Dale Steyn : ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ವೇಗಿ ಡೇಲ್‌ ಸ್ಟೇನ್

ಸೌತ್‌ಆಫ್ರಿಕಾ : ವಿಶ್ವ ಕ್ರಿಕೆಟ್‌ ಲೋಕದಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದ ದಕ್ಷಿಣ ಆಫ್ರಿಕಾದ ವೇಗಿ‌ ಡೇಲ್‌ ಸ್ಟೇನ್ ಕ್ರಿಕೆಟ್‌ ವೃತ್ತಿ ಬದುಕಿಗೆ ವಿವಾದ ಘೋಷಿಸಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸುವ ಕುರಿತು ಡೇಲ್‌ ಸ್ಟೇನ್ ಟ್ವೀಟ್‌ ಮಾಡಿದ್ದಾರೆ.

ಒಟ್ಟು 93 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಡೇಲ್‌ ಸ್ಟೇನ್ 439 ವಿಕೆಟ್‌ ಪಡೆದಿದ್ದಾರೆ. 125 ಏಕದಿನ ಪಂದ್ಯಗಳ ಪೈಕಿ 196 ವಿಕೆಟ್‌ ಪಡೆದಿದ್ರೆ, 47 ಟಿ20 ಪಂದ್ಯಗಳನ್ನು ಆಡಿದ್ದು, 64 ವಿಕೆಟ್‌ ಕಬಳಿಸಿದ್ದಾರೆ. ಅಲ್ಲದೇ ಐಪಿಎಲ್‌ ಪಂದ್ಯಾವಳಿಯಲ್ಲಿಯೂ ಪಾಲ್ಗೊಂಡಿದ್ದ ಸ್ಟೈನ್‌ 95 ಪಂದ್ಯಗಳ ಪೈಕಿ 97 ವಿಕೆಟ್‌ ಪಡೆಯುವ ಮೂಲಕ ಸಾಧನೆಯನ್ನು ಮಾಡಿದ್ದಾರೆ.

37 ವರ್ಷದ ಡೇಲ್‌ ಸ್ಟೇನ್ 2004 ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಟೆಸ್ಟ್‌ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಸೌತ್‌ ಆಫ್ರಿಕಾ ತಂಡದ ಮುಖ್ಯ ಬೌಲರ್‌ ಆಗಿ ಗುರುತಿಸಿಕೊಂಡಿದ್ದ ಡೇಲ್‌ ಸ್ಟೇನ್ ತಮ್ಮ ಬೌಲಿಂಗ್‌ ಶೈಲಿಯ ಮೂಲಕವೇ ವಿಶ್ವದ ಗಮನ ಸೆಳೆದಿದ್ದಾರೆ. ಹಲವು ಆಟಗಾರರಂತೂ ಇವರ ಬೌಲಿಂಗ್‌ಗೆ ಬ್ಯಾಟ್‌ ಬೀಸಲು ಭಯ ಪಡುತ್ತಿದ್ದರು.

ದಕ್ಷಿಣ ಆಫ್ರಿಕಾ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಟೈಟನ್ಸ್‌, ಡೆಕ್ಕನ್‌ ಚಾರ್ಜಸ್‌ ಹೈದ್ರಾಬಾದ್‌, ಗುಜರಾತ್‌ ಲಯನ್ಸ್‌, ಜಮೈಕಾ ತಲೈವಾಸ್‌, ಕೇಪ್‌ ಟೌನ್‌ ಕಿಂಗ್‌ ರೈಡರ್ಸ್‌, ಹ್ಯಾಂಪ್‌ಶೈರ್‌, ಮೆಲ್ಬೋರ್ನ್‌ ಸ್ಟಾರ್ಸ್‌, ಇಸ್ಲಾಮಾಬಾದ್‌ ಯುನೈಟೆಡ್‌, ಕ್ಯಾಂಡಿ ಟಸ್ಕರ್ಸ್ಸ್‌ ಸೇರಿದಂತೆ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಡೇಲ್‌ ಸ್ಟೇನ್‌ ಕ್ರಿಕೆಟ್‌ ಬದುಕಿಗೆ ವಿವಾಯ ಘೋಷಿಸುತ್ತಿದ್ದಂತೆಯೇ ಹಲವು ದಿಗ್ಗಜರು ಶುಭ ಕೋರಿದ್ದಾರೆ. ಅಲ್ಲದೇ ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ : ಖ್ಯಾತ ಕ್ರಿಕೆಟ್‌ ತರಬೇತುದಾರ ವಾಸು ಪರಾಂಜಪೆ ನಿಧನ : ಗಾವಾಸ್ಕರ್‌ ರಿಂದ ರೋಹಿತ್‌ ಶರ್ಮಾವರೆಗೂ ತರಬೇತಿ

ಇದನ್ನೂ ಓದಿ : ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಹೇಳಿದ್ದೇನು ಗೊತ್ತಾ ?

( Famous Cricketer Dale Steyn announces retirement from all forms of cricket)

Comments are closed.