ಗೃಹಲಕ್ಷ್ಮೀ ಯೋಜನೆಗೆ ಎಸ್‌ಸಿ, ಎಸ್‌ಟಿ ಹಣ : ಸದನಲ್ಲಿ ಕೋಲಾಹಲ

Gruha Lakshmi scheme : ಬೆಂಗಳೂರು : ಕರ್ನಾಟಕ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ, ಎಸ್‌ಟಿ ಹಣವನ್ನು ಬಳಕೆ ಮಾಡಲಾಗ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ಸರಕಾರದ ವಿರುದ್ದ ಆರೋಪಿಸಿದೆ.
ಶಾಸಕ ಚಂದ್ರಪ್ಪ ಅವರು ಈ ವಿಚಾರದ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ವಿಚಾರವನ್ನು ಪ್ರಸ್ತಾಪಿಸಿದ್ರು. ರಾಜ್ಯ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಗೆ 42 ಸಾವಿರ ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ ಎಂದು ಘೋಷಿಸಿದ್ದೀರಿ.
ಆದರೆ ಸಮಾಜ ಕಲ್ಯಾಣ ಇಲಾಖೆಗೆ ಸರಕಾರ ಕೊಟ್ಟಿದ್ದು ಕೇವಲ 7027 ಕೋಟಿ ರೂಪಾಯಿ ಮಾತ್ರ. ಸಮಾಜ ಕಲ್ಯಾಣ ಇಲಾಖೆಯ ಹಣವನ್ನು ಇತರ ಇಲಾಖೆಗಳಿಗೆ ನೀಡಿದ್ದೀರಿ ಅಂತಾ ಮಾಹಿತಿ ಕೊಟ್ಟಿದ್ದೀರಿ. ದೇಶದಕ್ಕೆ ದೊಡ್ಡ ಮೊತ್ತದ ಹಣ ಕೊಟ್ಟಿದ್ದೇವೆ ಎಂತಾ ಯಾಕೆ ಡಂಗುರ ಹೊಡೆಸಿದ್ದೀರಿ ಎಂದು ಚಂದ್ರಪ್ಪ ಪ್ರಶ್ನಿಸಿದ್ದಾರೆ.
ಕಾನೂನು ಬದ್ದವಾಗಿಯೇ ಹಣ ನೀಡಿದ್ದೇವೆ : ಸಚಿವ ಮಹಾದೇವಪ್ಪ
ಎಸ್‌ಸಿಎಸ್‌ಪಿ ಟಿಎಸ್‌ಒ ಹಣವನ್ನು ಕಾಯ್ದೆಯ ಅಡಿಯಲ್ಲಿ ರಾಜ್ಯ ಸರಕಾರ ಸುಮಾರು 34 ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಮಹಾದೇವಪ್ಪ ಅವರು ತಿಳಿಸಿದ್ದಾರೆ.
ಆದರೆ ಶಾಸಕ ಚಂದ್ರಪ್ಪ ಅವರು ಈ ಹಣವನ್ನು ಇತರ ಇಲಾಖೆಗೆ ಕೊಡುವುದು ಬೇಡಾ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರಿಸಿಕೊಂಡು ಕಲ್ಯಾಣ ಕಾರ್ಯಕ್ರಮವನ್ನು ಕೈಗೊಳ್ಳಿ ಎನ್ನುತ್ತಿದ್ದಾರೆ. ಆದರೆ ಈ ಕುರಿತು ಚರ್ಚೆಯನ್ನು ನಡೆಸಿಯೇ ಹಣವನ್ನು ಹಂಚಿಕೆ ಮಾಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ ಕೊನೆಗೂ ಮೌನ ಮುರಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ
ಮಹಾದೇವಪ್ಪ ಹೇಳಿಕೆ ಸುನಿಲ್ ಕುಮಾರ್ ಆಕ್ರೋಶ
ಸಚಿವ ಮಹಾದೇವಪ್ಪ ಅವರು ನೀಡಿದ ಉತ್ತರದಿಂದ ಆಕ್ರೋಶಗೊಂಡ ಸಚಿವ ಸುನಿಲ್ ಕುಮಾರ್ ಅವರು, ಸಚಿವ ಮಹಾದೇವಪ್ಪ ಅವರಿಂದ ಇಂತಹ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ. ಒಂದೊಮ್ಮೆ ಮಹಾದೇವಪ್ಪ ಅವರು ಸಚಿವರು ಆಗಿಲ್ಲದೇ ಇದ್ದಿದ್ರೆ ಇಂತಹ ಉತ್ತರ ಕೊಡ್ತಾ ಇದ್ರಾ ಅಂತಾ ಪ್ರಶ್ನಿಸಿದ್ದಾರೆ.
ಎಸ್‌ಸಿ. ಎಸ್‌ಟಿ ಅವರಿಗೆ ಮೀಸಲಿಟ್ಟ ಹಣವನ್ನು ಜನರಲ್ ಸ್ಕೀಮ್ ಗಳಿಗೆ ಬಳಕೆ ಮಾಡಬಾರದು ಅನ್ನೋದು ಕಾಯ್ದೆಯಲ್ಲಿದೆ. ಹಾಗಿದ್ದರೂ ಕೂಡ ಸರಕಾರ ಗ್ಯಾರಂಟಿ ಯೋಜನೆಗೆ ಎಸ್‌ಸಿ, ಎಸ್‌ಟಿ ಅವರಿಗೆ ಇಟ್ಟ ಹಣವನ್ನು ಹೇಗೆ ಬಳಕೆ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಸರಕಾರ ಶಕ್ತಿ ಯೋಜನೆಗೆ ಒಂದೂವರೆ ಸಾವಿರ ಕೋಟಿ ರೂಪಾಯಿ ಹಣವನ್ನು ವಿನಿಯೋಗ ಮಾಡಿದೆ ಎಂದು ಹೇಳಿದೆ. ಬಸ್ಸಿನಲ್ಲಿ ತೆರಳುವವರನ್ನು ಎಸ್‌ಸಿ, ಎಸ್‌ಟಿ ಅಂತಾ ಹೇಗೆ ಗುರುತಿಸಿದ್ದೀರಿ ಎಂದಿದ್ದಾರೆ ಸುನಿಲ್ ಕುಮಾರ್.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಸಿ, ಎಸ್‌ಟಿ ಅವರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿದ್ದೇ ಕಾಂಗ್ರೆಸ್ ಕಾಲದಲ್ಲಿ, ಒಂದು ವರ್ಗದ ಜನರ ಬಗ್ಗೆ ಕಾಳಜಿ ಇದೆ ಅನ್ನುವ ನೀವೇ ಇದೀಗ ಆ ವರ್ಗಕ್ಕೆ ಅನ್ಯಾಯ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.
ದಲಿತರಿಗೆ ಸಚಿವರಿಂದಲೇ ಅನ್ಯಾಯ : ಚಂದ್ರಪ್ಪ
ಕಳೆದ 40 ವರ್ಷಗಳಿಂದಲೂ ಆ ವರ್ಗದ ಮೇಲೆ ಕಳಕಳಿ ಇರುವ ಸಚಿವರಿಂದ ಇಂತಹ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಚಂದ್ರ ಹೇಳಿದ್ದಾರೆ.
ಯಾವ ಪುರುಷಾರ್ಥಕ್ಕಾಗಿ ನೀವು ಸಾರಿಗೆ ಇಲಾಖೆ ಒಂದೂವರೆ ಸಾವಿರ ಕೋಟಿ ಹಣವನ್ನು ನೀಡಿದ್ದೀರಿ. ಆ ವರ್ಗದ ಜನರಿಗೆ ಅನ್ಯಾಯ ಮಾಡಿದ್ದೀರಿ. 34 ಇಲಾಖೆಗಳಿಗೆ ಹಣವನ್ನು ಕೊಟ್ಟು ಎಸ್‌ಸಿ, ಎಸ್‌ಟಿ ಅವರಿಗೆ ಅನ್ಯಾಯ ಮಾಡಿದ್ದೀರಿ ಎಂದು ಚಂದ್ರಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ : ಗಾಳಿ, ಮಳೆ ಹಾನಿಗೆ ತುರ್ತು ಪರಿಹಾರ ಕಲ್ಪಿಸಿ : ಸುನಿಲ್ ಕುಮಾರ್
ಗ್ಯಾರಂಟಿ ಯೋಜನೆ 13 ಸಾವಿರ ಕೋಟಿ ಹಣ
ಸಮಾಜ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮೀ ಯೋಜನೆ 7,438 ಕೋಟಿ, ಗೃಹಜ್ಯೋತಿ ಯೋಜನೆಗೆ 2,626 ಕೋಟಿ, ಶಕ್ತಿ ಯೋಜನೆಗೆ 1,537 ಕೋಟಿ ರೂಪಾಯಿಯನ್ನು ಬಳಕೆ ಮಾಡಲಾಗುತ್ತದೆ.
Social Welfare Department’s SC ST funds used for Gruha Lakshmi scheme Karnataka Legislative Assembly



