Retirement of S.M. Krishna: ಬಿಜೆಪಿ ವರಿಷ್ಠರ ವಿರುದ್ಧ ಎಸ್ ಎಂ ಕೃಷ್ಣ ಬೇಸರ: ರಾಜಕೀಯಕ್ಕೆ ನಿವೃತ್ತಿ ನೀಡುವ ಬಗ್ಗೆ ಮಾತನಾಡಿದ ಎಸ್. ಎಮ್. ಕೃಷ್ಣ ‌

ಬೆಂಗಳೂರು: (Retirement of S.M. Krishna) ಮಾಜಿ ಸಿಎಂ ಎಸ್.ಎಮ್.‌ ಕೃಷ್ಣ ಅವರು ರಾಜಕೀಯ ಜೀವನಕ್ಕೆ ನಿವೃತ್ತಿ ಹೊಂದುವ ಬಗ್ಗೆ ಮಾತನಾಡಿದ್ದು, ತಾನು ಹೆಚ್ಚಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಾ ಬಿಜೆಪಿ ವರಿಷ್ಠರ ವಿರುದ್ದ ಎಸ್.‌ ಎಮ್.‌ ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಎಸ್.ಎಮ್‌ ಕೃಷ್ಣ (Retirement of S.M. Krishna) ಅವರು ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸುತ್ತಿರುವುದಾಗಿ ಮಾತನಾಡುತ್ತಿದ್ದು, ವಯಸ್ಸಿನ ಕಾರಣದಿಂದ ತಾನು ರಾಜಕೀಯಕ್ಕೆ ನಿವೃತ್ತಿ ನೀಡಲಿದ್ದೇನೆ.ನನ್ನ ವಯಸ್ಸಿನ ಬಗ್ಗೆ ಎಲ್ಲರಿಗೂ ಅರಿವಿರಬೇಕು. 90 ನೇ ವಯಸ್ಸಿನಲ್ಲಿ ನಾವು 50 ವರ್ಷದ ರೀತಿ ನಟನೆ ಮಾಡಲು ಸಾಧ್ಯವಿಲ್ಲ.ವಯಸ್ಸಿಗೆ ಬೆಲೆ ಕೊಟ್ಟು ಸಾರ್ವಜನಿಕ ಜೀವನದಿಂದ ಹಿಂದೆ ಸರೀತಿದ್ದೀನಿ (Retirement of S.M. Krishna) ಎಂದಿದ್ದಾರೆ.

ಅವರು ರಾಜಕೀಯ (Retirement of S.M. Krishna) ಜೀವನದ ಬಗೆಗಿನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಚಾರಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರವಾಗಿ,” ನನ್ನನ್ನ ಯಾರೂ ಕರೆದಿಲ್ಲ. ಸಲಹೆಯೂ ಕೇಳಿಲ್ಲ. ನಾನು ಮೇಲೆ ಬಿದ್ದು ಸಲಹೆ ಹೇಳೋಕೆ ಹೋಗಲ್ಲ. ಈಗ ನಾನು ರಿಟೈರ್ಮೆಂಟ್ ಹತ್ತಿರದಲ್ಲಿದ್ದೀನಿ, ಮೀಸಲಾತಿ ವಿಚಾರದ ಬಗ್ಗೆ ಎಲ್ಲಿ ಅಭಿಪ್ರಾಯ ತಿಳಿಸಬೇಕೋ ಅಲ್ಲಿ ತಿಳಿಸ್ತೀನಿ. ಮೀಸಲಾತಿ ವಿಚಾರವಾಗಿ ನನ್ನಲ್ಲಿ ಸಲಹೆಗಳನ್ನು ಕೇಳಿದರೆ ಕೊಡ್ತೀನಿ, ಮೇಲೆ ಬಿದ್ದು ಹೋಗಿ ಸಲಹೆ ನೀಡಲ್ಲ.ನನ್ನ ರಾಜಕೀಯ ಜೀವನಕ್ಕೆ ನಿವೃತ್ತಿ (Retirement of S.M. Krishna) ನೀಡುವ ಬಗ್ಗೆ ಅವರಿಗೆ ತಿಳಿಸುವ ಅಗತ್ಯವಿಲ್ಲ” ಎಂದಿದ್ದು, ಬಿಜೆಪಿ ವರಿಷ್ಠರ ವಿರುದ್ಧ ಎಸ್ ಎಂ ಕೃಷ್ಣ (Retirement of S.M. Krishnaa) ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಕಟ್ಟುವ ಬಗ್ಗೆಯೂ ಎಸ್.‌ ಎಮ್.‌ ಕೃಷ್ಣ (Retirement of S.M. Krishna) ಅವರು ಮಾತನಾಡಿದ್ದು, “ಹಳೇ ಮೈಸೂರು ಭಾಗದಲ್ಲಿ ಪಕ್ಷ ಕಟ್ಟುವ ವಿಚಾರವಾಗಿ ಪ್ರಯತ್ನಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಆ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಕಾದು ನೋಡ್ತೀನಿ. ಇದರ ಬಗ್ಗೆ ಹೈಕಮಾಂಡ್‌ ಏನಾದರೂ ಕೇಳಿದರೆ ಸಲಹೇ ನೀಡ್ತೀನಿ. ಯಾವ ವಿಚಾರವಾಗಿಯೂ ನಾನು ಮೇಲೆ ಬಿದ್ದು ಸಲಹೆ ನೀಡಿವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ : Demonetisation Judgment : ನೋಟು ಬ್ಯಾನ್‌ : ಸುಪ್ರೀಂ ಕೋರ್ಟ್‌ನಿಂದ ಇಂದು ಮಹತ್ವದ ತೀರ್ಪು

ಇದನ್ನೂ ಓದಿ : Pancharatna Yatra: ಎರಡು ಹೊಸ ದಾಖಲೆ ಬರೆದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ

ಇನ್ನೂ ಮೈಸೂರು ರಸ್ತೆಗೆ ಹೆಸರಿಡೋ ವಿಚಾರವಾಗಿ, ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶ ಕಂಡ ಮಹಾನ್ ವ್ಯಕ್ತಿ. ರಾಜ್ಯದ ಹಾಗೂ ನಾಡಿನ ಅಭಿವೃದ್ಧಿ ವಿಚಾರವಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಮೈಸೂರು ರಸ್ತೆಗೆ ಕೃಷ್ಣರಾಜ ಒಡೆಯರ ಹೆಸರು ಇಡುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ದಶಪತಕ್ಕಿಡಲು ನಿತಿನ್ ಗಡ್ಕರಿ ಹಾಗೂ ಸಿಎಂ‌ಗೆ ಮನವಿ ಮಾಡಿದ್ದೇನೆ. ಅವರು ಏನು ಮಾಡ್ತಾರೆ ನೋಡಬೇಕು.” ಎಂದಿದ್ದಾರೆ(Retirement of S.M. Krishna).

1999 ರಿಂದ 2004 ರವೆರೆಗೆ ಎಸ್.‌ ಎಂ. ಕೃಷ್ಣ (Retirement of S.M. Krishna) ಅವರು ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮಹಾರಾಷ್ಟ್ರದ 19 ನೇ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ಕಾಂಗ್ರೆಸ್‌ ಪಕ್ಷದ ಸದಸ್ಯರಾಗಿದ್ದು, 2012 ರಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡರು. ಡಿಸೆಂಬರ್‌ 1989 ರಿಂದ ಜನವರಿ 1993 ರವೆರೆಗೆ ಕರ್ನಾಟಕ ವಿಧಾನ ಸಭೆಯ ಸ್ಪೀಕರ್‌ ಆಗಿಯೂ ಸೇವೆ (Retirement of S.M. Krishna) ಸಲ್ಲಿಸಿದ್ದಾರೆ.

Former CM SM Krishna has spoken about his retirement from political life and said that he is not appearing in politics more often, SM Krishna has expressed his displeasure against BJP leaders.

Comments are closed.