ramanujacharya : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

0

ಹುಟ್ಟಿದವರು ಸಾಯಲೇ ಬೇಕು ದೇಹವನ್ನು ಬಿಟ್ಟು ಹೋಗಲೇ ಬೇಕು . ದೇಹ ಕೂಡಾ ಹಾಗೆ ಎಂದು ಆತ್ಮ ಬಿಟ್ಟು ಹೋಗಿ, ಉಸಿರಾಟ ನಿಲ್ಲಿಸುತ್ತೋ ಅದಾದ ನಂತ್ರ ಹೆಚ್ಚು ಹೊತ್ತು ಭೂಮಿಯಲ್ಲಿ ಇರೋಕೆ ಆಗಲ್ಲ. ದೇಹ ಕೊಳೆಯೋಕೆ ಶುರು ಆಗುತ್ತೆ . ಯಾವುದಾದರೂ ರಾಸಾಯನಿಕ ಬಳಸಿ ಸಂರಕ್ಷಿಸಿದ್ರೂ ಹೆಚ್ಚೆಂದ್ರೆ 6 ತಿಂಗಳ ಕಾಲ ರಕ್ಷಿಸಿ ಇಡಬಹುದು. ಆದ್ರೆ ವಾತಾವರಣದ ಉಷ್ಣಾಂಶದಲ್ಲಲ್ಲ ಅದರ ಬದಲಾಗಿ 20ಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ. ಆದ್ರೆ ಈ ವಾದವನ್ನು ಸುಳ್ಳಾಗಿಸಿದೆ ನಮ್ಮ ದೇಶದ ಪುರಾತನ ತಂತ್ರಜ್ಞಾನ. ನಮ್ಮ ದೇಶದ ದೇವಾಲಯವೊಂದರಲ್ಲಿ ಒಬ್ಬ ಸಂತನ ದೇಹವಿದೆ. ಅದನ್ನು ಯಾವುದೇ ರಾಸಾಯನಿಕ ಬಳಸದೆ ಸುಮಾರು 884 ವರ್ಷಗಳಿಂದ ರಕ್ಷಿಸಿ ಇಡಲಾಗಿದೆ. ನಿಮಗೆ ಆಶ್ವರ್ಯ ವಾಗಬಹುದು. ಆದ್ರು ಇದು ನಿಜಾನೆ . ದಕ್ಷಿಣ ಭಾರತದ ದೇವಾಲಯವೊಂದರಲ್ಲಿ ramanujacharya ) ಈ ದೇಹವನ್ನು ಸಂರಕ್ಷಿಸಿ ಇಡಲಾಗಿದೆ.

ಆ ದೇಹ ಯಾರದ್ದು ಗೊತ್ತಾ? ಆಚಾರ್ಯ ತ್ರಯರಲ್ಲಿ ಒಬ್ಬರಾದ ರಾಮಾನುಜಾಚಾರ್ಯರ ದೇಹವದು. ನೀವೆಲ್ಲಾ ಇವರ ಬಗ್ಗೆ ೬ನೇ ತರಗತಿಯಲ್ಲೋ 7ನೇ ತರಗತಿಯಲ್ಲಿ ಓದಿರುತ್ತೀರಾ. ವಿಶಿಷ್ಟಾದ್ವೈತ ಎನ್ನುವ ಪರಂಪರೆಯ ಪ್ರತಿಪಾದಕರಿವರು. ಜೊತೆಗೆ ವೈಷ್ಣವ ಪಂತಕ್ಕೆ ಮೈಲಿಗಲ್ಲು ಹಾಕಿಕೊಟ್ಟ ಸಂತ. ಇವರು ಹುಟ್ಟಿದ್ದು 1017ರಲ್ಲಿ ತಮಿಳುನಾಡಿ ನಲ್ಲಿ. ಶ್ರೀವೈಷ್ಣವ ಪಂಥದ ಅನುಯಾಯಿಗಳಾದ ಇವರು ವಿಶಿಷ್ಟಾದ್ವೈತ ಅನ್ನೋ ವಿಚಾರ ಪ್ರತಿ ಪಾದಿಸಿದ್ರೂ. ಇದಲ್ಲದೆ ಅನೇಕ ಸಮಾಜದ ಮೂಡ ನಂಬಿಕೆ ವಿರುದ್ಧ ಹೋರಾಡಿದ್ರು. ಜೊತೆಗೆ ಮಹಿಳೆಯರಿಗೆ ದೀಕ್ಷೆಯನ್ನೂ ನೀಡಿದ್ರೂ ವೇದಾಂತ ಸೂತ್ರಕ್ಕೆ ಹೊಸ ಭಾಷ್ಯ ಬರೆದ್ರು.

ಅವರು ಜೀವಿಸಿದ್ದು ಪೂರ್ಣ 120 ವರ್ಷ. ಭಾರತದ ಪುರಾಣಕಾಲದಲ್ಲಿ ಉಲ್ಲೇಖಿಸಲಾಗುವ ಮನುಷ್ಯನ ಪೂರ್ಣ ಆಯಸ್ಸು ಅದು. ಅಂದ್ರೆ 1137 ರಲ್ಲಿ ಅವರು ನಿಧನ ಹೊಂದಿದ್ರು. ಅಂದಿನಿಂದ ಇಂದಿನವರೆಗೆ ಅವರ ಮೂಲ ದೇಹವನ್ನು ಒಂದು ವಿಷ್ಣು ಮಂದಿರದಲ್ಲಿ ಸಂರಕ್ಷಿಸಿಡಲಾಗಿದೆ.

ಆದ್ರೆ ಇದರಲ್ಲಿ ಒಂದು ವಿಶೇಷವಿದೆ ಅದೇನು ಗೊತ್ತಾ. ಅದು ಯಾವುದೇ ರಾಸಾಯನಿಕ ಬಳಸದೇ ಅದನ್ನು ಸಂರಕ್ಷಿಸಿಟ್ಟಿರೋದು. ಈ ದೇವಾಲಯದಲ್ಲಿ ರಾಮಾನುಜರನ್ನೂ ಪೂಜಿಸಲಾಗುತ್ತೆ. ದೇವಾಲಯದ ಪ್ರಾಂಗಣದಲ್ಲೇ ಅವರ ವಿಶೇಷ ಮಂದಿರವೂ ಇದೆ. ಇದರಲ್ಲೇ ರಾಮಾನುಜರ ದೇಹವನ್ನು ಸಂರಕ್ಷಿಸಿಟ್ಟುಕೊಳ್ಳಲಾಗಿರೋದು.

ಈ ಮಂದಿರದಲ್ಲಿ ರಾಮಾನುಜರ ಪುತ್ತಳಿಯೊಂದಿದೆ. ಅದರ ಹಿಂಬಾಗದಲ್ಲಿಯೇ ಅವರ ಮೂಲ ಶರೀರವನ್ನು ಉಪದೇಶ ಮುದ್ರಾ ಭಂಗಿಯಲ್ಲಿ ನೋಡಬಹುದು. ಆದ್ರೆ ಇದು ಸಾಕಷ್ಟು ಜನರಿಗೆ ಗೊತ್ತಿಲ್ಲ ಅನ್ನೋದು ವಿಷಾಧ. ಇಲ್ಲಿ ಬರುವ ಭಕ್ತರ ಪ್ರಕಾರ ಈ ದೇಹದ ಉಗುರುಗಳನ್ನು ನೋಡಿದ್ರೆ ಅದು ನಿಜವಾದ ಮಾನವ ದೇಹ ಅಂತ ಗೊತ್ತಾಗುತ್ತೆ ಅಂತಾರೆ.

ಇನ್ನು ಈಜಿಫ್ಟ್ ನ ಮಮ್ಮಿಗಳೂ, ಗೋವಾದ ಪಾದ್ರಿಯೊಬ್ಬರ ದೇಹ ವನ್ನು ಹಲವು ವರ್ಷಗಳಿಂದ ರಕ್ಷಿಸಿಡಲಾಗಿದೆ. ಆದ್ರೆ ಅವೆಲ್ಲವುದಕ್ಕೆ ಆಗಿನ ಕಾಲದ ರಾಸಾಯನಿಕಗಳನ್ನು ಬಳಸಲಾಗಿದೆ. ಜೊತೆಗೆ ಪಿರಮಿಡ್ ಗಳನ್ನು ನಿಗದಿತ ಉಷ್ಣಾಂಶವಿರುವ ರೀತಿ ರಚಿಸಲಾಗಿದೆ. ಹೀಗಾಗಿ ರಾಸಾಯನಿಕ ನಿಗದಿತ ಉಷ್ಣಾಂಶದಲ್ಲಿ ದೇಹವನ್ನು ಕೆಡದಂತೆ ನೋಡಿಕೋಳ್ಳುತ್ತೆ. ಆದ್ರೆ ರಾಮಾನುಜರ ಈ ದೇಹ ಓಪನ್ ಆಗಿ ಇಟ್ಟಿದ್ದಾರೆ. ದಿನಾಲೂ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ . ಇದು ವಿಜ್ಞಾನಿಗಳಿಗೆ ಬಗೆ ಹರಿಯದ ಪ್ರಶ್ನೆಯಾಗಿದೆ.

ಇನ್ನು ಇದರ ಮತ್ತೊಂದು ವಿಶೇಷವೆಂದರೆ ಈ ದೇಹಕ್ಕೆ ಬಳಿಯುವ ಲೇಪ . ಹೌದು ಈ ದೇಹಕ್ಕೆ ವರ್ಷಕ್ಕೆ ಎರಡು ಬಾರಿ ಕೇವಲ ಕರ್ಪೂರ, ಚಂದನ ಮತ್ತು ಕುಂಕುಮ ಮಿಶ್ರಣದ ಲೇಪವನ್ನು ಹಚ್ಚಲಾಗುತ್ತೆ . ಇದರಿಂದ ದೇಹ ಕೇಸರಿ ಬಣ್ಣಕ್ಕೆ ಪರಿವರ್ತಿತವಾಗುತ್ತೆ. ಇದು 884 ವರ್ಷಗಳಿಂದ ನಡೆದು ಬರ್ತಿದೆ ಅಂತಿದೆ ಇಲ್ಲಿನ ಇತಿಹಾಸ. ಇದೇ ಲೇಪ ದೇಹವನ್ನು ಕೆಡದಂತೆ ನೋಡುತ್ತೆ ಅಂತಾರೆ ಭಕ್ತರು. ಆದರೆ ಇದು ಹೇಗೆ ಸಾಧ್ಯ ಅಂತಾರೆ ವಿಜ್ಞಾನಿಗಳು.

ಅಂದ ಹಾಗೆ ಈ ದೇಹವಿರುವ ದೇವಾಲಯ ಯಾವುದು ಗೊತ್ತಾ ? ಅದೇ ತಮಿಳುನಾಡಿನ ತಿರುಚರಾಪಳ್ಳಿಯ ಶ್ರೀರಂಗಮ್ ನ ರಂಗನಾಥ ಸ್ವಾಮಿ ದೇವಾಲಯ. ರಂಗನಾಥ ಸ್ವಾಮಿ ಪರಮ ಭಕ್ತರಾಗಿದ್ದ ರಾಮಾನಾಜರು ತಮ್ಮ ಆಯಸ್ಸಿನ ಸುಮಾರು 50 ರಷ್ಟು ಭಾಗವನ್ನು ಇಲ್ಲೇ ಕಳೆದರು. ಹೀಗಾಗಿ ಅವರ ದೇಹವನ್ನು ಇಲ್ಲೇ ಸಂರಕ್ಷಿಡಲಾಯಿತು ಅಂತಾರೆ.

ಇನ್ನು ದೇಹವನ್ನು ದಕ್ಷಿಣ ಮತ್ತು ಪಶ್ಚಿಮಾಭಿಮುಖವಾಗಿ ಇಡಲಾಗಿದ್ದು, ಇದು ಸ್ವಯಂ ರಂಗನಾಥ ಸ್ವಾಮಿಯ ಆಜ್ಞಾನುಸಾರ ಇಡಲಾಗಿದೆ ಎಂದು ಹೇಳಲಾಗುತ್ತದೆ. ಇನ್ನು ಈ ದೇವಾಲಯಕ್ಕೂ (ramanujacharya) ಸಾವಿರಾರು ವರ್ಷದ ಇತಿಹಾಸ ಇದೆ . ಒಬ್ಬ ವ್ಯಕ್ತಿಯ ಮೂಲ ಶರೀರವನ್ನು ಸಂರಕ್ಷಿಸಿ ದೇವಸ್ಥಾನದೊಳಗೆ ಇಡಲಾಗಿರುವ ಜಗತ್ತಿನ ಏಕೈಕ ಉದಾಹರಣೆ ಇದು ಎಂದರೆ ತಪ್ಪಾಗಲಾರದು.

ನಿಜಕ್ಕೂ ಇದು ದೇವರ ಕೃಪೆಯಲ್ಲದೆ ಮಾತ್ತೇನು? ನಮ್ಮ ಹಿರೀಕರು ಈ ದೇವಾಲಯದ ಮೂಲಕ ವಿಜ್ಞಾನವನ್ನು ನಮಗೆ ನೀಡಿದ್ದಾರೆ. ಆದ್ರೆ ನಮಗೆ ಯಾವುದಲ್ಲೂ ನಂಬಿಕೆ ಇಲ್ಲ ಅನ್ನೋದೆ ದುರಂತ. ನಮ್ಮ ವಿಜ್ಞಾನದ ವಿಸ್ಮಯದ ಬಗ್ಗೆ ನೋಡ ಬೇಕಾದ್ರೆ ಒಮ್ಮೆ ಶ್ರೀರಂಗಂಗೆ ಭೇಟಿ ನೀಡಿ.

ಇದನ್ನೂ ಓದಿ : ರಜಸ್ವಲೆ ಆಗುತ್ತಾಳೆ ಈ ದೇವಿ : ಹೆಣ್ಣು ಮಕ್ಕಳ ಸಮಸ್ಯೆಗೆ ಇಲ್ಲಿ ಪರಿಹಾರ ಖಚಿತ

ಇದನ್ನೂ ಓದಿ : ಕೊಲ್ಲಾಪುರದಿಂದ ಬಂದು ನೆಲೆಸಿದ್ದಾಳೆ ಮಾಯಮ್ಮ: ದುಡ್ಡಿನ ಹರಕೆಯೇ ಈಕೆಗೆ ಪ್ರಿಯ

( ramanujacharya : Mahavishnu, the body of a saint, has been in the temple for over 800 years )

Leave A Reply

Your email address will not be published.