India WTC final: ಭಾರತ ಈ ಬಾರಿಯೂ ಟೆಸ್ಟ್ ವಿಶ್ವಕಪ್ ಗೆಲ್ಲೋದು ಡೌಟ್.. ಕಾರಣ ಇಲ್ಲಿದೆ..!

ಬೆಂಗಳೂರು: (India WTC final) ಐಪಿಎಲ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final – WTC 2023)ಪಂದ್ಯಕ್ಕಾಗಿ ಇಂಗ್ಲೆಂಡ್’ಗೆ ಹಾರಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯ ಜೂನ್ 7ರಿಂದ 11ರವರೆಗೆ ಲಂಡನ್’ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

2021ರ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದ ಭಾರತ ಈ ಬಾರಿ ಟೆಸ್ಟ್ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಭಾರತದ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಕಾರಣ ಎದುರಾಳಿ ಬಲಿಷ್ಠ ಆಸ್ಟ್ರೇಲಿಯಾ. ಹಾಗಂತ ಕಾಂಗರೂಗಳೇನೂ ಸೋಲಿಸಲಾಗದಷ್ಟು ಅತಿ ಬಲಾಢ್ಯರೇನಲ್ಲ. ಆದ್ರೆ ಭಾರತ ತಂಡ ಮ್ಯಾಚ್ ವಿನ್ನರ್’ಗಳ ಬಲವಿಲ್ಲದೆ WTC ಫೈನಲ್ (India WTC final ) ಪಂದ್ಯದಲ್ಲಿ ಆಡಲಿದೆ.

ಈಗಾಗ್ಲೇ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah), ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ (Shreyas Iyer) ಗಾಯದ ಕಾರಣ WTC ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬುಮ್ರಾ ಮತ್ತು ಶ್ರೇಯಸ್ ಅಯ್ಯರ್ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾದಿದ್ರೆ, ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಗಾಯದ ಮೇಲೆ ಬರೆ ಎಳೆದಂತೆ ಈಗ ಅನುಭವಿ ಓಪನರ್ ಕೆ.ಎಲ್ ರಾಹುಲ್ (KL Rahul) ಮತ್ತು ಎಡಗೈ ವೇಗಿ ಜೈದೇವ್ ಉನಾದ್ಕಟ್ (Jaidev Unadkat) ಕೂಡ WTC ಫೈನಲ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಸೋಮವಾರ ಲಕ್ನೋದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಬಲ ತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಗಾಯದ ಪ್ರಮಾಣ ಗಂಭೀರವಾಗಿದ್ದರೆ ಟೆಸ್ಟ್ ವಿಶ್ವಕಪ್’ನಲ್ಲಿ ರಾಹುಲ್ ಆಡುವುದು ಅನುಮಾನ. ಇನ್ನು ಎಡವೈ ವೇಗಿ ಜೈದೇವ್ ಉನಾದ್ಕಟ್ ನೆಟ್ಸ್’ನಲ್ಲಿ ಬೌಲಿಂಗ್ ನಡೆಸುವ ವೇಳೆ ಮುಗ್ಗರಿಸಿ ಬಿದ್ದು ಎಡಗಾಲಿಗೆ ಗಾಯಮಾಡಿಕೊಂಡಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯಕ್ಕೆ ಪ್ರಕಟಿಸಲಾಗಿರುವ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜೈದೇವ್ ಉನಾದ್ಕಟ್.

ಇದನ್ನೂ ಓದಿ : Shreyas Iyer Tulunadu link : ತುಳುನಾಡಿನ ದೈವಾರಾಧನೆ ಬಗ್ಗೆ ಶ್ರೇಯಸ್ ಅಯ್ಯರ್ ಅಚ್ಚರಿಯ ಮಾತು, ಮುಂಬೈಕರ್’ಗೂ ತುಳುನಾಡಿದೂ ಇರೋ ಸಂಬಂಧ ಎಂಥದ್ದು ಗೊತ್ತಾ?

ಇದನ್ನೂ ಓದಿ : Mohammed Shami: ವೇಶ್ಯೆಯರೊಂದಿಗೆ ಸಂಬಂಧ ಆರೋಪ, ಟೀಮ್ ಇಂಡಿಯಾ ವೇಗಿ ಶಮಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪತ್ನಿ

Comments are closed.