DK Sivakumar fan hydrama: ಮಂಗಳೂರಿನಲ್ಲಿ ಡಿ.ಕೆ ಶಿವಕುಮಾರ್​ ಅಭಿಮಾನಿಗಳ ಹೈಡ್ರಾಮಾ : ಕೆ.ಸಿ ವೇಣುಗೋಪಾಲ್​ ಎದುರು ಡಿಕೆಶಿ ಜಯಘೋಷ

DK Sivakumar fan hydrama: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಗೊಂದಲ ಜೋರಾಗಿರುವ ಬೆನ್ನಲ್ಲೇ ಮಂಗಳೂರಿಗೆ ಆಗಮಿಸಿದ ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ಗೂ ಇದರ ಬಿಸಿ ತಟ್ಟಿದೆ. ಇಂದು ಮಂಗಳೂರಿನ ಕೋಣಾಜೆಯಲ್ಲಿ ನಡೆದ ಗಾಂಧಿ – ನಾರಾಯಣಗುರು ಸಂವಾದ ಶತಮಾನ ಕಾರ್ಯಕ್ರಮಕ್ಕೆ ಹಾಜರಾಗಲೆಂದು ಏರ್​ಪೋರ್ಟ್​ಗೆ ಬಂದಿಳಿದ ಕೆ.ಸಿ ವೇಣುಗೋಪಾಲ್​ ಎದುರು ಡಿ.ಕೆ ಶಿವಕುಮಾರ್​ ಬೆಂಬಲಿಗರು ಶಕ್ತಿ ಪ್ರದರ್ಶಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ಕೆ.ಸಿ ವೇಣುಗೋಪಾಲ್​ ಹೊರಬರುತ್ತಿದ್ದಂತೆಯೇ ಡಿ.ಕೆ ಶಿವಕುಮಾರ್(D. K. Shivakumar)​ ಬೆಂಬಲಿಗರು ಡಿಕೆಶಿ ಪರವಾಗಿ ಜಯಘೋಷ ಮೊಳಗಿಸಿದ್ದಾರೆ. ಡಿ.ಕೆ ಶಿವಕುಮಾರ್​ ಅವರನ್ನು ರಾಜ್ಯದ ಸಿಎಂ ಮಾಡಬೇಕೆಂದು ಪಟ್ಟು ಹಿಡಿದ ಡಿಕೆಶಿ ಬೆಂಬಲಿಗರು ಒಮ್ಮೆಲೆ ಕೆ.ಸಿ ವೇಣುಗೋಪಾಲ್​ ಅವರ ಮೇಲೆ ಮುಗಿಬಿದ್ದ ಪ್ರಸಂಗ ಇಂದು ನಡೆದಿದೆ.

ಏರ್​ಪೋರ್ಟ್​ಗೆ ಬಂದಿಳಿದ ಕೆ.ಸಿ ವೇಣುಗೋಪಾಲ್​ರನ್ನು ಸ್ವಾಗತಿಸಿದ ಮಿಥುನ್ ರೈ ಶಾಲು ಹೊದೆಸಿದ್ರು. ಈ ಸಂದರ್ಭದಲ್ಲಿಯೇ ಅಲ್ಲಿಯೇ ಇದ್ದ ಪಕ್ಷದ ಕಾರ್ಯಕರ್ತರು, ಡಿಕೆ ಡಿಕೆ ಎಂದು ಘೋಷಣೆ ಮೊಳಗಿಸಿದ್ದಾರೆ. ಮಿಥುನ್​ ರೈ ಕೂಡ ಡಿ.ಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದು ಇವರ ಎದುರಲ್ಲೇ ಪಕ್ಷದ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ.

Also Read: ಹನುಮಜಯಂತಿ ದಿನ ನಾಟಿ ಕೋಳಿ ಸವಿದ ಸಿದ್ದರಾಮಯ್ಯ : ಆರ್.ಅಶೋಕ್‌ ಆಕ್ಷೇಪ

ಏರ್​ಪೋರ್ಟ್​ನಿಂದ ಹೊರಬಂದ ಕೆ.ಸಿ ವೇಣುಗೋಪಾಲ್​ ಕಾರು ಹತ್ತುವ ಸಂದರ್ಭದಲ್ಲಿಯೂ ಡಿ.ಕೆ ಶಿವಕುಮಾರ್​ ಅವರನ್ನು ರಾಜ್ಯದ ಸಿಎಂ ಮಾಡಿ ಎಂದು ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಮಿಥುನ್​ ರೈ, ಸಿಎಂ ಸಿದ್ದರಾಮಯ್ಯ ನಾಡು ಕಂಡ ಅದ್ಭುತ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಡಿ.ಕೆ ಶಿವಕುಮಾರ್​ ಅವರಿಗೆ ಉಳಿದ ಅವಧಿಗೆ ಸಿಎಂ ಆಗುವ ಅವಕಾಶ ನೀಡಿದರೆ ನಮಗೆ ಹೆಚ್ಚು ಸಂತೋಷಾಗುತ್ತದೆ ಎಂದು ಹೇಳಿದ್ದಾರೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories