Pandya on Samson : “ಇದು ನನ್ನ ತಂಡ, ನನ್ನ ನಿರ್ಧಾರ.. ಸ್ಯಾಮ್ಸನ್’ಗೆ ಸಿಗದ ಚಾನ್ಸ್, ಕ್ಯಾಪ್ಟನ್ ಪಾಂಡ್ಯ ಖಡಕ್ ಉತ್ತರ

ನೇಪಿಯರ್ : ನ್ಯೂಜಿಲೆಂಡ್ ವಿರುದ್ಧದ ಟಿ20 (India vs New Zeeland T20 series) ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದುಕೊಂಡಿದ್ದು, (Pandya on Samson) ಶುಕ್ರವಾರ ಆರಂಭವಾಗುವ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಇದೇ ವೇಳೆ ಟಿ20 ಸರಣಿಯಲ್ಲಿ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್’ಗೆ (Sanju Samson) ಅವಕಾಶ ಸಿಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ರಿಷಭ್ ಪಂತ್, ಇಶಾನ್ ಕಿಶನ್’ರಂತಹ ಆಟಗಾರರಿಗಾಗಿ ಪ್ರತಿಭಾವಂತ ಸಂಜು ಸ್ಯಾಮ್ಸನ್’ರನ್ನು ತುಳಿಯಲಾಗುತ್ತಿದೆ ಎಂದು ಕ್ರಿಕೆಟ್ ಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಯಾಮ್ಸನ್’ಗೆ ಆಡುವ ಬಳಗದಲ್ಲಿ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಸರಣಿ ಜಯದತ್ತ ಮುನ್ನಡೆಸಿದ್ದ ನಾಯಕ ಹಾರ್ದಿಕ್ ಪಾಂಡ್ಯ ಮೌನ ಮುರಿದಿದ್ದಾರೆ. 3ನೇ ಟಿ20 ಪಂದ್ಯ ಟೈನಲ್ಲಿ ಅಂತ್ಯಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡ್ಯ, ಸಂಜು ಸ್ಯಾಮ್ಸನ್’ಗೆ ಯಾಕೆ ಆಡುವ ಅವಕಾಶ ಸಿಗಲಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

“ಹೊರಗಿನ ಜನ ಏನು ಮಾತನಾಡುತ್ತಾರೆ ಎಂಬುದು ಈ ಹಂತದಲ್ಲಿ ನಮ್ಮ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಇದು ನನ್ನ ತಂಡ ಮತ್ತು ಕೋಚ್ ಜೊತೆ ಚರ್ಚೆ ನಡೆಸಿದ ನಂತರ ಉತ್ತಮ ಆಡುವ ಬಳಗವನ್ನು ನಾನು ಆಯ್ಕೆ ಮಾಡುತ್ತೇನೆ. ಇನ್ನು ಸಾಕಷ್ಟು ಸಮಯವಿದೆ. ಹೀಗಾಗಿ ಎಲ್ಲರೂ ಅವರವರ ಅವಕಾಶ ಪಡೆದೇ ಪಡೆಯುತ್ತಾರೆ. ಇದೊಂದು ಸಣ್ಣ ಸರಣಿ. ಇಲ್ಲಿ ನಾನು ಇನ್ನೂ ಹೆಚ್ಚಿನ ಪಂದ್ಯಗಳನ್ನು ಆಡಿದ್ದಿದ್ದರೆ ಹೆಚ್ಚು ಹೆಚ್ಚು ಆಟಗಾರರಿಗೆ ಆಡುವ ಅವಕಾಶ ನೀಡಬಹುದಿತ್ತು”.

ಹಾರ್ದಿಕ್ ಪಾಂಡ್ಯ, ಭಾರತ ಟಿ20 ತಂಡದ ನಾಯಕ :

ಟಿ20 ಸರಣಿಯಲ್ಲಿ ಆಡುವ ಅವಕಾಶದಿಂದ ವಂಚಿತರಾಗಿರುವ ಸಂಜು ಸ್ಯಾಮ್ಸನ್ ಅವರಿಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಕಿವೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಶುಕ್ರವಾರ ಆಕ್ಲೆಂಡ್’ನಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ : MS Dhoni tennis : ಟೆನಿಸ್ ಡಬಲ್ಸ್ ಚಾಂಪಿಯನ್‌ಷಿಪ್ ಗೆದ್ದ ಕ್ರಿಕೆಟ್ ಮೈದಾನದ ಕೂಲ್ ಕ್ಯಾಪ್ಯನ್ ಎಂ.ಎಸ್ ಧೋನಿ

ಇದನ್ನೂ ಓದಿ : India Vs New Zealand T20 : ಮೂರನೇ ಟಿ20 ಪಂದ್ಯ ರೋಚಕ ಟೈ, ಭಾರತಕ್ಕೆ 1-0 ಸರಣಿ ಜಯ

ಇದನ್ನೂ ಓದಿ : Yuvraj Singh: ಯುವರಾಜ್ ಸಿಂಗ್ ಗೆ ‘ಬಂಗಲೆ’ ಸಂಕಷ್ಟ; ಡಿ.8ರಂದು ವಿಚಾರಣೆಗೆ ಹಾಜರಾಗುವಂತೆ ಗೋವಾ ಸರ್ಕಾರದಿಂದ ನೋಟಿಸ್

ಇದನ್ನೂ ಓದಿ : Sanju Samson missed opportunity: ಸಂಜು ಸ್ಯಾಮ್ಸನ್‌ಗೆ ಮತ್ತೆ ಕೈ ತಪ್ಪಿದ ಅವಕಾಶ; ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

ಭಾರತ Vs ನ್ಯೂಜಿಲೆಂಡ್ ಏಕದಿನ ಸರಣಿಯ ವೇಳಾಪಟ್ಟಿ :
ನವೆಂಬರ್ 25: ಮೊದಲ ಏಕದಿನ (ಆಕ್ಲೆಂಡ್)
ನವೆಂಬರ್ 27: 2ನೇ ಏಕದಿನ (ಹ್ಯಾಮಿಲ್ಟನ್)
ನವೆಂಬರ್ 30: 3ನೇ ಏಕದಿನ (ಕ್ರೈಸ್ಟ್’’ಚರ್ಚ್)

Pandya on Samson : “This is my team, my decision.. Samson’s missed chance, Captain Pandya Khadak’s reply

Comments are closed.