ಫ್ರಿಜ್‌ ಮೇಲೆ ಈ ವಸ್ತುಗಳನ್ನು ಎಂದಿಗೂ ಇಡಬೇಡಿ : ನಿಮ್ಮ ಆರ್ಥಿಕ ನಷ್ಟಕ್ಕೆ ಇದೂ ಒಂದು ಕಾರಣವಾಗಬಹುದು

ಅಡುಗೆ ಮನೆಯ ಅವಿಭಾಜ್ಯ ಅಂಗವಾದ ಫ್ರಿಜ್‌ ನ ಒಳಗಡೆ ಆಹಾರಗಳನ್ನು ಶೇಖರಿಡಿಸುವುದರ ಜೊತೆಗೆ ಅದರ ಮೇಲೆಯೂ ಒಂದಿಷ್ಟು ಸಾಮಾನುಗಳನ್ನು ಇಡುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಹಾಗೆ ಫ್ರಿಜ್‌ ನ ಮೇಲೆ ಸಿಕ್ಕ ಸಿಕ್ಕ ವಸ್ತುಗಳನ್ನು ಇಡುವುದು ಮನೆಯ ಆರ್ಥಿಕ ಪ್ರಗತಿ ಪೆಟ್ಟು ಕೊಡುತ್ತದೆ ಎನ್ನಲಾಗಿದೆ.

ಬೇಸಿಗೆಯ ದಿನಗಳಲ್ಲಿ ಸೂರ್ಯ ಕೆಂಡದಂತೆ ಸುಡುತ್ತಿದ್ದಾನೆ. ಬಿಸಿಲಿನ ತಾಪದಿಂದ ಎಲ್ಲಡೆ ಜನರು ತ್ತತ್ತರಿಸಿ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಎಲ್ಲರನ್ನು ತಂಪಾಗಿರಿಸುವ ವಸ್ತು ಎಂದರೆ ನಮ್ಮ ಫ್ರಿಜ್‌. ಹಗಲು ರಾತ್ರಿ ತಣ್ಣೀರು, ತಂಪು ಪಾನೀಯಗಳು, ಐಸ್‌ಕ್ರೀಮ್‌ ಎಂದೆಲ್ಲ ಜನ ಪ್ರಿಜ್‌ ನ ಮೊರೆ ಹೋಗುತ್ತಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ತರಕಾರಿ, ಹಣ್ಣುಗಳಿಂದ ಹಿಡಿದು ಉಳಿದ ಆಹಾರ ಪದಾರ್ಥಗಳನ್ನು ಶೇಖರಿಸಿಡುವ ಬಹುಪಯೋಗಿ ಪೆಟ್ಟಿಗೆ ಫ್ರಿಜ್‌. ಅಡುಗೆ ಮನೆಯ ಅವಿಭಾಜ್ಯ ಅಂಗವಾದ ಫ್ರಿಜ್‌ ನ ಒಳಗಡೆ ಆಹಾರಗಳನ್ನು ಶೇಖರಿಡಿಸುವುದರ ಜೊತೆಗೆ ಅದರ ಮೇಲೆಯೂ ಒಂದಿಷ್ಟು ಸಾಮಾನುಗಳನ್ನು ಇಡುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಹಾಗೆ ಫ್ರಿಜ್‌ ನ ಮೇಲೆ ಸಿಕ್ಕ ಸಿಕ್ಕ ವಸ್ತುಗಳನ್ನು ಇಡುವುದು ಮನೆಯ ಆರ್ಥಿಕ ಪ್ರಗತಿ ಪೆಟ್ಟು ಕೊಡುತ್ತದೆ ಎನ್ನಲಾಗಿದೆ. ಕೆಲವು ವಸ್ತುಗಳಂತೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುವಂತೆ ಮಾಡುತ್ತದೆ. ಹಾಗಾದರೆ ವಾಸ್ತು ಪ್ರಕಾರ ಫ್ರಿಜ್‌ ನ ಮೇಲೆ ಯಾವ ವಸ್ತುಗಳನ್ನು ಇಡಬಾರದು ಎಂದು ನೋಡೋಣ.

ಎಲೆಕ್ಟ್ರಾನಿಕ್‌ ವಸ್ತುಗಳು

ರೆಫ್ರಿಜರೇಟರ್‌ ಸದಾ ಕೂಲ್‌ ಆಗಿರಲು ಅದಕ್ಕೆ ಹೆಚ್ಚು ಗಾಳಿ ಬೇಕು. ಮೈಕ್ರೋವೇವ್‌ ಅಥವಾ ಓವನ್‌ ಅದನ್ನು ಇಡುವುದನ್ನು ತಪ್ಪಿಸಿ. ಫ್ರಿಜ್‌ ಮತ್ತು ಓವನ್‌ ಇವೆರಡೂ ಬಿಸಿಯಾಗುವ ಉಪಕರಣಗಳು. ಇದರಿಂದ ಬೆಂಕಿಯ ಅಪಾಯ ಉಂಟಾಗಬಹುದು. ವಾಸ್ತು ಪ್ರಕಾರ ಅವೆರಡನ್ನೂ ಒಟ್ಟಿಗೆ ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಘರ್ಷಣೆ ಉಂಟಾಗಬಹುದು.

ಕೀ ಚೈನ್‌

ಬೇಸಿಗೆಯಲ್ಲಿ ಲೋಹವು ಬೇಗನೆ ಬಿಸಿಯಾಗುತ್ತದೆ. ಆದ್ದರಿಂದ ರೆಫ್ರಿಜರೇಟರ್‌ನಲ್ಲಿ ಕೀಲಿಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯು ಆಹ್ವಾನಗೊಳ್ಳುತ್ತದೆ. ಅಷ್ಟೇ ಅಲ್ಲದೇ ಸಕಾರಾತ್ಮಕ ಆಲೋಚನೆಗಳ ಹರಿವನ್ನು ತಡೆಹಿಡಿಯುತ್ತದೆ. ವ್ಯವಹಾರ, ಉದ್ಯೋಗದಲ್ಲಿ ನಷ್ಟವಾಗವಹುದು ಎಂದು ವಾಸ್ತು ಹೇಳುತ್ತದೆ.

ಔಷಧಿಗಳು

ರೆಫ್ರಿಜರೇಟರ್‌ನ ಮೇಲ್ಮೈ ಬಿಸಿಯಾಗುವುದರಿಂದ ಔಷಧಿಗಳನ್ನು ಅದರ ಮೇಲೆ ಇಡಬೇಡಿ. ಶಾಖದಿಂದ ರಾಸಾಯನಿಕ ಸಂಯೋಜನೆ ಕೆಡುತ್ತದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಔಷಧಿಗಳನ್ನು ಫ್ರಿಜ್‌ನ ಮೇಲೆ ಇಡುವುದು ನಿಮ್ಮ ಸಂಪತ್ತಿನ ಅಭಿವೃದ್ಧಿಗೆ ಅಡ್ಡಿಯಾಗಬಹುದು.

ಇದನ್ನೂ ಓದಿ: ಶುಕ್ರ–ಬುಧ ಸೇರಿ ಲಕ್ಷ್ಮಿ ನಾರಾಯಣ ಯೋಗ ಸೃಷ್ಟಿ: ಈ 4 ರಾಶಿಯವರಿಗೆ ಮೇ ಅದೃಷ್ಟದ ತಿಂಗಳು

ಸಸ್ಯಗಳು ಮತ್ತು ಹೂದಾನಿಗಳು

ಅಲಂಕಾರಕ್ಕಾಗಿ ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿರುವ ಸಸ್ಯಗಳು ಈ ಸುಡುವ ಶಾಖ ಮತ್ತು ರೆಫ್ರಿಜರೇಟರ್‌ನ ಶಾಖವನ್ನು ಸಹಿಸುವುದಿಲ್ಲ. ಇದರಿಂದ ಗಿಡಗಳು ಒಣಗುತ್ತವೆ. ಒಣಗಿದ ಸಸ್ಯಗಳು ಸತ್ತ ಶಕ್ತಿಯನ್ನು ಸಂಕೇತಿಸುತ್ತವೆ. ಒಣಗಿದ ಸಸ್ಯಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಆರ್ಥಿಕ ತೊಂದರೆಗಳು ಉಂಟಾಗಬಹುದು. ನಿಮ್ಮ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಹುದು.

ಬೇಡದ ವಸ್ತುಗಳು

ರೆಫ್ರಿಜರೇಟರ್‌ ಮೇಲೆ ಹಳೆಯ ಅಥವಾ ಬೇಡದ ವಸ್ತುಗಳನ್ನು ಇಡಬೇಡಿ. ಹಳೆಯ ವಸ್ತುಗಳು ಒಂದೆಡೆ ಸಂಗ್ರಹವಾಗುವುದರಿಂದ ಮನೆಯಲ್ಲಿ ರಾಹು ದೋಷ ಹೆಚ್ಚಾಗುತ್ತದೆ. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

 

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories