ಗರ್ಭಿಣಿ ಶವದ ಸಮಾಧಿ ಮೇಲೆ ಕುಳಿತು ತಪಸ್ಸು…ಮದುವೆಯಾಗಿದ್ದರೂ ಕನ್ಯೆಯಾಗಿಯೇ ಉಳಿದಿರುವ ಹೆಣ್ಣಿನ ಬಲಿ..! ಭಾಗ-3

0

ಭೂತ ಪ್ರೇತ ಬಾಲಗ್ರಹ ಚೇಷ್ಟೆಗಳಿಗೆ ಯಂತ್ರ ಮಂತ್ರದ ಮುಖಾಂತರ ಕಡಿವಾಣ ಹಾಕುವ ಒಂದು ವರ್ಗ. ಶತ್ರುಗಳ ಸರ್ವನಾಶಕ್ಕೆ ಮಾಟ ಮಂತ್ರದ ಮುಖಾಂತರ ಪರಿಹಾರ ನೀಡುವ ಮತ್ತೊಂದು ವರ್ಗ.

ಹಗಲೊತ್ತು ನಗರದಲ್ಲಿ ನಡು ರಾತ್ರಿ ಸ್ಮಶಾನದಲ್ಲಿ ಇವರ ಕಾಯಕ. ಸತ್ತ ಶವಗಳ ಅಸ್ಥಿಪಂಜರವೇ ಇವರ ಆಯುಧ. ಕಾಳಿಕ ಮಾತೆಯೇ ಇವರ ಆರಾಧ್ಯ ದೇವತೆ. ಅರಿಶಿನ ಕುಂಕುಮ, ನಿಂಬೆಹಣ್ಣು, ಒಣ ಮಡಿಕೆ, ಕೋಳಿ ಮೊಟ್ಟೆ ಇಂತವುಗಳೇ ಇವರ ಅಸ್ತ್ರಗಳು.

ದೆವ್ವ ಮತ್ತು ದೇವರು ಇಬ್ಬರ ಅನಿಸಿಕೆಗಳು ಒಂದೊಂದು ದಿಕ್ಕು. ದೆವ್ವಕ್ಕೆ ಕೆಡಕುಂಟು ಮಾಡುವುದೇ ಕಾಯಕ. ದೇವರಿಗೆ ಕಾಯುವುದೇ ಕಾಯಕ. ದೇವರಿಗೆ ಪೂರ್ವ ದಿಕ್ಕಾದರೆ, ಕ್ಷುದ್ರ ವಿದ್ಯೆ ಕರಗತ ಮಾಡಿಕೊಳ್ಳುವ, ದೆವ್ವ ಭೂತ ಪ್ರೇತವನ್ನು ಒಲಿಸಿಕೊಳ್ಳಲು ದಕ್ಷಿಣ ದಿಕ್ಕನ್ನು ಬಳಸಲಾಗುತ್ತದೆ ಅಂತೆ. ದೇವರಿಗೆ ದೇವಮೂಲೆಯಾದರೆ ದೆವ್ವಗಳಿಗೆ ಸ್ಮಶಾನದ ಯಾವುದೇ ಮೂಲೆಯಾದರೂ ಓಕೆ ಅಂತಾರೆ ಮಾಂತ್ರಿಕರು.

ಇನ್ನು ಮಾಂತ್ರಿಕರು ಕ್ಷುದ್ರ ವಿದ್ಯೆಗಳನ್ನು ಒಲಿಸಿಕೊಳ್ಳಬೇಕಾದರೆ ಸಾಕಷ್ಟು ಕಟ್ಟುಪಾಡುಗಳು ಇರುತ್ತವಂತೆ. ಕಾಶ್ಮೋರ ಅನ್ನೋ ಭಯಾನಕ ಕ್ಷುದ್ರ ವಿದ್ಯೆಯನ್ನು ಕರಗತ ಮಾಡಿಕೊಳ್ಳಬೇಕು ಅಂದ್ರೆ ಮಾಂತ್ರಿಕ 21 ರಾತ್ರಿ ನಿದ್ರೆ ಆಹಾರ ತ್ಯಜಿಸಿ ಸ್ಮಶಾನದಲ್ಲಿ ಹೂತಿರುವ ಗರ್ಭಿಣಿ ಶವದ ಸಮಾಧಿ ಮೇಲೆ ನಗ್ನವಾಗಿ ಕೂತು ಮಸಣ ರುದ್ರಿಗೆ ಸಂಬಂಧಪಟ್ಟ ಮಂತ್ರವನ್ನು ಬಿಡದೆ ಜಪಿಸಬೇಕಂತೆ.

ಕೊನೆಯ ಐದು ದಿನ.. ಐದು ರೀತಿ ಹೂವು.. ಐದು ರೀತಿಯ ಇದ್ದಲು, ಐದು ರೀತಿಯ ಮಸಿ ಪುಡಿ ಬಳಸಿ ಮಂಡಲ ಹಾಕಿ ಐದು ಜಾಗದ ನೀರು ತಂದು ಒಂಬತ್ತು ಬಗೆಯ ಚಕ್ರ ರಚಿಸಿ ಅದರ ಮೇಲೆ ಕೂತು ಜಪ ಮಾಡುತ್ತಾರಂತೆ. 21ನೇ ದಿನ ಅಮಾವಾಸ್ಯೆಯ ದಿನವಾಗಿದ್ದು ಅಂದು ನಟ್ಟ ನಡು ರಾತ್ರಿ ಕಲ್ಲು ನೀರು ಕರಗದ ಸಮಯ, ಅಂದ್ರೆ ಹನ್ನೆರಡ ರಿಂದ ಒಂದು ಗಂಟೆ ಸಮಯದಲ್ಲಿ ಘೋರವಾದ ಯಜ್ಞಕುಂಡ ಹಾಕಿ ಅದರೊಳಗೆ ಒಂದೊಂದೇ ತೊಟ್ಟು ರಕ್ತ ನೈವೇದ್ಯ ನೀಡಿ ಕೊನೆಯಲ್ಲಿ ಮದುವೆಯಾಗಿದ್ದರೂ ಕನ್ಯೆಯಾಗಿಯೇ ಉಳಿದಿರುವ ಹೆಣ್ಣಿನ ಬಲಿ ಕೊಡಲಾಗುತ್ತದಂತೆ.

ಇಷ್ಟು ಮುಗಿದ ಬಳಿಕ ಆ ಮಂತ್ರವಾದಿಗೆ ಕಾಶ್ಮೀರದಂತಹ ಘೋರ ವಿದ್ಯೆ ಆವಾಹನೆಯಾಗುತ್ತದೆ ಅಂತ ಮಾಂತ್ರಿಕರು ಹೇಳ್ತಾರೆ. ಸದ್ಯ ಈ ಘೋರ ವಿದ್ಯೆ ಕರಗತ ಮಾಡಿಕೊಂಡವರು ಯಾರೂ ಉಳಿದಿಲ್ಲ ಅನ್ನೋ ಮಾತು ಹೇಳ್ತಾರೆ. ಸಾವಿರಾರು ವರ್ಷಗಳ ಹಿಂದೆ ಕಾಶ್ಮೋರದಂತಹ ಭಯಂಕರ ವಿದ್ಯೆ ಬಲ್ಲ ಅನೇಕ ಮಾಂತ್ರಿಕರು ಕೇರಳದಲ್ಲಿದ್ದರೂ ಅನ್ನೋದಿಕ್ಕೆ ಪುರಾವೆಗಳು ಇವೆಯಂತೆ. ಅದೆಷ್ಟು ಸತ್ಯವೋ ಅದೆಷ್ಟು ಮಿಥ್ಯವೋ ಗೊತ್ತಿಲ್ಲ.


ಇನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಮತ್ತದರ ಸುತ್ತ ಮುತ್ತಲಿರುವ ಹಳ್ಳಿಗಳಲ್ಲಿ ವಾಸಿಸುವ ಎಲ್ಲ ಮಾಂತ್ರಿಕರ, ಮೋಡಿಗಾರರ ಮನೆಯೊಳಗಿನ ದೇವರ ಕೋಣೆಯಲ್ಲಿ ಕಾಳಿಕಾ ದೇವಿಯ ವಿಗ್ರಹದ ಮಗ್ಗುಲಿಗೆ ಪವಾಡ ಪುರುಷ ಸಿದ್ದಪ್ಪಾಜಿ ಗುರುಗಳ ಫೋಟೋ ಇರುತ್ತೆ ಈ ಸಿದ್ದಪ್ಪಾಜಿಗೆ ಕೊಳ್ಳೇಗಾಲದ ಮಾಂತ್ರಿಕನಿಗೆ ಏನು ನಂಟು ಅನ್ನೋದನ್ನು ಮುಂದಿನ ಸಂಚಿಕೆಯಲ್ಲಿ ಹೇಳ್ತೀನಿ…

(ಮುಂದುವರಿಯುವುದು…)

  • ಕೆ. ಆರ್. ಬಾಬು
Leave A Reply

Your email address will not be published.