ಸಿಎಂ ಕುರ್ಚಿಗೆ ಕಂಟಕವಾಗುತ್ತಾ ಮೀಸಲಾತಿ ಹೋರಾಟ : ಸಿಎಂ ಬಸವರಾಜ್ ಬೊಮ್ಮಾಯಿಗೆ ಎದುರಾಗ್ತಿದೆ ಡೆಡ್ ಲೈನ್ ಕಾಟ

ಬೆಂಗಳೂರು : ಅಚಾನಕ್ ಒಲಿದು ಬಂದ ಅದೃಷ್ಟದಾಟದಲ್ಲಿ ಸಿಎಂ ಸ್ಥಾನಕ್ಕೇರಿದ ಬಸವರಾಜ್ ಬೊಮ್ಮಾಯಿ ಪಾಲಿಗೆ ಸಿಎಂ ಗಾದಿ ಹಿಂದಿದ್ದಷ್ಟು ಸರಳವಾಗಿಲ್ಲ ಮುಂದೆ. ಈಗಾಗಲೇ ಸಚಿವ ಸ್ಥಾನ ಸಿಗದೇ ಇರೋದಕ್ಕೆ ಅಸಮಧಾನಗೊಂಡಿರುವ ಶಾಸಕರು ಸೂಕ್ತ ಸಮಯಕ್ಕಾಗಿ ಕಾದಿದ್ದಾರೆ. ಇದರ ಬೆನ್ನಲ್ಲೇ ಈಗ ಮೀಸಲಾತಿ ಸಂಕಷ್ಟ ಸಿಎಂಗೆ ತಲೆನೋವಾಗಿದ್ದು,ಲಿಂಗಾಯತ ಪಂಚಮಶಾಲಿ ಮೀಸಲಾತಿ ಡೆಡ್ ಲೈನ್ ತೂಗುಕತ್ತಿ (CM Basavaraj Bommai facing dead line) ಸಿಎಂ ಗೆ ಆತಂಕ ತಂದಿದೆ.

ಈಗಾಗಲೇ ಹಲವು ಭಾರಿ ಉಗ್ರ ಹೋರಾಟದ ಎಚ್ಚರಿಕೆ‌ ನೀಡಿರುವ ಲಿಂಗಾಯತ್ ಪಂಚಮಶಾಲಿ ಹೋರಾಟಗಾರರು ಸದ್ಯ ಸಿಎಂಗೆ ಮೂರು ತಿಂಗಳ ಕಾಲಾವಕಾಶ ನೀಡಿದ್ದಾರೆ. ಬೀಸೋ ದೊಣ್ಣೆ ಯಿಂದ ತಪ್ಪಿಸಿಕೊಂಡ್ರೇ ಸಾವಿರ ವರ್ಷ ಆಯಷ್ಯ ಎಂಬಂತೆ ಸಿಎಂ ಕೂಡ‌ ಮೂರು ತಿಂಗಳ ಸಮಯಾವಕಾಶ ಪಡೆದು ಕೊಂಚ ರಿಲ್ಯಾಕ್ಸ್ ಆಗಿದ್ದರು. ಆದರೆ ಈಗ ಡೆಡ್ ಲೈನ್ ಸಮೀಪಿಸುತ್ತಿದ್ದು ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಇದೇ ದೊಡ್ಡ ಸಂಕಟ ತಂದೊಡ್ಡುವ ಮುನ್ಸೂಚನೆ ನೀಡಿದೆ.‌ಇನ್ನು ಮೀಸಲಾತಿ ವಿಚಾರದಲ್ಲಿ ಕೇವಲ ಸಮುದಾಯದ ಸ್ವಾಮೀಜಿಗಳು ಮಾತ್ರವಲ್ಲ ಶಾಸಕರುಗಳು ಒತ್ತಡ ಹೇರುತ್ತಿದ್ದಾರೆ.

ಇತ್ತೀಚಿಗೆ ಸಿಎಂ ಭೇಟಿ ಮಾಡಿದ ಯತ್ನಾಳ್ ಮೀಸಲಾತಿ ಕುರಿತು ಚರ್ಚೆ ನಡೆಸಿದ್ದಾರಂತೆ. ಅಲ್ಲದೇ ಸಿಎಂ ಗೆ ಡೆಡ್ ಲೈನ್ ನೆನಪಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರಂತೆ. ಸಿಎಂ ಸಮಯ ಕೇಳಿದ್ದರಿಂದ ತಾತ್ಕಾಲಿಕವಾಗಿ ಸ್ವಾಮೀಜಿಗಳು ಹೋರಾಟ ನಿಲ್ಲಿಸಿದ್ದಾರೆ. ಆದರೆ ಈಗ ನೀವು ಕೊಟ್ಟ ಮಾತಿನಂತೆ ನಡೆಯಬೇಕು.ಬೇರೆಯವರ ಬಗ್ಗೆ ನಮಗೆ ಬೇಡ, ಆದರೆ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿ ನೀವು ಹೇಳಿದಂತೆ ಎರಡು ತಿಂಗಳಲ್ಲಿ ನಿರ್ಣಯ ಮಾಡಿ. ಮೀಸಲಾತಿ ಘೋಷಿಸಿವ ಬಗ್ಗೆ ನಿರ್ಧಾರ ಮಾಡಿ ಆದಷ್ಟು ಬೇಗ ವರದಿ ಪಡೆದು, ನಿರ್ಣಯ ಮಾಡಿ ಎಂದು ಯತ್ನಾಳ್ ಸಿಎಂಗೆ ಕಿವಿಮಾತು ಹೇಳಿದ್ದಾರಂತೆ.

ಆದರೆ ಸಿಎಂ ಪಾಲಿಗೆ ಈ ಮೀಸಲಾತಿ ಘೋಷಣೆ ಅಷ್ಟು ಸುಲಭವಾಗಿಲ್ಲ. ಯಾಕೆಂದರೇ ಈಗಾಗಲೇ ಲಿಂಗಾಯತ ಪಂಚಮಸಾಲಿ ಸಮುದಾಯದ ಜೊತೆಗೆ ಬೇರೆ ಸಮುದಾದವರು ಕೊಡ ಒತ್ತಡ ಹೇರುತ್ತಿದ್ದು, ಮೀಸಲಾತಿ ಹೆಚ್ಚಿಸುವಂತೆ ವಾಲ್ಮೀಕಿ ಸಮುದಾಯ ಪಟ್ಟು ಹಿಡಿದಿದ್ದು ಪ್ರಸನ್ನಾನಂದ ಸ್ವಾಮೀಜಿ ಫ್ರಿಡಂಪಾರ್ಕ್ ನಲ್ಲಿ ಧರಣಿ ಆರಂಭಿಸಿದ್ದಾರೆ. ಅತ್ತ ದಲಿತ ಎಡಗೈ ಸಮುದಾಯದಿಂದಲೇ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಇನ್ನೂ ಕುರುಬ ಸಮುದಾಯ ವನ್ನು ಎಸ್ಟಿಗೆ ಸೇರಿಸುವ ಬಗ್ಗೆಯೂ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ಕಂಟಕ ಕಾಡೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ಇದನ್ನೂ ಓದಿ : Breakfast Politics : ಫಲ ಕೊಟ್ಟ ರಾಹುಲ್‌ ಗಾಂಧಿ ಸಂಧಾನ: ಸಿದ್ದರಾಮಯ್ಯ ಮನೆಗೆ ಬಂದ್ರು ಡಿಕೆ ಶಿವಕುಮಾರ್

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಕರ್ನಾಟಕಕ್ಕೆ ಮಳೆ ಕಂಟಕ : ಈ ಜಿಲ್ಲೆಯ ಶಾಲೆ, ಕಾಲೇಜಿಗೆ ಮತ್ತೆರಡು ದಿನ ರಜೆ

The struggle for reservation is becoming a thorn in the CM’s chair: CM Basavaraj Bommai facing dead line fight

Comments are closed.