇಳೆಯಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದ ಯೂಟ್ಯೂಬರ್ಳನ್ನು ಎಸ್ಡಿಪಿಐ ಕಾರ್ಯಕರ್ತರು ಭೇಟಿ ಮಾಡಿರುವ ಕುರಿತು ಬಿಜೆಪಿಯ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಧರ್ಮಸ್ಥಳದ ಹೋರಾಟಗಾರರಿಗೂ, ಎಸ್ಡಿಪಿಐಗೂ ಏನು ಸಂಬಂಧ ? ಏನಿದರ ಮರ್ಮ ? ಈ ಹೋರಾಟದಲ್ಲಿ ತೊಡಗಿ ಇರುವವರನ್ನು ಸೂಕ್ಷ್ಮವಾಗಿ ಗಮನಿಸಿ. ಹೋರಾಟಗಾರರು ನಗರ ನಕ್ಸಲರು, ಎಸ್ಡಿಪಿಐ, ಜಿಹಾದಿ ಗ್ಯಾಂಗ್ ಹಾಗೂ ಕಾನೂನು ಕೈಗೆತ್ತಿಕೊಳ್ಳುವವರೇ ತುಂಬಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ : ಯೋಜಿತ ಕಾರ್ಯ
ಎಲ್ಲರೂ ಒಟ್ಟಾಗಿ ಹಿಂದುತ್ವದ ಜೊತೆಗೆ ಹಿಂದೂಗಳ ಧಾರ್ಮಿಕ ನಂಬಿಕೆಗಳ ವಿರುದ್ದ ನಡೆಸುತ್ತಿದ್ದ ಟೂಲ್ ಕಿಟ್ ಹೋರಾಟದ ಮುಂದುವರಿದ ಭಾಗವೇ ಈ ಟಾರ್ಗೇಟ್ ಧರ್ಮಸ್ಥಳ. ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರನ್ನು ನಾಡಿಗೆ ತಂದು ಬಿಟ್ಟಿದ್ದರ ಫಲ ಇದು ಎಂದು ಕಿಡಿಕಾರಿದ್ದಾರೆ.
ಬುರುಡೆ ಶೋಧದ ನೆಪದಲ್ಲಿ ಅಪಪ್ರಚಾರ
ಧರ್ಮಸ್ಥಳ ಸಮೀಪದ ನೇತ್ರಾವತಿ ತಟದಲ್ಲಿ ಬುರುಡೆ ಶೋಧ, ತನಿಖೆಯ ನೆಪದಲ್ಲಿ ಹಿಂದೂಗಳ ಧಾರ್ಮಿಕ ಕೇಂದ್ರದ ವಿರುದ್ದ ನಡೆಯುತ್ತಿರುವ ಅಪಪ್ರಚಾರವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹೋರಾಟ ಮತ್ತು ತನಿಖೆ ಜನರ ನಂಬಿಕೆಯನ್ನು ಘಾಸಿಗೊಳಿಸುವಂತೆ ಇರಬಾರದು. ಸರಕಾರ ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಎಚ್ಚರಿಕೆ ಹೆಜ್ಜೆ ಇರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಪರಶುರಾಮ ಮೂರ್ತಿ ಸ್ಥಾಪನೆಗೆ ತಿಂಗಳ ಗಡುವು
Dharmasthala Case Karkala BJP MLA Sunil Kumar Reaction



