ಡಿ.ಕೆ ಶಿವಕುಮಾರ್ ಬಗ್ಗೆ ದ್ವಾರಕನಾಥ ಗುರೂಜಿ ಸ್ಫೋಟಕ ಭವಿಷ್ಯ : ಮುಂದಿನ 8 ವರ್ಷಗಳ ಕಾಲ ಡಿಕೆಶಿಯೇ ರಾಜ್ಯದ ಸಿಎಂ
ರಾಜ್ಯ ರಾಜಕಾರಣದ ಅಧಿಕಾರ ಹಸ್ತಾಂತರ ಹೈಡ್ರಾಮಕ್ಕೆ ತೆರೆಬಿದ್ದಿದ್ದು, ಸೋಮವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲು ಡಿ.ಕೆ ಶಿವಕುಮಾರ್ ತಯಾರಾಗಿದ್ದಾರೆ. ಈಗಾಗಲೇ ವಿಧಾನಸೌಧದ ಆವರಣದಲ್ಲಿ ಡಿ.ಕೆಶಿವಕುಮಾರ್ ಸೇರಿದಂತೆ 8 ಮಂದಿ ಸಚಿವರ ಪದಗ್ರಹಣಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ರಾಜ್ಯ ರಾಜಕಾರಣದ ಅಧಿಕಾರ ಹಸ್ತಾಂತರ ಹೈಡ್ರಾಮಕ್ಕೆ ತೆರೆಬಿದ್ದಿದ್ದು, ಸೋಮವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲು ಡಿ.ಕೆ ಶಿವಕುಮಾರ್ ತಯಾರಾಗಿದ್ದಾರೆ. ಈಗಾಗಲೇ ವಿಧಾನಸೌಧದ ಆವರಣದಲ್ಲಿ ಡಿ.ಕೆಶಿವಕುಮಾರ್ ಸೇರಿದಂತೆ 8 ಮಂದಿ ಸಚಿವರ ಪದಗ್ರಹಣಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಈ ನಡುವೆ ಡಿ.ಕೆ ಶಿವಕುಮಾರ್ ಅವರ ಬಗ್ಗೆ ದ್ವಾರಕನಾಥ ಗುರೂಜಿ ಸ್ಪೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.
ಡಿ.ಕೆ ಶಿವಕುಮಾರ್ರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಈ ಭವಿಷ್ಯ ನುಡಿದಿದ್ದು, ಮುಂದಿನ 8 ವರ್ಷಗಳ ಕಾಲ ಡಿ.ಕೆ ಶಿವಕುಮಾರ್ರನ್ನು ಸಿಎಂ ಗದ್ದುಗೆಯಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿಯುವುದು ವಿಳಂಬವಾಗುತ್ತಲೇ ಇತ್ತು. ಹೀಗಾಗಿ ಶೃಂಗೇರಿಯ ಶಾರದಾಂಬಾ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದೆ. ಆ ಸಂದರ್ಭದಲ್ಲಿಯೇ ಖುದ್ದು ಡಿ.ಕೆ ಶಿವಕುಮಾರ್ ಅವರು ಕರೆ ಮಾಡಿ ಕೆಲಸ ಆಗಿದೆ ಎಂದು ಗುಡ್ನ್ಯೂಸ್ ನೀಡಿದ್ದರು ಎಂದು ಹೇಳಿದರು.
ಬಂಗಾರಪ್ಪನವರ ಅವಧಿಯಲ್ಲಿ ಡಿ.ಕೆ ಶಿವಕುಮಾರ್ ಸಚಿವರಾಗಿದ್ದ ಸಂದರ್ಭದಲ್ಲಿಯೇ, ಮುಂದೊಂದು ದಿನ ಡಿ.ಕೆ ಶಿವಕುಮಾರ್ ರಾಜ್ಯದ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದೆ. ಅದೀಗ ನಿಜವಾಗಿದೆ. ಅದರಲ್ಲೂ ಜಾತಕದ ಪ್ರಕಾರ ಡಿ.ಕೆ ಶಿವಕುಮಾರ್ಗೆ ಗುರುಬಲ ನಡೆಯುತ್ತಿದೆ. ಹೀಗಾಗಿ ಮುಂದಿನ 8 ವರ್ಷಗಳ ಕಾಲ ರಾಜ್ಯಕ್ಕೆ ಅವರೇ ಸಿಎಂ ಎಂದು ಭವಿಷ್ಯ ನುಡಿದಿದ್ದಾರೆ.
Also Read: ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಮುಹೂರ್ತ ನಿಗದಿ: ಹೊಸ ಸಚಿವ ಸಂಪುಟಕ್ಕೆ ಈ 10 ಜನ ಫಿಕ್ಸ್
ಡಿ.ಕೆ ಶಿವಕುಮಾರ್ ಸಂಘಟನಾ ಚತುರ. ಹೀಗಾಗಿ ರಾಜ್ಯದ ಸಿಎಂ ಆಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಸಿದ್ದರಾಮಯ್ಯ ಬಣದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಅಧಿಕಾರ ನಿಭಾಯಿಸುವುದಲ್ಲಿ ಅವರು ಖಂಡಿತ ಯಶಸ್ವಿಯಾಗಲಿದ್ದಾರೆ. ಡಿಕೆಶಿ ಅವರ ನಾಯಕತ್ವದಲ್ಲಿ ರಾಜ್ಯದ ರಸ್ತೆಗಳು, ನೀರಾವರಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳು ಅಭಿವೃದ್ಧಿಯ ಶಿಖರವನ್ನೇರಲಿದೆ ಎಂದು ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಇನ್ನುಳಿದಂತೆ ಡಿಕೆ ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ಡಾ.ಬಿ.ಪಿ.ಆರಾಧ್ಯ ಅವರು ಕೂಡ ಭವಿಷ್ಯ ನುಡಿದಿದ್ದು, ಡಿ.ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮೇ 01ರಂದು ಹೆಣ್ಣು ಮಗುವಿಗೆ ಜನ್ಮನೀಡಿದ್ದರು.ಆಗಲೇ ನಾವು ಡಿಕೆಶಿವಕುಮಾರ್ ಅದೃಷ್ಠ ಕಾದಿದೆ ಎಂದು ಭವಿಷ್ಯ ನುಡಿದಿದ್ದೆವು . ಆ ಮಾತು ಈಗ ನಿಜವಾಗಿದೆ. ಅಜ್ಜನ ಪಾಲಿಗೆ ಮೊಮ್ಮಗಳು ಅದೃಷ್ಠ ಲಕ್ಷ್ಮೀಯಾಗಿದ್ದಾಳೆ ಎಂದಿದ್ದಾರೆ .
Dwarkanath Gurujis explosive prediction about DK Shivakumar will be the CM of the state for the next 8 years



