ವಾಸ್ತು ಪ್ರಕಾರ ಈ ಶುಭ ಸಂಕೇತಗಳು ನಿಮ್ಮ ಕಣ್ಣಿಗೆ ಕಾಣಿಸಿದೆಯಾ? ಹಾಗಾದ್ರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರೂ ಇಲ್ಲ ಬಿಡಿ!
Vastu Tips: ವಾಸ್ತು ಶಾಸ್ತ್ರವು ಹಿಂದೂ ಪರಂಪರೆಯ ಪುರಾತನ ಶಾಸ್ತ್ರವಾಗಿದೆ. ಅದು ಮನುಷ್ಯನು ಸುಖದಿಂದ ಜೀವಿಸಲು ಅಗತ್ಯವಿರುವ ಸಲಹೆಗಳನ್ನು ನೀಡಿದೆ. ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣ ನೆಲೆಸುತ್ತದೆ.
ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಕುಟುಂಬದಲ್ಲಿ ಶಾಂತಿಯ ವಾತಾವರಣ ನೆಲೆಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಕೆಲವು ಶುಭ ಮತ್ತು ಅಶುಭಗಳನ್ನು ಹೇಳಲಾಗಿದೆ. ಅದರ ಪ್ರಕಾರ ಕೆಲವು ಸಂಕೇತಗಳು ಶುಭ ಸಮಾಚಾರವನ್ನು ತಂದರೆ, ಇನ್ನು ಕೆಲವು ಅಶುಭ ಸಮಾಚಾರಗಳನ್ನು ಕೇಳುವಂತೆ ಮಾಡುತ್ತದೆ.
ಇನ್ನು ಕೆಲವು ಮುನ್ಸೂಚನೆಯನ್ನು ಸಹ ಕೊಡುತ್ತದೆ. ಆದ್ದರಿಂದ ಅಂತಹ ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವಾಸ್ತು ಹೇಳುತ್ತದೆ. ಹಾಗಾದರೆ ಭವಿಷ್ಯದ ಜೀವನಕ್ಕೆ ಶುಭವನ್ನು ತರುವ ಸಂಕೇತಗಳು ಯಾವುವು ಎಂದು ತಿಳಿಯೋಣ.
ಇದನ್ನೂ ಓದಿ: Vastu Tipe : ಕನಸಿನ ಮನೆ ಕಟ್ಟಿಸೋಕೆ ಜಾಗ ಪರಿಶೀಲಿಸುತ್ತಿದ್ದೀರಾ ? ಒಂದು ನಿಮಿಷ ತಾಳಿ, ವಾಸ್ತುಶಾಸ್ತ್ರ ಏನು ಹೇಳುತ್ತೆ ?
Vastu Tips: ಶುಭ ತರುವ ಸಂಕೇತಗಳು
* ವಾಸ್ತು ಶಾಸ್ತ್ರದಲ್ಲಿ ಬೆಳಗಿನ ಜಾವ ದೇವಸ್ಥಾನದಲ್ಲಿ ಮೊಳಗುವ ಗಂಟೆ ಮತ್ತು ಶಂಖದ ನಾದವನ್ನು ಕೇಳುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಅದರಿಂದ ನಕಾರಾತ್ಮಕತೆ ದೂರವಾಗುತ್ತದೆ.
* ಮನೆಯಲ್ಲಿ ಇದ್ದಕ್ಕಿದ್ದಂತೆ ಆಕರ್ಷಕವಾದ ಪರಿಮಳ ಬರಲು ಪ್ರಾರಂಭಿಸಿದರೆ ಅದು ಶುಭದ ಸಂಕೇತವಾಗಿದೆ. ಇದರ ಅರ್ಥ ನೀವು ಕಷ್ಟಪಟ್ಟು ನಿರ್ವಹಿಸುತ್ತಿರುವ ಕೆಲಸ ಪೂರ್ಣವಾಗುತ್ತದೆ.
* ವಾಸ್ತು ಶಾಸ್ತ್ರದಲ್ಲಿ ಕೆಲವು ಪಕ್ಷಿಗಳನ್ನು ನೋಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗಿದೆ. ಅದರ ಪ್ರಕಾರ ನಿಮ್ಮ ಸುತ್ತಮುತ್ತ ಗಿಳಿ ಅಥವಾ ಗುಬ್ಬಿಯನ್ನು ನೋಡುವುದು ಲಾಭವನ್ನು ತರುತ್ತದೆ.
* ಯಾವುದಾದರು ಒಳ್ಳೆಯ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೊರಟಿರುವಾಗ ಹಸು ಅಥವಾ ಹಸುವಿನ ಹಾಲನ್ನು ಕುಡಿಯುತ್ತಿರುವ ಕರು ನೋಡಿದರೆ ಅದು ಶುಭದ ಸಂಕೇತವಾಗಿದೆ. ಇದರಿಂದ ನೀವು ಅಂದುಕೊಂಡ ಕೆಲಸ ಒಳ್ಳೆಯ ಪರಿಣಾಮವನ್ನು ಕೊಡುತ್ತದೆ.
* ಮನೆಯಿಂದ ಹೊರಡುವಾಗ ದೇವಸ್ಥಾನದಲ್ಲಿ ಪೂಜೆ ನಡೆಯುವುದನ್ನು ನೋಡಿದರೆ ಅದು ಶುಭ ಸಂಕೇತವಾಗಿದೆ. ಅದರ ಅರ್ಥ ನಿಮ್ಮ ಉದ್ದೇಶ ಯಶಸ್ವಿಯಾಗುತ್ತದೆ.
Vastu Tips: ಅಶುಭ ಸಂಕೇತಗಳು
* ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೊರಡುವಾಗ ಸೀನು ಬಂದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ. ಆದರೆ ಇದು ಎಲ್ಲ ಸಮಯದಲ್ಲೂ ಅನ್ವಯಿಸುವುದಿಲ್ಲ.
* ಮನೆಯಿಂದ ಹೊರಡುವಾಗ ಖಾಲಿ ಬಿಂದಿಗೆ ನೋಡುವುದು ಅಶುಭದ ಸಂಕೇತವೆಂದ ಪರಿಗಣಿಸಲಾಗಿದೆ. ಇದು ಕೆಲಸ ಅಪೂರ್ಣವಾಗುವ ಸೂಚನೆ ಎನ್ನಲಾಗುತ್ತದೆ.
* ರಸ್ತೆ ಅಥವಾ ನೀವು ನಡೆದು ಹೋಗುವ ದಾರಿಯಲ್ಲಿ ಸಿಕ್ಕ ಹಣ ಕೆಲವೊಮ್ಮೆ ಅಶುಭದ ಸಂಕೇತವಾಗಿರಬಹುದು. ಹಾಗೆ, ಹಣ ಸಿಕ್ಕಿದರೆ ಬಹಳ ಎಚ್ಚರಿಕೆಯಿಂದಿರಿ.
ಇದನ್ನೂ ಓದಿ: Aquarium Vastu Tips: ಅದೃಷ್ಟವನ್ನು ತರುವ ಅಕ್ವೇರಿಯಂನ ಅಂದದ ಮೀನುಗಳು
(These are the Shubh signs and Ashubh signs according to vastu Shatra in Kannada)



