ಅಮಾವಾಸ್ಯೆಯ ರಾತ್ರಿಯಲ್ಲಿ.. ಹರಿಯುವ ನದಿ ನೀರಿನಲ್ಲಿ..3 ಬಗೆಯ ಗಂಧ..108 ಮಂತ್ರಗಳು..! ಭಾಗ-11

0

ನೀಲಕಂಠ ಶಕ್ತಿಯನ್ನ ವಶಪಡಿಸಿಕೊಳ್ಳಬೇಕು ಅಂದ್ರೆ ಅದು ಸುಲಭದ ಮಾತಲ್ಲ ಅಂತಾನೇ ಮಾಂತ್ರಿಕ ಕೃಷ್ಣಪ್ಪ. ಇನ್ನು ಆ ಶಕ್ತಿಯನ್ನು ಪಡೆಯುವುದಕ್ಕೋಸ್ಕರ ಗ್ರಾಮಸ್ಥರ ಕಣ್ಣು ತಪ್ಪಿಸಿ ಅಮಾವಾಸ್ಯೆಯ ರಾತ್ರಿಯಂದು ಸ್ಮಶಾನಕ್ಕೆ ನುಗ್ಗಿ ಹೂತಿರುವ ಗರ್ಭಿಣಿ ಹೆಂಗಸಿನ ಶವದ ತಲೆ ಕತ್ತರಿಸಿಕೊಂಡು ಬರ್ತಾರಂತೆ.

ನಂತರ ಅದನ್ನು ನದಿ ನೀರಿನಲ್ಲಿ ಮೂರು ಬಾರಿ ಮುಳುಗಿಸಿ ಮಂಡಲ ರಚಿಸಿದ ಸ್ಥಳದಲ್ಲಿಟ್ಟು ಪೂಜೆಯನ್ನು ಕೈಗೊಳ್ಳುತ್ತಾರಂತೆ. ಆ ಬುರುಡೆಗೆ ಮೊದಲ ಪೂಜೆ ಸಲ್ಲಿಸಿ ಮಂತ್ರ ಶಕ್ತಿಯನ್ನು ತುಂಬಿ ನಂತರ ಅದನ್ನು ಕೈಯಲ್ಲಿಡಿದುಕೊಂಡು ನೀರೊಳಗೆ ಇಳಿದು ಅಲ್ಲೇ ಗುಂಡಿ ಅಗೆದು ಮುಚ್ಚಿ ಗುರುತು ಮಾಡಿ ಬರುತ್ತಾರಂತೆ.

ಅಂದಿನಿಂದ ಸರಿಯಾಗಿ ಇಪ್ಪತ್ತ ಒಂಬತ್ತು (29) ದಿನಗಳ ತರುವಾಯ ಅಂದ್ರೆ ಅದು ಭಾನುವಾರದ ದಿನವಾಗಿರುತ್ತದೆ.ಮತ್ತೆ ಅದೇ ನದಿ ತೀರಕ್ಕೆ ಬಂದು ಮಂಡಲ ರಚಿಸಿ ಉಗ್ರ ಪೂಜೆಗೆ ಕೊಡುತ್ತಾರಂತೆ. ಸರಿಯಾಗಿ ಕಲ್ಲು ನೀರು ಕರಗುವ ಸಮಯ ಅಂದ್ರೆ ಮಧ್ಯರಾತ್ರಿ ಹನ್ನೆರಡರಿಂದ ಒಂದು ಗಂಟೆಗೆ ಮತ್ತೆ ನೀರೊಳಗೆ ಇಳಿದು ಆ ಬುರುಡೆಯನ್ನು ಹುದುಗಿಸಿದ್ದ ಸ್ಥಳದಿಂದ ಹೊರ ತೆಗೆದು ಶುಚಿಗೊಳಿಸುತ್ತಾರಂತೆ. ಇಲ್ಲಿಂದ ನಡೆಯುವುದು ಆ ಬುರುಡೆಗೆ ಆಘೊರ ಶಕ್ತಿ ತುಂಬುವ ಪೂಜಾ ಕಾರ್ಯ.

ಆ ನದಿ ತೀರದಲ್ಲೇ ಅರಿಸಿನ ಕುಂಕುಮ ಬಳಸಿ ಕಾಳಿಕಾ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಬೆತ್ತಲೆ ಕುಳಿತು ಹೊರ ತೆಗೆದು ಶುಚಿಗೊಳಿಸಿದ ತಲೆ ಬುರುಡೆಗೆ ಮೂರು ಬಗೆಯ ಗಂಧ ಅಂದ್ರೆ. 1 .ವಿಷ್ಣುಕ ಗಂಧ, 2 ಸಾಕಷ್ಟಿಕ ಗಂಧ , 3 ಶ್ರೀಗಂಧಗಳನ್ನು ಲೇಪಿಸಿ ಕುಂಕುಮವಿಟ್ಟು ಅಂಜನ ಹಚ್ಚಿ ಪೂಜೆಗೆ ಇಡಲಾಗುತ್ತದಂತೆ.ನಂತರ ಕಾಳಿಕಾಂಬೆ ಉಗ್ರ ಪೂಜೆ ಸಲ್ಲಿಸಿ ಆ ದಿನವೇ ರಂಗೋಲಿ ಇದ್ದಿಲು ಮಸಿ ಪುಡಿ ಒಂಬತ್ತು ಬಗೆಯ ಹೂವು ತಂದು ಮತ್ತೊಂದು ಮಂಡಲ ರಚಿಸಿ ಪೂಜೆ ಮಾಡಲಾಗುತ್ತದಂತೆ.

ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಗರ್ಭಿಣಿ ಹೆಂಗಸಿನ ತಲೆಬುರುಡೆಗೆ ಮಂತ್ರ ಜಪಿಸಿ ಬೆತ್ತಲೆ ಎದ್ದುಹೋಗಿ ತುಟಿಯವರೆಗೂ ನೀರಿನಲ್ಲಿ ಮುಳುಗಿ ನೂರಾ ಎಂಟು ರೀತಿಯ ಮಂತ್ರ ಉಚ್ಚರಿಸುತ್ತಾರಂತೆ. ಮಂತ್ರಗಳ ಉಚ್ಚಾರಣೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಮಂತ್ರ ಫಲಿಸುವುದಿಲ್ಲ ಅಂತ ಹೇಳ್ತಾನೆ ಕೃಷ್ಣಪ್ಪ. ಈ ರೀತಿ ಪೂಜೆ ಮಾಡಿ ಸಿದ್ಧಪಡಿಸಿಕೊಂಡ ತಲೆ ಬುರುಡೆಯೇ ಮಾಂತ್ರಿಕನ ಬಳಿ ಇರುವಂಥದ್ದು.
ಇನ್ನು ಪ್ರತಿ ಅಮಾವಾಸ್ಯೆಗೂ ರಕ್ತ ಬಲಿ ಕೂಡಲೇ ಬೇಕಂತೆ. ಅದೇನ್ ಕತೆಯೋ ಏನೋ..? ಇನ್ನು ದೇವರು ಮೈಮೇಲೆ ಬರುವುದು. ದೆವ್ವ ಮೈಮೇಲೆ ಬರೋದು ದಿಟವ ಅಂತ ಕೇಳಿದ್ದೆ…ಕೇಳಿ ಒಂದೈದು ನಿಮಿಷ ಆಗಿರಬೇಕು. ಅವನ ಮೈಮೇಲೆ ಬಂದು ಬಿಟ್ಟಿದ್ದಳು ಕಾಳಿಕಾದೇವಿ. ಅದು ಮತ್ತೂ ಇಂಟ್ರೆಸ್ಟಿಂಗ್ ಕಥೆ.. ಆ ಕಥೆಯನ್ನು ಹೇಳ್ತೀನಿ ಮುಂದಿನ ಸಂಚಿಕೆಯಲ್ಲಿ..

( ಮುಂದುವರಿಯುತ್ತದೆ…)

  • ಕೆ.ಆರ್.ಬಾಬು

Leave A Reply

Your email address will not be published.