Tamarind Health Benefits :ಹುಣಸೆ ಹಣ್ಣಿನ ‘ಸಿಹಿ’ ಗುಣಗಳ ಕುರಿತು ನಿಮಗೆ ತಿಳಿದಿದೆಯೇ !

ಸಿಹಿ ಮತ್ತು ಹುಳಿಯಾದ ಹುಣಸೆಹಣ್ಣು ಭಾರತದ ಪ್ರತಿ ಮನೆಯ ಅಡಿಗೆಮನೆಯಲ್ಲಿ ಇದ್ದೇ ಇರುತ್ತದೆ. ತರಕಾರಿ ಸಾಂಬಾರಿನಲ್ಲಿರಲಿ ಅಥವಾ ಸ್ಕ್ರೀಟ್ ಚಾಟ್ ಆಗಿರಲಿ ಎಲ್ಲಾ ಕಡೆಯೂ ಈ ಹುಣಸೆಹಣ್ಣು ಅತ್ಯಗತ್ಯ. ಹುಣಸೆಹಣ್ಣು ರುಚಿಕರವಾಗಿರಿರುವುದಲ್ಲದೆ ನಮ್ಮ ದೇಹಕ್ಕೆ ಅನೇಕ ರೀತಿಯ ವಿಟಮಿನ್ ಗಳನ್ನೂ, ಖನಿಜಾಂಶ ಗಳನ್ನೂ ನೀಡುತ್ತದೆ. ಪ್ರೋಟೀನ್, ಫೈಬರ್, ವಿಟಮಿನ್ ಬಿ 1, ಬಿ 3 ಮತ್ತು ಪೊಟ್ಯಾಸಿಯಮ್ ಜೊತೆಗೆ ಹೆಚ್ಚಿನ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶವನ್ನು ಹೊಂದಿದ ಇದು ನಮ್ಮ ಡಯಟ್ ನಲ್ಲಿ ಇರಲೇಬೇಕು. ಆದರೆ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶದಿಂದಾಗಿ, ರಕ್ತದಲ್ಲಿನ ಗ್ಲೂಕೋಸ್ ಸ್ಪೈಕ್‌ಗಳು ಆಗಬಹುದಾದ ಕಾರಣ ಮಧುಮೇಹ ರೋಗಿಗಳಿಗೆ ಹುಣಸೆಹಣ್ಣನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ಶಿಫಾರಸು ಮಾಡಲಾಗುತ್ತದೆ(Tamarind Health Benefits).

ತೂಕ ಇಳಿಕೆ:

ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದ್ದರೂ ಹುಣಸೆ ಹಣ್ಣಿನಲ್ಲಿ ಕೊಬ್ಬಿನ ಅಂಶ ಇರುವುದಿಲ್ಲ. ಹೆಚ್ಚುವರಿಯಾಗಿ, ಅದರ ಫ್ಲೇವನಾಯ್ಡ್ಗಳು ಮತ್ತು ಪಾಲಿಫಿನಾಲ್ಗಳು ತೂಕ ನಷ್ಟವನ್ನು ಉಂಟುಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಈ ಹಣ್ಣಿನಲ್ಲಿರುವ ಎಂಜೈಮ್ ಹಸಿವನ್ನು ಕಮ್ಮಿ ಮಾಡುತ್ತವೆ ಮತ್ತು ಕ್ಯಾಲೋರಿ ಸೇವನೆಯನ್ನು ತಗ್ಗಿಸುತ್ತವೆ.

ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ :

ಮಾಲಿಕ್, ಟಾರ್ಟಾರಿಕ್ ಮತ್ತು ಪೊಟ್ಯಾಸಿಯಮ್ ಅಂಶ ಹೇರಳವಾಗಿ ಹುಣಸೇಹಣ್ಣಿನಲ್ಲಿ ಇರುವ ಕಾರಣ ಇದು ಪಚನಕ್ರಿಯನ್ನು ಸುಲಭ ಮಾಡುತ್ತದೆ ಇದರೊಂದಿಗೆ ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಇದು ಅತಿಸಾರಕ್ಕೆ ಪ್ರಬಲ ಪರಿಹಾರವಾಗಿದೆ.

ಆರೋಗ್ಯಕರ ಹೃದಯ:

ಹುಣಸೆಹಣ್ಣಿನಲ್ಲಿರುವ ಫ್ಲೇವನಾಯ್ಡ್‌ಗಳು ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆಯ ಅಪಾಯವು ಕಮ್ಮಿಯಾಗುತ್ತದೆ . ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಅಲ್ಸರ್ ಗೆ ರಾಮಬಾಣ :

ಸಣ್ಣ ಕರುಳು ಮತ್ತು ಹೊಟ್ಟೆಯ ಒಳಪದರದಲ್ಲಿ ಬೆಳೆಯುವ ಹುಣ್ಣುಗಳು ಅತ್ಯಂತ ನೋವನ್ನು ನೀಡಬಹುದು ಮತ್ತು ಆಹಾರವು ಸರಿಯಾಗಿ ಜೀರ್ಣವಾಗದೆ ಇರಬಹುದು. ಹುಣಸೆಹಣ್ಣು ಈ ಹುಣ್ಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕರುಳಿನ ಆರೋಗ್ಯವನ್ನು ಪಡೆಯಲು ಸಹಕಾರಿ.

ಲಿವರ್ ನ ರಕ್ಷಣೆ :

ಹುಣಸೆಹಣ್ಣು ಲಿವರ್ (ಯಕೃತ್ತಿ)ನ ಬಗ್ಗೆಯೂ ಕಾಳಜಿ ವಹಿಸುತ್ತದೆ. ಹುಣಸೆಹಣ್ಣಿನ ನಿಯಮಿತ ಸೇವನೆಯಿಂದಾಗಿ ಲಿವರ್ ನ ಕೊಬ್ಬನ್ನು ಕಮ್ಮಿ ಮಾಡಬಹುದು.

ಇದನ್ನೂ ಓದಿ :Rainbow Diet : ರೈನ್ ಬೋ ಡಯಟ್ ಎಂದರೇನು? ಈ ಕಲರ್ ಫುಲ್ ಡಯಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

(Tamarind Health Benefits)

Comments are closed.