ಮಹಿಳೆಯರೇ.. ! ಲಿಪ್ಸ್ಟಿಕ್‌ ಖರೀದಿಸುವ ಮುನ್ನ ಗಮನಿಸಿ ? ಈ ಸಂಖ್ಯೆಗಿದೆ ವಿಶೇಷ ಕಾರಣ

fashion beauty Tips : ಫ್ಯಾಷನ್‌ ಜಗತ್ತಿನಲ್ಲಿ ಲಿಪ್ಸ್ಟಿಕ್‌ಗೆ ಅದರದೇ ಆದ ವಿಶೇಷ ಸ್ಥಾನವಿದೆ. ಆದ್ದರಿಂದಲೇ ಹುಡುಗಿಯರು, ಮಹಿಳೆಯರು ತಮ್ಮ ಮೇಕ್‌ಅಪ್‌ ಕಿಟ್‌ನಲ್ಲಿ ಲಿಪ್ಸ್ಟಿಕ್‌ ಇಟ್ಟುಕೊಂಡಿರುತ್ತಾರೆ. ಪ್ರತಿ ಬ್ರ್ಯಾಂಡ್‌ನ ಲಿಪ್ಸ್ಟಿಕ್‌ ಮೇಲೆ ಶೇಡ್‌ ಕೋಡ್‌ ನಮೂದಿಸಿರುತ್ತಾರೆ. ಅದನ್ನು ಎಂದಾದರೂ ಗಮನಿಸಿದ್ದೀರಾ? ಹಾಗೆ ನಮೂದಿಸಲು ಕಾರಣ ಏನಿರಬಹುದು? ಇಲ್ಲಿದೆ ಓದಿ.

ಫ್ಯಾಷನ್‌ ಎಂಬ ಜಗತ್ತು ಬಹಳ ದೊಡ್ಡದು. ಅಲ್ಲಿ ಪ್ರತಿದಿನ ಯಾವುದಾದರೂ ಒಂದು ಟ್ರೆಂಡಿಂಗ್‌ ಆಗುತ್ತಲೇ ಇರುತ್ತದೆ. ಫ್ಯಾಷನ್‌ ಎಂದರೆ ಕೇವಲ ಬಟ್ಟೆಯೊಂದೇ ಅಲ್ಲ. ಮುಡಿಯಿಂದ ಅಡಿಯವರೆಗೆ ಏನೆಲ್ಲಾ ಧರಿಸಬಹುದೊ ಅದೆಲ್ಲವೂ ಫ್ಯಾಷನ್‌ ಜಗತ್ತಿನ ಭಾಗವಾಗಿದೆ.

ಅದರಲ್ಲಿ ಮೇಕಪ್‌ ಎನ್ನುವುದು ಕೂಡಾ ಫ್ಯಾಷನ್‌ನಲ್ಲೇ ಸೇರಿಕೊಳ್ಳುತ್ತದೆ. ಮೇಕಪ್‌ ವಿಷಯ ಬಂದಾಗಲೆಲ್ಲ ಕಾಜಲ್, ಐಲೈನರ್‌, ಫೌಂಡೇಶನ್‌, ಫೇಸ್‌ ಪೌಡರ್‌, ಫೇಸ್‌ ಕ್ರೀಮ್‌ ಹೀಗೆ ದೊಡ್ಡ ಜಗತ್ತೇ ಅನಾವರಣಗೊಳ್ಳುತ್ತಾ ಹೋಗುತ್ತದೆ. ಮೇಕಪ್‌ನಲ್ಲಿ ಲಿಪ್ಸ್ಟಿಕ್‌ ಕೂಡಾ ಒಂದು.

ತುಟಿಗೆ ರಂಗು ಹಚ್ಚಿದಾಗಲೆಲ್ಲಾ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಆದ್ದರಿಂದಲೇ ಹುಡುಗಿಯರು, ಮಹಿಳೆಯರು ತಮ್ಮ ಮೇಕ್‌ಅಪ್‌ ಕಿಟ್‌ನಲ್ಲಿ ಯಾವಾಗಲೂ ಲಿಪ್ಸ್ಟಿಕ್‌ ಇಟ್ಟುಕೊಂಡಿರುತ್ತಾರೆ.

ಸಾಮಾನ್ಯವಾಗಿ ಲಿಪ್ಸ್ಟಿಕ್‌ ಪ್ರಿಯರು ತಮ್ಮ ಚರ್ಮದ ಟೋನ್‌ ಪ್ರಕಾರ ಲಿಪ್ಸ್ಟಿಕ್‌ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯಕ್ಕೆ ಇದು ಎಲ್ಲರ ಮೇಕಪ್‌ನ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಲಿಪ್ಸ್ಟಿಕ್‌ ಹಲವು ರೀತಿಯ ಟೆಕಶ್ಚರ್‌ಗಳಲ್ಲಿ ದೊರಕುತ್ತದೆ. ಅಂದರೆ ಲಿಪ್ಸ್ಟಿಕ್‌ ಶೇಡ್ ಕೋಡ್‌ಗಳು.

ಲಿಪ್ಸ್ಟಿಕ್‌ನ ಹಿಂಭಾಗದಲ್ಲಿ 07, 115, M12 ಹೀಗೆ ಸಂಖ್ಯೆಗಳನ್ನು ಬರೆಯುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಈ ಸಂಖ್ಯೆಗಳನ್ನು ಹಿಂಭಾಗದಲ್ಲಿ ನಮೂದಿಸಲು ಕಾರಣವೇನು ಎಂದು ತಿಳಿದುಕೊಳ್ಳೋಣ.

fashion beauty Tips : ಲಿಪ್ಸ್ಟಿಕ್‌ ಮೇಲೆ ಬರೆದಿರುವ ಸಂಖ್ಯೆಗಳ ಅರ್ಥವೇನು ?

ಹೆಚ್ಚಿನ ಜನರ ಮನಸ್ಸಿನಲ್ಲಿ ಲಿಪ್ಸ್ಟಿಕ್‌ ಮೇಲೆ ಈ ರೀತಿಯ ಸಂಖ್ಯೆಗಳನ್ನು ಏಕೆ ಬರೆಯುತ್ತಾರೆ ಎಂಬ ಕುತೂಹಲವಿರುತ್ತದೆ. ವಾಸ್ತವವಾಗಿ ಈ ಸಂಖ್ಯೆಗಳನ್ನು ಲಿಪ್ಸ್ಟಿಕ್‌ನ ಹಿಂಭಾಗದಲ್ಲಿ ನಮೂದಿಸುವುದೇಕೆಂದರೆ ಲಿಪ್ಸ್ಟಿಕ್‌ನ ಶೇಡ್‌ ಅನ್ನು ಸುಲಭವಾಗಿ ಗುರುತಿಸಲು.

ಇದು ನಿರ್ದಿಷ್ಟ ಬ್ರಾಂಡ್‌ಗಳ ಬಣ್ಣ ಮತ್ತು ಫಾರ್ಮುಲೇಶನ್‌ ಅನ್ನು ತೋರಿಸುವ ವಿಶಿಷ್ಟ ಸಂಕೇತವಾಗಿದೆ. ಉದಾಹರಣೆಗೆ ನಿಮಗೆ ನೇರಳೆ ಬಣ್ಣ ಬಹಳ ಇಷ್ಟ ಎಂದು ಇಟ್ಟುಕೊಳ್ಳಿ.

ಆದರೆ ನೀವು ಹೊಸ ಲಿಪ್ಸ್ಟಿಕ್‌ ಖರೀದಿಸುವ ವೇಳೆಯಲ್ಲಿ ನೇರಳೆ ಬಣ್ಣದಲ್ಲಿ ನಿಮ್ಮಿಷ್ಟದ ಶೇಡ್‌ ಯಾವುದು ಎಂದು ಗುರುತಿಸುವಲ್ಲಿ ನಿಮಗೆ ಗೊಂದಲವುಂಟಾದರೆ ಆಗ ನೀವು ಆ ಸಂಖ್ಯೆಯನ್ನು ಹೇಳುವುದರ ಮೂಲಕ ನಿಮ್ಮಿಷ್ಟದ ಲಿಪ್ಸ್ಟಿಕ್‌ ಖರೀದಿಸಬಹುದು.

ಇದು ಆನ್‌ಲೈನ್‌ ಶಾಂಪಿಂಗ್‌ನಲ್ಲಿ ಬಹಳ ಸಹಕಾರಿಯಾಗಿದೆ. ಲಿಪ್ಸ್ಟಿಕ್‌ ಮೇಲೆ ಕಂಪನಿಯ ಬ್ರ್ಯಾಂಡ್‌ ಹೆಸರಿನ ಜೊತೆಗೆ ಸಂಖ್ಯೆಯನ್ನು ಬರೆಯಲಾಗುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಕಾರಣವೇನೆಂದರೆ ಒಂದೇ ಹೆಸರನ್ನು ಹಲವು ಬ್ರ್ಯಾಂಡ್‌ಗಳು ಬಳಸಬಹುದು ಆದರೆ ವಿಶಿಷ್ಟ ಸಂಖ್ಯೆಯಿಂದ ಗುರುತಿಸಬಹುದು. ಕೆಲವು ಬ್ರ್ಯಾಂಡ್‌ಗಳು ಸಂಖ್ಯೆಯ ಜೊತೆಗೆ ಫಾರ್ಮುಲಾವನ್ನು ತೋರಿಸುತ್ತವೆ.

fashion beauty Tips : ಮರು ಖರೀದಿ ಸುಲಭ

ನೀವು ಯಾವುದೋ ಒಂದು ಲಿಪ್ಸ್ಟಿಕ್‌ ಬಳಕೆ ಮಾಡುತ್ತಿದ್ದೀರಿ. ಅದು ನಿಮಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ಅದನ್ನೇ ಮುಂದುವರಿಸಲು ಇಷ್ಟಪಡುತ್ತೀರಿ.

ಆ ಲಿಪ್ಸ್ಟಿಕ್‌ ಖಾಲಿಯಾದ ಮೇಲೆ ಅದನ್ನೇ ಮರು ಖರೀದಿ ಮಾಡಬೇಕಾದ ಕೇವಲ ಲಿಪ್ಸ್ಟಿಕ್‌ನ ಮೇಲಿರುವ ಸಂಖ್ಯೆಯನ್ನು ನೆನಪಿಟ್ಟುಕೊಂಡರೆ ಸಾಕು. ಸುಲಭವಾಗಿ ಖರೀದಿಸಬಹುದು. ಲಿಪ್ಸ್ಟಿಕ್‌ ಶೇಡ್‌ ಕೋಡ್‌ ಮರು ಖರೀದಿಗೆ ನಿಮಗೆ ಸಹಾಯ ಮಾಡುತ್ತದೆ.

ಆನ್‌ಲೈನ್‌ ಶಾಪಿಂಗ್‌ ಸುಲಭ

ನೀವು ಆನ್‌ಲೈನ್‌ ಶಾಪಿಂಗ್‌ ಮೂಲಕ ಲಿಪ್ಸ್ಟಿಕ್‌ ಖರೀದಿಸುತ್ತಿದ್ದರೆ, ಶೇಡ್‌ ಕೋಡ್‌ಗಳು ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿದೆ. ಏಕೆಂದರೆ ಆ ಕೋಡ್‌ ಮುಖಾಂತರ ನೀವು ಸರಿಯಾದ ಲಿಪ್ಸ್ಟಿಕ್‌ ಬಣ್ಣವನ್ನೇ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಲಿಪ್ಸ್ಟಿಕ್‌ ಖರೀದಿಸುವಾಗ ಹಲವು ಬಾರಿ ಬಣ್ಣ ಹೊಂದಿಕೆಯಾಗುವುದಿಲ್ಲ.

ಫೋಟೋದಲ್ಲಿ ನೀವು ನೋಡಿದ ಬಣ್ಣಕ್ಕೂ ವಾಸ್ತವದಲ್ಲಿ ಇರುವ ಬಣ್ಣಕ್ಕೂ ಸಂಪೂರ್ಣವಾಗಿ ಭಿನ್ನವಿರಬಹುದು. ಆದ್ದರಿಂದ ಶೇಡ್‌ ಕೋಡ್‌ಗಳು ಅತ್ಯುತ್ತಮ ಮಾರ್ಗವಾಗಿದೆ.

fashion beauty Tips Have you ever noticed the number written on lipstick what is the reason behind that number Kannada News arc

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories