Winter Drink : ತಲೆನೋವು ಓಡಿಸುವ ಸೂಪರ್‌ ಡ್ರಿಂಕ್‌; ಇದನ್ನು ಕುಡಿಯದೇ ನಿಮ್ಮ ದಿನ ಪ್ರಾರಂಭಿಸಲೇ ಬೇಡಿ

ಚಳಿಗಾಲದ (Winter) ಋತುವಿನಲ್ಲಿ ಸದಾ ತಂಪು, ಶೀತ, ನೆಗಡಿ ಮುಂತಾದ ಸಾಮಾನ್ಯ ಕಾಯಿಲೆಗಳು ಸಹಜ. ತಂಪಾದ ವಾತಾವರಣ (Chilled Weather) ತಲೆನೋವು (Headache), ಮೈಗ್ರೇನ್‌ (Migraine) ಹೆಚ್ಚಿಸುತ್ತದೆ. ಅದಕ್ಕಾಗಿ ಚಳಿಗಾಲ ಆರೋಗ್ಯಕ್ಕೆ ಸವಾಲನ್ನು ಒಡ್ಡುತ್ತದೆ. ದೇಹವನ್ನು ಶೀತದಿಂದ ರಕ್ಷಿಸುವುದು ಮತ್ತು ಅನೇಕ ವೈರಲ್‌ ಸೋಂಕುಗಳ ವಿರುದ್ಧ ಹೋರಾಡುವುಂತೆ ಮಾಡಬೇಕು. ಆರೋಗ್ಯದ ಕಾಳಜಿಯನ್ನು ವಹಿಸಬೇಕು. ಈ ಋತುವಿನಲ್ಲಿ ಪೌಷ್ಟಿಕ ಆಹಾರ ಮತ್ತು ಸಮತೋಲಿತ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ. ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸಾರ್‌, ಚಳಿಗಾಲದಲ್ಲಿ ಆರೋಗ್ಯಕರ ವಸ್ತುಗಳನ್ನು ಸೇವಿಸುವುದು ಎಷ್ಟು ಅವಶ್ಯಕವೋ, ಆರೋಗ್ಯಕರ ಆಯುರ್ವೇದ ಪಾನೀಯವನ್ನು (Winter Drink) ಸೇವಿಸುವುದು ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.

ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸರ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ (Instagram)ನಲ್ಲಿ ಚಳಿಗಾಲದಲ್ಲಿ ಬೆಳಗ್ಗೆ ಕುಡಿಯಬೇಕಾದ ಪಾನೀಯ ತಯಾರಿಸುವ ವಿಧಾನವನ್ನು ಹಂಚಿಕೊಂಡಿದ್ದಾರೆ. ಈ ಪಾನೀಯವು ಕೂದಲು ಉದುರುವಿಕೆ, ಮೈಗ್ರೇನ್, ತೂಕ ನಷ್ಟ, ಹಾರ್ಮೋನ್ ಸಮತೋಲನ, ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವುದು, ಇನ್ಸುಲಿನ್ ಪ್ರತಿರೋಧ, ಉರಿಯೂತ ಮತ್ತು ಕೆಮ್ಮು ಮತ್ತು ಶೀತದಂತಹ ಅನೇಕ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಅವರು ಹೇಳಿದರು. ಈ ಪಾನೀಯವನ್ನು ಸುಲಭವಾಗಿ ನಿಮ್ಮ ಮನೆಯಲ್ಲಿಯೇ ತಯಾರಿಸಬಹುದು.

Winter Drink : ತಲೆನೋವು ಓಡಿಸುವ ಆಯುರ್ವೇದ ಪಾನಿಯ:

ಬೇಕಾಗುವ ಪದಾರ್ಥಗಳು :
ಎರಡು ಗ್ಲಾಸ್‌ ನೀರು
7 ರಿಂದ10 ಕರಿಬೇವಿನ ಎಲೆಗಳು
3 ದೊಡ್ಡ ಪತ್ರೆ ಎಲೆಗಳು
ಒಂದು ಚಮಚ ಕೊತ್ತಂಬರಿ ಪುಡಿ ಮತ್ತು ಅರ್ಧ ಚಮಚ ಜೀರಿಗೆ ಪುಡಿ
ಕಾಲು ಚಮಚ ಏಲಕ್ಕಿ ಪುಡಿ
1 ಇಂಚು ಶುಂಠಿ

ವಿಧಾನ :
ಮೇಲೆ ಹೇಳಿದ ಎಲ್ಲಾ ಮಸಾಲೆಗಳನ್ನು ಎರಡು ಗ್ಲಾಸ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಸೋಸಿಕೊಳ್ಳಿ. ಬಿಸಿ ಇರುವಾಗಲೇ ಕುಡಿಯಿರಿ. ಒಬ್ಬರಿಗೆ ಒಂದು ಕಪ್‌ ಸಾಕು. ಇದಕ್ಕೆ ಅರ್ಧ ಚಮಚ ಲಿಂಬು ರಸ ಸೇರಿಸಿ ಕುಡಿದರೆ ತೂಕ ಇಳಿಕೆಗೂ ಸಹಾಯವಾಗುತ್ತದೆ.

ಇದನ್ನೂ ಓದಿ : Ginger Tea Health Benefits: ಸರ್ವ ರೋಗಕ್ಕೂ ರಾಮಬಾಣ ಶುಂಠಿ ಚಹಾ

ಇದನ್ನೂ ಓದಿ : Winter And Water: ಚಳಿಗಾಲದಲ್ಲಿ ನೀವೆಷ್ಟು ನೀರು ಕುಡಿಯುತ್ತೀರಾ…

(Winter Drink to stay fit and warm. It is good for weight loss and headaches)

Comments are closed.