Champa shashti background: ಕುಕ್ಕೆ ಸುಬ್ರಹ್ಮಣ್ಯ, ಕಾಳಾವರ, ಕುಡುಪುವಿನಲ್ಲಿ ಚಂಪಾ ಷಷ್ಠಿ ಉತ್ಸವ : ಏನಿದರ ಹಿನ್ನಲೆ ಗೊತ್ತಾ ?

(Champa shashti background) ಚಂಪಾ ಷಷ್ಠಿ ಶಿವ ಹಾಗೂ ಸುಬ್ರಹ್ಮಣ್ಯನನ್ನು ಪೂಜಿಸುವ ಉತ್ಸವ. ಕಾರ್ತಿಕ ಮಾಸದ ನಿರ್ಗಮನ ಹಾಗೂ ಮಾರ್ಗಶಿರ ಮಾಸದ ಆಗಮನದ ಹೊಸ್ತಿಲಲ್ಲಿ ಬರುವ ಈ ಉತ್ಸವ ಸುಬ್ರಹ್ಮಣ್ಯನ ಕ್ಷೇತ್ರಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಸ್ಕಂದ ಷಷ್ಠಿಯ ಆಚರಣೆಯ ಬಳಿಕ ಬರುವ ಷಷ್ಠಿಯೇ ಈ ಚಂಪಾ ಷಷ್ಠಿ.

ಇದು ಮಾರ್ಗಶಿರ ಮಾಸದ ಶುಕ್ಲಪಕ್ಷದ ಆರನೇ ದಿನ. ಈ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿ (Champa shashti background) ಎಂದೂ ಕೂಡ ಹೇಳುತ್ತಾರೆ. ಈ ಸಲ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠಿ ನ.29ರಂದು ಬಂದಿದೆ. ರಾಜ್ಯದ ಎಲ್ಲ ಸುಬ್ರಹ್ಮಣ್ಯ ದೇಗುಲಗಳಲ್ಲಿ ಈ ದಿನ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಚಂಪಾಷಷ್ಠಿ ಅಥವಾ ಸುಬ್ರಹ್ಮಣ್ಯ ಷಷ್ಠಿ ಎಂಬುದು ಸುಬ್ರಹ್ಮಣ್ಯನಿಗೆ ಬಹಳ ಪ್ರಿಯವಾದ ದಿನ.

ಚಂಪಾ ಷಷ್ಠಿಯ ಹಿನ್ನಲೆ:
ದಂತಕಥೆಯ ಪ್ರಕಾರ, ಮಣಿ ಮತ್ತು ಮಲ್ಲಾ ಎಂಬ ಇಬ್ಬರು ರಾಕ್ಷಸರು ಬ್ರಹ್ಮನಿಗೆ ಸಮರ್ಪಿತವಾದ ಕಠಿಣ ತಪಸ್ಸು ಮಾಡುವ ಮೂಲಕ ಶಕ್ತಿಶಾಲಿಯಾದರು. ಹಲವಾರು ವರ್ಷಗಳ ನಂತರ ಬ್ರಹ್ಮ ಅವರಿಗೆ ವರ ನೀಡಿದರು. ಆ ಶಕ್ತಿಯೊಂದಿಗೆ, ಮಣಿ ಮತ್ತು ಮಲ್ಲಾ ದೇವತೆಗಳು ಮತ್ತು ಮನುಷ್ಯರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಇದರಿಂದ ಸ್ವರ್ಗದ ಶಾಂತಿಯನ್ನು ಹಾನಿಗೊಳಿಸಿದರು. ಭೂಮಿ ಮತ್ತು ಸ್ವರ್ಗದ ಶಾಂತಿಯುತ ಜೀವನವನ್ನು ಅಶಾಂತಿಗೆ ದೂಡಿದರು. ಇದನ್ನು ಪರಿಹಾರ ಮಾಡುವಂತೆ ಋಷಿ ಹಾಗೂ ದೇವದೂತರು ಶಿವನ ಬಳಿ ಬಂದು ಬೇಡಿಕೊಂಡರು. ಮಣಿ ಮತ್ತು ಮಲ್ಲಾ ವಿರುದ್ಧ ಹೋರಾಡಲು ಶಿವನು ತನ್ನ ಹಲವಾರು ಸಹಚರರೊಂದಿಗೆ ಮಣಿಚುರ್ಣ ಪರ್ವತಕ್ಕೆ ಬಂದನು. ಅವನು ಸ್ವತಃ ಭೈರವನ ರೂಪವನ್ನು ಮತ್ತು ಪಾರ್ವತಿಯು ಮಹಲ್ಸಾ ರೂಪವನ್ನು ಪಡೆದರು.

ಮಾರ್ಗಶಿರ್ಷದ ಮೊದಲ ದಿನವೇ ಯುದ್ಧ ಪ್ರಾರಂಭವಾಯಿತು. ಮಣಿ ಮತ್ತು ಮಲ್ಲಾ ಆರು ದಿನಗಳ ಕಾಲ ತೀವ್ರವಾಗಿ ಹೋರಾಡಿದರು. ಕೊನೆಗೆ ಅವರು ಶಿವನ ಕಾಲುಗಳ ಮೇಲೆ ಬಿದ್ದು ಕೊಲ್ಲಲ್ಪಟ್ಟರು. ಇದು ಮಾರ್ಗಶಿರ್ಷದ ಆರನೇ ದಿನದಂದು ಸಂಭವಿಸಿದ್ದು, ಇದೇ ದಿನವನ್ನು ಚಂಪಾ ಷಷ್ಠಿ ಎಂದು ಆಚರಿಸಲಾಗುತ್ತದೆ. ರಾಕ್ಷಸರನ್ನು ಸೋಲಿಸಿದ ನಂತರ ಶಿವನು ಇಲ್ಲಿ ಸ್ವಯಂಭೂವಿನ ರೂಪದಲ್ಲಿ ನೆಲೆಸಲು ನಿರ್ಧರಿಸಿದನೆಂದು ನಂಬಲಾಗಿದೆ.

ಇದನ್ನೂ ಓದಿ : Guddattu shri vinayaka temple: ಕಲ್ಲು ಬಂಡೆಯ ನಡುವೆ ಮೂಡಿಬಂದ ಬಲಮುರಿ ಗಣಪ

ಇದನ್ನೂ ಓದಿ : Champa Shashti 2022: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವ : ಭಕ್ತರಿಂದ ಸಂಭ್ರಮದ ಎಡೆಸ್ನಾನ

ಇದನ್ನೂ ಓದಿ : Sonithapura: ಬಬ್ರುವಾಹನ ಆಳ್ವಿಕೆ ಕಾಲದ ಪರಶುರಾಮ ಸೃಷ್ಟಿಯ ಪುರಾತನ ಕ್ಷೇತ್ರದ ಬಗ್ಗೆ ನಿಮಗೆ ಗೊತ್ತಾ ?

ತಮಿಳುನಾಡು, ಕರ್ನಾಟಕದಲ್ಲಿ ಚಂಪಾ ಷಷ್ಠಿ ಆಚರಣೆ ಹೆಚ್ಚು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಬೆಂಗಳೂರು ಸಮೀಪದ ಘಾಟಿ ಸುಬ್ರಹ್ಮಣ್ಯ, ಬೆಂಗಳೂರಿನ ವಿ.ವಿ. ಪುರಂನ ಸುಬ್ರಹ್ಮಣ್ಯ ದೇವಾಲಯ, ಕಳಸದ ಹತ್ತಿರ ಇರುವ ಹಳುವಳ್ಳಿ, ತರೀಕೆರೆಯ ಸುಬ್ರಹ್ಮಣ್ಯ ದೇವಾಲಯ, ನರಸಿಂಹರಾಜಪುರದ ಸುಬ್ರಹ್ಮಣ್ಯ ದೇವಾಲಯ, ತಮಿಳುನಾಡಿನ ಪಳನಿ, ಕಾಳಾವರದ ಸುಬ್ರಹಣ್ಯ ದೇವಾಲಾಯ ಹೀಗೆ ಹಲವು ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಈ ದಿನ ಸುಬ್ರಹ್ಮಣ್ಯನ ಷಷ್ಠಿ ರಥೋತ್ಸವ ನಡೆಯುತ್ತದೆ.

(Champa shashti background) Champa shashti is a festival to worship Shiva and Subrahmanya. Coming on the threshold of the departure of the month of Kartika and the arrival of the month of Margashira, this festival takes place with great pomp in the fields of Subrahmanya. This Champa Shashti is the shashti that comes after the celebration of Skanda Shashti.

Comments are closed.