Vastu Tipe : ಕನಸಿನ ಮನೆ ಕಟ್ಟಿಸೋಕೆ ಜಾಗ ಪರಿಶೀಲಿಸುತ್ತಿದ್ದೀರಾ ? ಒಂದು ನಿಮಿಷ ತಾಳಿ, ವಾಸ್ತುಶಾಸ್ತ್ರ ಏನು ಹೇಳುತ್ತೆ ?

Vastu Tips dream home : ಮನೆಯೆಂಬುದು ಪ್ರತಿಯೊಬ್ಬರ ಕನಸು. ಅದು ಕೇವಲ ಇಟ್ಟಿಗೆ, ಸಿಮೆಂಟ್‌ಗಳಿಂದ ನಿರ್ಮಿಸುವ ಕಟ್ಟಡವಂತೂ ಅಲ್ಲವೇ ಅಲ್ಲ. ಮನಸ್ಸಿನ ಆಳದಲ್ಲಿ ಗಟ್ಟಿಯಾಗಿ ಬೇರೂರಿರುವ ಭಾವನೆ. ಪ್ರತಿಯೊಬ್ಬರೂ ಕಟ್ಟುವ ಮನೆ, ಕೇವಲ ಅವರಿಗಾಗಿ ಮಾತ್ರ ಆಗಿರುವುದಿಲ್ಲ.

ಅಲ್ಲಿ ಅವರ ಮುಂದಿನ ಪೀಳಿಗೆಯವರೂ ಬಾಳಿ ಬದುಕಬೇಕೆಂಬ ಆಸೆಯಿರುತ್ತದೆ. ಅಂತಹ ಮನೆಯನ್ನು ಎಲ್ಲಿ ಕಟ್ಟಬೇಕು? ಯಾವ ಜಾಗ ಸೂಕ್ತವಾಗಿರುತ್ತದೆ ಎಂಬುದನ್ನು ಮನೆ ಕಟ್ಟುವ ಪ್ರತಿಯೊಬ್ಬರು ಪರಿಶೀಲಿಸಲೇ ಬೇಕಾದ ವಿಷಯ.

ಯಾವುದೋ ಜಾಗವಿದೆ ಎಂದು ಆ ಜಾಗದಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಮೊದಲು ಅದು ಮನೆ ಕಟ್ಟಲು ಯೋಗ್ಯವಾಗಿದೆಯೇ? ಅಲ್ಲಿ ವಾಸಿಸಿದ ಮೇಲೆ ಅದು ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆಯೇ ಎಂದು ಪರೀಕ್ಷಿಸುವುದು ಬಹಳ ಮುಖ್ಯ.

ವಾಸ್ತು ಶಾಸ್ತ್ರವು, ಮನೆ ಕಟ್ಟುವ ಮೊದಲು ಭೂಮಿಯನ್ನು ಪರೀಕ್ಷಿಸುವುದು ಬಹಳ ಮುಖ್ಯ ಎಂದು ಹೇಳುತ್ತದೆ. ಹಾಗಾದರೆ ಮನೆ ಕಟ್ಟಲು ಯಾವ ರೀತಿಯ ಜಾಗವಿರಬೇಕು ಎಂದು ನೋಡೋಣ.

Also Read : ಗೃಹಾಲಂಕಾರಿ ವಸ್ತುಗಳು ಮನೆಯ ಅಂದದ ಜೊತೆಗೆ ಹೆಚ್ಚುತ್ತೆ ಸಮೃದ್ಧಿ

Vastu Tips dream home : ಮನೆ ಕಟ್ಟಲು ಯಾವ ಜಾಗ ಸೂಕ್ತ?

ನೀವು ಮನೆ ಕಟ್ಟಲು ಹೊಸ ಜಾಗ ಖರೀದಿಸುತ್ತಿದ್ದರೆ ಅಥವಾ ಇದ್ದ ಜಾಗದಲ್ಲಿಯೇ ಮನೆ ಕಟ್ಟುವ ಯೋಚನೆಯಿದ್ದರೆ, ಮೊದಲು ಅಲ್ಲಿ ನಿರ್ಮಿಸುವ ಮನೆ ನಿಮಗೆ ಲಾಭ ತಂದು ಕೊಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಿರಿ.

ಅದಕ್ಕೆ ಹಲವು ಮಾರ್ಗಗಳಿವೆ. ನೀವು ಮನೆ ಕಟ್ಟಲು ಆರಿಸಿಕೊಳ್ಳುತ್ತಿರುವ ಜಾಗದಲ್ಲಿ ಹಣ್ಣು ಮತ್ತು ಹೂವಿನ ಗಿಡಗಳಿದ್ದರೆ ಒಳ್ಳೆಯದು. ಅಲ್ಲಿ ಮನೆ ಕಟ್ಟುವುದರಿಂದ ಸಂತತಿ ಮತ್ತು ಸಂಪತ್ತು ಹೆಚ್ಚುತ್ತದೆ.

ಚಿಕ್ಕ ಪುಟ್ಟ ಮರಗಳು, ಹುಲ್ಲು, ಪೊದೆ ಇರುವ ಭೂಮಿ ಸಾಮಾನ್ಯ ಭೂಮಿಯಾಗಿರುತ್ತದೆ. ಅಂತಹ ಜಾಗದಲ್ಲಿ ಮನೆ ಕಟ್ಟಬಹುದು.

ಆದರೆ ಮರಳು ತುಂಬಿರುವ, ಬಂಜರು ಭೂಮಿಯಲ್ಲಿ ಮನೆ ಕಟ್ಟಬಾರದು. ಅಂತಹ ನೆಲದ ಮೇಲೆ ಕಟ್ಟಲಾದ ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ಎಂದಿಗೂ ಸಿಗುವುದಿಲ್ಲ.

ಮನೆ ಕಟ್ಟುವ ಮೊದಲು ಆ ಜಾಗ ನಿಮಗೆ ಲಾಭವನ್ನು ತರುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಲು ಹೀಗೂ ಮಾಡಬಹುದು. ನೀವು ಮನೆ ಕಟ್ಟಲು ಬಯಸಿದ ಜಾಗದಲ್ಲಿ ಒಂದು ಅಡಿ ಉದ್ದ, ಒಂದು ಅಡಿ ಅಗಲದ ಗುಂಡಿಯನ್ನು ತೋಡಿ, ಮಣ್ಣನ್ನು ಒಂದು ಕಡೆ ಶೇಖರಿಸಿ.

Also Read : ವಾಸ್ತು ಪ್ರಕಾರ ಮಲ್ಲಿಗೆ ಗಿಡ ಹೀಗೆ ಬೆಳೆಸಿ: ನಿಮ್ಮ ಮನೆಯ ಆಂತರಿಕ ಸಮಸ್ಯೆ ದೂರವಾಗಿ, ಲಕ್ಷ್ಮಿ ದೇವಿ ನೆಲೆಸುತ್ತಾಳೆ

ನಂತರ ಆ ಗುಂಡಿಯನ್ನು ಅದೇ ಮಣ್ಣಿನಿಂದ ತುಂಬಿಸಿ. ಮಣ್ಣು ಉಳಿಯದಿದ್ದರೆ ಆ ಜಾಗವನ್ನು ಮನೆ ಕಟ್ಟಲು ಆಯ್ಕೆ ಮಾಡಿಕೊಳ್ಳಬೇಡಿ. ಅಂತಹ ಭೂಮಿಯಲ್ಲಿ ನೀವು ಮನೆ ಕಟ್ಟುವುದರಿಂದ ಹಣ ಕಳೆದುಕೊಳ್ಳುತ್ತೀರಿ ಮತ್ತು ರೋಗಗಳಿಗೆ ತುತ್ತಾಗುತ್ತೀರಿ.

ಶೇಖರಿಸಿಟ್ಟ ಮಣ್ಣು ಆ ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿದರೆ ಆ ಜಾಗವು ಸಾಮಾನ್ಯ ಜಾಗವೆಂದು ತಿಳಿಯಿರಿ. ಅಲ್ಲಿ ಮನೆ ಕಟ್ಟುವುದರಿಂದ ಹೆಚ್ಚೇನು ಪ್ರಯೋಜನವಿಲ್ಲ ಅಥವಾ ನಷ್ಟವೂ ಆಗುವುದಿಲ್ಲ.

ಗುಂಡಿ ತುಂಬಿದ ನಂತರ ಸ್ವಲ್ಪ ಮಣ್ಣು ಉಳಿದರೆ ಆ ಜಾಗವ ಅತ್ಯುತ್ತಮವಾಗಿರುತ್ತದೆ. ಅಲ್ಲಿ ಕಟ್ಟಿದ ಮನೆಯಲ್ಲಿ ಸಂತೋಷ, ಸಂಪತ್ತು ಯಾವಾಗಲೂ ಇರುತ್ತದೆ.

Vastu Tips dream home : ಭೂಮಿಯ ಗುಣಮಟ್ಟವನ್ನು ಹೀಗೂ ಪರೀಕ್ಷಿಸಬಹುದು

ನೀವು ಮನೆ ಕಟ್ಟಲು ಆಯ್ದುಕೊಂಡ ಜಾಗದಲ್ಲಿ ಸೂರ್ಯಾಸ್ತದ ಸಮಯದಲ್ಲಿ 1.5 ಅಡಿ ಆಳದ ಗುಂಡಿಯನ್ನು ತೆಗೆದು ಅದನ್ನು ನೀರಿನಿಂದ ತುಂಬಿಸಿ. ಮರುದಿನ ಬೆಳಿಗ್ಗೆ ಆ ಗುಂಡಿಯಲ್ಲಿ ನೀರು ಇದೆಯೇ ಎಂದು ಪರೀಕ್ಷಿಸಿ.

ನೀರು ಇದ್ದರೆ ಆ ಜಾಗ ಮನೆ ಕಟ್ಟಲು ಉತ್ತಮ. ನೀರು ಸಂಪೂರ್ಣವಾಗಿ ಇಂಗಿ, ಮಣ್ಣು ತೇವಾಂಶದಿಂದ ಕೂಡಿದ್ದರೆ ಅದು ಸಾಮಾನ್ಯ ಜಾಗ.

ಆದರೆ ನೀರು ಸಂಪೂರ್ಣವಾಗಿ ಬತ್ತಿ ಹೋಗಿ, ಅಲ್ಲಿ ಬಿರುಕುಗಳು ಕಂಡು ಬಂದರೆ ಅಂತಹ ಸ್ಥಳದಲ್ಲಿ ಎಂದಿಗೂ ಮನೆಯನ್ನು ನಿರ್ಮಿಸಬೇಡಿ. ಅಲ್ಲಿ ಕಟ್ಟಿದ ಮನೆಯು ಮಾನಸಿಕ ನೆಮ್ಮದಿ ನೀಡುವುದಿಲ್ಲ. ಜೀವನದಲ್ಲಿ ಯಾವುದೇ ಪ್ರಗತಿಯೂ ಇರುವುದಿಲ್ಲ.

Vastu Tips Are you buying a plot to build your dream home then follow these vastu rules n Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories