ಚಂದ್ರಘಂಟೇಯಾಗಿ ಪೂಜಿತಳಾಗುತ್ತಾಳೆ ತಾಯಿ : ನೀಲಿ ಬಣ್ಣದ ವಸ್ತ್ರ ಪೂಜೆಗೆ ಶ್ರೇಷ್ಠ

Navaratri: ಇಂದು ನವರಾತ್ರಿ(Navaratri) ಮೂರನೇ ದಿನ ದೇವಿ ಲಕ್ಷ್ಮಿ ಸ್ವರೂಪಳಾಗಿ ಕಾಣುವ ತಾಯಿಯನ್ನು ಚಂದ್ರಘಂಟ ರೂಪದಲ್ಲಿ ಪೂಜಿಸಲಾಗುತ್ತದೆ. ಹೆಸರೇ ಹೇಳುವಂತೆ ಚಂದ್ರನನ್ನು ಘಂಟೆಯ ರೀತಿಯಲ್ಲಿ ಧರಿಸಿದವಳು ಈಕೆ. ಅಥವಾ ಚಂದ್ರನಲ್ಲಿ ಸೋಲಿಸುವ ಅಂದವನ್ನು ಹೊಂದಿದವಳು ಅಂತಾನೂ ಕೆಲವು ಕವಿಗಳು ವರ್ಣಿಸಿದ್ದಾರೆ

ಅಪದುಧಾರಣೀ ತ್ವಂಹಿ ಆದ್ಯಾ ಶಕ್ತಿಃ ಶುಭಾಪರಾ
ಅಣಿಮಾದಿ ಸಿದ್ಧಿದಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ಅಂದರೆ ಕಷ್ಟದ ಸಮಯದಲ್ಲಿ ಉದ್ಧರಿಸುವವಳು ನೀನೆ ಅಮ್ಮ ಅಷ್ಟ ಸಿದ್ದಿಯನ್ನು ಹೊಂದಿದ ನಿನಗೆ ಪ್ರಣಾಮ ಮಾಡುತ್ತೇನೆ ಎಂದರ್ಥ. ಹೌದು, ಈ ರೂಪದಲ್ಲಿ ತಾಯಿ ಸರ್ವ ಅಲಂಕಾರ ಭೂಷಿತೆಯ ರೂಪದಲ್ಲಿ ದರ್ಶನ ನೀಡುತ್ತಾಳೆ. ತಾಯಿ 10 ಕೈ ಹೊಂದಿದ್ದು ಕಮಂಡಲ, ಜಪಮಾಲೆ ಸೇರಿದಂತೆ 10 ತರಹದ ಆಯುಧಗಳನ್ನು ಹಿಡಿದು ಸುಶೋಭಿತಳಾಗಿದ್ದಾಳೆ

.ಮೊದಲ ದಿನ ಸಣ್ಣ ಮಗುವಾಗಿ ಹಾಗೂ ಎರಡನೇ ದಿನ ಬ್ರಹ್ಮಾಚಾರಣಿಯಾಗಿ ಕಾಣಿಸಿಕೊಂಡ ತಾಯಿ ಮೂರನೇ ದಿನ ಒಬ್ಬ ಸಶಕ್ತ ಹೆಣ್ಣಾಗಿ ದರ್ಶನ ನೀಡುತ್ತಾಳೆ. ಇಲ್ಲಿ ಮಾತೆಯು ಅಂದ ಅಲಂಕಾರಗಳಲ್ಲಿ ಹಾಗೂ ದಿವ್ಯತೆಯಲ್ಲಿ ಯಾವ ಚಂದ್ರನಂತಹ ಅಂದವಾದ ವಸ್ತುವು ಅಂದವಾಗಿ ಕಾಣುತ್ತಿಲ್ಲ ಎಂಬಂತೆ ಹುಲಿಯ ಮೇಲೆ ಸುಶೋಭಿತವಾಗಿ ಕುಳಿತಿರುವುದು ನೋಡೋಕೆ ಒಂದು ಚಂದ.

ಇನ್ನು ಈ ರೂಪದ ಕುರಿತ ಕಥೆಯನ್ನು ಹೇಳುವುದಾದರೆ ಇದು ಶಿವನನ್ನು ವಿವಾಹ ಆಗೋಕೆ ಹೊರಟಿರುವ ತಾಯಿ ರೂಪ ಅಂತಾನೆ ನಂಬಲಾಗುತ್ತದೆ. ಯಾವಾಗ ತಪಸ್ಸಿನಿಂದ ಶಿವನನ್ನು ಒಲಿಸಿ, ಶಿವನನ್ನು ತನ್ನ ತವರು ಮನೆಗೆ ಬಂದು ಹೆಣ್ಣು ಕೇಳಬೇಕೆಂದು ಹೇಳಿದಳೋ, ಆಗ ಶಿವ ಪರಮಾತ್ಮ ಸಪ್ತ ಋಷಿಗಳನ್ನು ಕಳುಹಿಸಿ ಪಾರ್ವತಿಯ ಕನ್ಯಾಭಿಕ್ಷೆಯನ್ನು ಕೇಳಿದರಂತೆ. ಅದರಂತೆ ಶಿವ ಪಾರ್ವತಿಯ ಮದುವೆ ನಿಶ್ಚಯವಾಯಿತು. ಆದರೆ ಸ್ಮಶಾನ ವಾಸಿಯಾದ ಶಿವನನ್ನು ನೋಡಿದ ಪಾರ್ವತಿಯ ತಾಯಿ ಮೂರ್ಚಿತರಾದರಂತೆ. ಆಗ ದೇವಿ ಪಾರ್ವತಿಯು ಶಿವ ಪರಮಾತ್ಮನನ್ನು ರಾಜಕುಮಾರನ ರೀತಿಯಲ್ಲಿ ಕಾಣಿಸಿಕೊಳ್ಳುವಂತೆ ಬೇಡಿದರಂತೆ. ಅದಕ್ಕೆ ಒಪ್ಪಿದ ಶಿವ ಸುಂದರ ಶಿವನಾಗಿ ಹಾಗೂ ತಾಯಿ ಚಂದ್ರ ಘಂಟೆಯ ಅಂದರೆ ಚಂದ್ರನಕ್ಕಿಂತ ಸುಂದರಲಾಗಿ ವಿವಾಹವಾದರೂ ಎಂಬುದಾಗಿದೆ.

ಇನ್ನೊಂದು ಕಥೆಯ ಪ್ರಕಾರ ತಾಯಿ ಮೊದಲ ಬಾರಿಗೆ ಕೈಲಾಸಕ್ಕೆ ಬಂದಾಗ ಅಸ್ತವ್ಯಸ್ತವಾಗಿದ್ದ ಶಿವಗಣ ಹಾಗೂ ಕೈಲಾಸವನ್ನು ನೋಡಿ ಗಾಬರಿಯಾದಂತೆ. ಆದರೆ ಇದರಿಂದ ವಿಚಲಿತರಾಗದ ಮಹಾತಾಯಿ ಪಾರ್ವತಿಯು ಶಿವ ಗಣಗಳನ್ನು ತನ್ನ ಮಕ್ಕಳಂತೆ ಸಂಸ್ಕಾರಯುತರನ್ನಾಗಿ ಮಾಡಿ ಶಿವ ಪೂಜೆ ಮಾಡುವುದನ್ನು ಕಲಿಸಿದರಂತೆ. ಆಗ ಬಾರಿಸಿದ ಘಂಟಾನಾದವು ಹಲವು ರಾಕ್ಷರ ಮೃತ್ಯುವಿಗೆ ಕಾರಣವಾಯಿತು. ಇದೇ ಕಾರಣಕ್ಕೆ ಆಕೆಯನ್ನು ಚಂದ್ರಘಂಟ ಎಂದು ಕರೆಯುತ್ತಾರೆ ಎಂಬುದು ನಂಬಿಕೆ.

ಇದನ್ನೂ ಓದಿ: ನವರಾತ್ರಿಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿ; ದುರ್ಗಾ ದೇವಿಯ ಜೊತೆಗೆ ಶನಿ ದೇವರ ಆಶೀರ್ವಾದ ಪಡೆಯಿರಿ

ಇನ್ನು ಚಂದ್ರಘಂಟಾ ದೇವಿಯು ಶುಕ್ರನ ಅಧಿಪತಿಯಾಗಿದ್ದಾಳೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಅಂದ್ರೆ ಸಿರಿ ಸಂಪತ್ತು ಸಮೃದ್ಧಿ ಎಂದರ್ಥ .ಇಂದು ತಾಯಿಯ ಪೂಜಿಸಿದರೆ ದರಿದ್ರಗಳು ನಾಶವಾಗಿ ಸುಖ, ಸಮೃದ್ಧಿಗಳು ನಮ್ಮನ್ನು ಆರಿಸಿಕೊಂಡು ಬರುತ್ತವೆ ಎಂಬ ನಂಬಿಕೆ ಇದೆ. ಸ್ವಾತಿ ಅನುರಾಧ ನಕ್ಷತ್ರದಲ್ಲಿದವರು ಈ ತಾಯಿಯನ್ನು ಪ್ರಾರ್ಥಿಸಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ.
ಆಚರಣೆ ಹೇಗೆ?

ಇದನ್ನೂ ಓದಿ: Navaratri: ಇಂದಿನಿಂದ ನವರಾತ್ರಿ ಸಂಭ್ರಮ – ಶೈಲಪುತ್ರಿಯಾಗಿ ದೇವಿಯನ್ನು ಆರಾಧಿಸುವುದು ಹೇಗೆ ?

ಇನ್ನೂ ಚಂದ್ರಘಂಟಾ ದೇವಿಯ ಆರಾಧನೆ ಕುರಿತು ಹೇಳೋದಾದರೆ, ಈಕೆ ಮಣಿಪುರ ಚಕ್ರದಲ್ಲಿ ನೆಲೆ ನಿಂತಿದ್ದಾಳೆ. ಈ ಚಕ್ರ ಅಗ್ನಿಸತ್ವವನ್ನು ಹೊಂದಿರುವ ಚಕ್ರ. ಇದನ್ನು ಊರ್ಜಿತ ಮಾಡಿಕೊಂಡಲ್ಲಿ ನಮ್ಮ ಅಂತಃಶಕ್ತಿ ಜಾಗೃತವಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಸಾಮಾನ್ಯ ರೀತಿಯಲ್ಲಿ ತಾಯಿಯನ್ನು ಆರಾಧಿಸುವವರು ನೀಲಿ ಬಣ್ಣದ ಸೀರೆಯ ಜೊತೆಗೆ ತಾಯಿಗೆ ಬಾಗೀನವನ್ನು ಅರ್ಪಿಸಬಹುದು. ದೇವರಿಗೆ ಪಂಚಾಮೃತವನ್ನು ಇಟ್ಟು ಪೂಜೆ ಮಾಡಿದರೆ ಉತ್ತಮ. ಇನ್ನು ವಯೋ ವೃದ್ಧ ದಂಪತಿಗಳನ್ನು ಕರೆದು ಪಾದ ಪೂಜೆ ಮಾಡಿ ಬಾಗೀನ ನೀಡಿದ್ರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.

Vandana kommunje | ವಂದನಾ ಕೊಮ್ಮುಂಜೆ

Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories