ಮಳೆ ಗಾಳಿ ಹಾನಿಗೆ ತುರ್ತು ಪರಿಹಾರ ಘೋಷಿಸಿ : ಸರಕಾರಕ್ಕೆ ಸುನಿಲ್‌ ಕುಮಾರ್‌ ಮನವಿ

Karkala Rain Damage : ಬೆಂಗಳೂರು : ನಿರಂತರವಾಗಿ ಸುರಿಯುತ್ತಿರುವ ಗಾಳಿ, ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಸರಕಾರ ತುರ್ತು ಪರಿಹಾರ ಘೋಷಣೆ ಮಾಡುವಂತೆ ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ (MLA Sunil Kumar) ಸರಕಾರಕ್ಕೆ ಮನವಿ ಮಾಡಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗಸ್ಟ್‌ 18ರಂದು ಭಾರ ಮಳೆ ಹಾಗೂ ಸುಂಟರ ಗಾಳಿ ಬೀಸಿದ್ದು, ಭೀಕರ ಮಳೆಗಾಳಿಯಿಂದಾಗಿ ನೂರಕ್ಕೂ ಅಧಿಕ ವಾಸದ ಮನೆಗಳಿಗೆ ಹಾನಿಯಾಗಿದೆ. ರೈತರು ಬೆಳೆದ ಬೆಳೆ ಸೇರಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿ,ಪಾಸ್ತಿಗಳಿಗೆ ಹಾನಿ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ ಅವರು ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿ, ತುರ್ತು ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿರುತ್ತಾರೆ.

ಇದನ್ನೂ ಓದಿ : ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ಹಿತರಕ್ಷಣಾ ಸಮಿತಿ ಬರ್ಖಾಸ್ತು

Karkala Rain Damage announced Emergency Relief MLA Sunil Kumar demand
ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ ಕಾರ್ಕಳ ಶಾಸಕರಾದ ವಿ. ಸುನಿಲ್‌ ಕುಮಾರ್

ಗಾಳಿ, ಮಳೆಯಿಂದಾಗಿ ಜನರು ವಾಸದ ಮನೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ತುರ್ತು ಅನುದಾನ ಬಿಡುಗಡೆ ಮಾಡುವಂತೆಯೂ ಸಚಿವರಿಗೆ ಮನವಿ ಮಾಡಿದ್ದಾರೆ.

ಕಾರ್ಕಳದ ಎಲ್ಲೆಲ್ಲಿ ಮಳೆ ಹಾನಿ :

ಕಾರ್ಕಳ ತಾಲೂಕಿನ ಸೂಡ, ಬೆಳ್ಮಣ್‌, ನಂದಳಿಕೆ, ಬೈಲೂರು, ರೇಂಜಾಳ, ಯರ್ಲಪಾಡಿ ಹಾಗೂ ಕಡ್ತಲ, ಹೆಬ್ರಿ ತಾಲೂಕಿನ ಮದ್ರಾಡಿ, ಚಾರ, ಕಚ್ಚೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಂಟರಗಾಳಿ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ.

ಇದನ್ನೂ ಒದಿ : ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಮೂರ್ತಿ ಸ್ಥಾಪನೆಗೆ ತಿಂಗಳ ಗಡುವು

Karkala Rain Damage announced Emergency Relief MLA Sunil Kumar demand

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories