Suryakumar Yadav Life Story : ಉತ್ತರ ಪ್ರದೇಶದ ಹುಡುಗ ಮುಂಬೈನಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡ, ಇದು ಸೂರ್ಯನ ಲೈಫ್ ಸ್ಟೋರಿ !

ಬೆಂಗಳೂರು: ಉತ್ತರ ಪ್ರದೇಶದಿಂದ ಮುಂಬೈಗೆ ಬಂದು ಅಲ್ಲೇ ಕ್ರಿಕೆಟ್ ಬದುಕು ಕಟ್ಟಿಕೊಂಡ ಹುಡುಗ, ಈಗ ಇಡೀ ಕ್ರಿಕೆಟ್ ಜಗತ್ತಿನ ಗಮನವನ್ನು ತನ್ನತ್ತ ಸೆಳೆದು ಬಿಟ್ಟಿದ್ದಾನೆ. ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಬಾರಿಸಿದ ಸಿಡಿಲಬ್ಬರದ ಶತಕ, ಸೂರ್ಯಕುಮಾರ್ ಯಾದವ್ ( Suryakumar Yadav) ಎಂಬ ಆಟಗಾರನ ಅದ್ಭುತ ಪ್ರತಿಭೆಯನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿ ಬಿಟ್ಟಿದೆ.

ಉತ್ತರ ಪ್ರದೇಶದ ಮೂಲದ ಸೂರ್ಯಕುಮಾರ್ ಯಾದವ್ ಮುಂಬೈನಲ್ಲಿ ಕ್ರಿಕೆಟ್ ಆಡಿ, ದೇಶೀಯ ಕ್ರಿಕೆಟ್ ದಿಗ್ಗಜ ಮುಂಬೈ ತಂಡದ ನಾಯಕನೂ ಆಗಿ, 30ನೇ ವರ್ಷದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಈಗ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಆಟಗಾರ.

ಇಂಗ್ಲೆಂಡ್ ವಿರುದ್ಧ ನಾಟಿಂಗ್”ಹ್ಯಾಮ್”ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ 216 ರನ್”ಗಳ ಚೇಸಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಕ್ರೀಸ್”ಗಿಳಿದಿದ್ದ ಸೂರ್ಯ, ಕೇವಲ 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಡಿಲ ಸಿಕ್ಸರ್”ಗಳ ನೆರವಿನಿಂದ ಸಿಡಿಲಬ್ಬರದ 117 ರನ್ ಸಿಡಿಸಿದ್ದರು.

https://twitter.com/Benstokesfan55/status/1546405639173308416?s=20&t=fBLNy1QdkJ8Em1GKgbHh1Q

31 ವರ್ಷದ ಸೂರ್ಯಕುಮಾರ್ ಯಾದವ್ ಮೂಲತಃ ಉತ್ತರ ಪ್ರದೇಶದ ಗಾಜೀಪುರದವರು. ಅವರ ತಂದೆ ಅಶೋಕ್ ಕುಮಾರ್ ಯಾದವ್ ಎಲೆಕ್ಟ್ರಿಕ್ ಇಂಜಿನಿಯರ್. ವೃತ್ತಿಬದುಕಿಗಾಗಿ ಗಾಜೀಪುರ ತೊರೆದು ಮುಂಬೈಗೆ ಬಂದಿದ್ದರು ಅಶೋಕ್ ಕುಮಾರ್.

ಚಿಕ್ಕಂದಿನಲ್ಲಿ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಡುತ್ತಿದ್ದ. ತಂದೆಯ ಸಲಹೆಯಂತೆ ಬ್ಯಾಡ್ಮಿಂಟನ್ ಬಿಟ್ಟು ಕ್ರಿಕೆಟ್ ಮುಂದುವರಿಸಿದ ಸೂರ್ಯ, ಮೊದ ಮೊದಲು ಮುಂಬೈನ ಅನುಕೇಶಿ ನಗರದ ಗಲ್ಲಿಗಳಲ್ಲಿ ಆಟವಾಡ್ತಾ ಇದ್ದ. ನಂತರ ಅನುಕೇಶಿ ನಗರದಲ್ಲಿ ಕ್ರಿಕೆಟ್ ಕ್ಯಾಂಪ್ ಸೇರಿಕೊಂಡ ಸೂರ್ಯ, ಬಳಿಕ ವೆಂಗ್ಸರ್ಕರ್ ಕ್ರಿಕೆಟ್ ಅಕಾಡೆಮಿ ಸೇರಿಕೊಂಡ. ಅದು ಸೂರ್ಯನ ಕ್ರಿಕೆಟ್ ಬದುಕಿಗೆ ಸಿಕ್ಕ ಟರ್ನಿಂಗ್ ಪಾಯಿಂಟ್.

ಕಿರಿಯರ ವಯೋಮಿತಿಯ ಟೂರ್ನಿಗಳಲ್ಲಿ ಮುಂಬೈ ಪರ ಮಿಂಚಿದ್ದ ಸೂರ್ಯಕುಮಾರ್ ಯಾದವ್, 20ನೇ ವರ್ಷದಲ್ಲಿ ಮುಂಬೈ ಪರ ದೇಶೀಯ ಕ್ರಿಕೆಟ್”ಗೆ ಪದಾರ್ಪಣೆ ಮಾಡ್ತಾನೆ. 2010ರಲ್ಲಿ ಮೊದಲ ಲಿಸ್ಟ್ ಎ ಪಂದ್ಯವಾಡಿದ್ದ ಸೂರ್ಯ, ಚೊಚ್ಚಲ ಪಂದ್ಯದಲ್ಲೇ 5ನೇ ಕ್ರಮಾಂಕದಲ್ಲಿ ಕ್ರೀಸ್”ಗಿಳಿದು ಗುಜರಾತ್ ವಿರುದ್ಧ 35 ಎಸೆತಗಳಲ್ಲಿ 41 ರನ್ ಸಿಡಿಸಿದ್ದ. ಅದೇ ವರ್ಷ ಡಿಸೆಂಬರ್”ನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್, ಆಡಿದ ಮೊದಲ ಇನ್ನಿಂಗ್ಸ್”ನಲ್ಲೇ ದೆಹಲಿ ವಿರುದ್ಧ 89 ಎಸೆತಗಳಲ್ಲಿ 73 ರನ್ ಸಿಡಿಸಿ ಅಬ್ಬರಿಸಿದ್ದ.

ಸೂರ್ಯಕುಮಾರ್ ಯಾದವ್ ಅವರ ಅಂತಾರಾಷ್ಟ್ರೀಯ ಪದಾರ್ಪಣೆ ತುಂಬಾ ರೋಚಕ. ಕಳೆದ ವರ್ಷದ ಮಾರ್ಚ್”ನಲ್ಲಿ ಅಹ್ಮದಾಬಾದ್”ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯ. ಸೂರ್ಯ ಬ್ಯಾಟಿಂಗ್”ಗೆ ಇಳಿದಾಗ ಎದುರಲ್ಲಿ ನಿಂತಿದ್ದ ಬೌಲರ್, ಶರವೇಗದ ಸರದಾರ ಜೋಫ್ರಾ ಆರ್ಚರ್. ಎದುರಿಸಿದ ಮೊದಲ ಎಸೆತವನ್ನೇ “ನಟರಾಜ ಶಾಟ್” ಮೂಲಕ ಫೈನ್”ಲೆಗ್”ನಲ್ಲಿ ಸಿಕ್ಸರ್”ಗಟ್ಟಿ ಬಿಟ್ಟಿದ್ದ ಸೂರ್ಯಕುಮಾರ್ ಯಾದವ್.

ಈಗ ಇಂಗ್ಲೆಂಡ್ ನೆಲದಲ್ಲಿ ಟಿ20 ಶತಕ ಬಾರಿಸುವ ಮೂಲಕ ಟಿ20 ವಿಶ್ವಕಪ್ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಸಾಧನೆ
ಏಕದಿನ ಕ್ರಿಕೆಟ್
ಪಂದ್ಯ: 07
ರನ್: 267
ಸರಾಸರಿ: 53.40
ಶತಕ/ಅರ್ಧಶತಕ: 00/02
ಗರಿಷ್ಠ: 64

ಅಂತಾರಾಷ್ಟ್ರೀಯ ಟಿ20
ಪಂದ್ಯ: 19
ರನ್: 537
ಸರಾಸರಿ: 38.35
ಶತಕ/ಅರ್ಧಶತಕ: 01/04
ಗರಿಷ್ಠ: 117

ಪ್ರಥಮದರ್ಜೆ ಕ್ರಿಕೆಟ್
ಪಂದ್ಯ: 77
ರನ್: 5,326
ಸರಾಸರಿ: 44.01
ಶತಕ/ಅರ್ಧಶತಕ: 14/26
ಗರಿಷ್ಠ: 200

ಲಿಸ್ಟ್ ‘ಎ‘ ಕ್ರಿಕೆಟ್
ಪಂದ್ಯ: 109
ರನ್: 3,121
ಸರಾಸರಿ: 37.60
ಶತಕ/ಅರ್ಧಶತಕ: 03/19
ಗರಿಷ್ಠ: 134*

ಟಿ20 ಕ್ರಿಕೆಟ್
ಪಂದ್ಯ: 211
ರನ್: 4,724
ಸರಾಸರಿ: 31.91
ಶತಕ/ಅರ್ಧಶತಕ: 01/28
ಗರಿಷ್ಠ: 117

ಇದನ್ನೂ ಓದಿ : Dinesh Karthik Alex Wharf : 2004ರಲ್ಲಿ ಡಿಕೆ ಜೊತೆ ಆಡಿದ್ದ ಇಂಗ್ಲೆಂಡ್ ಆಟಗಾರ, ಈಗ ಡಿಕೆ ಆಡುತ್ತಿರುವಾಗ ಅಂಪೈರ್

ಇದನ್ನೂ ಓದಿ : Rohit backs Kohli : ಔಟ್ ಆಫ್ ಫಾರ್ಮ್ ಕೊಹ್ಲಿಯನ್ನು ಡ್ರಾಪ್ ಮಾಡ್ಬೇಕಾ..? ಕ್ಯಾಪ್ಟನ್ ರೋಹಿತ್ ಏನಂದ್ರು ಕೇಳಿ

Team India player Suryakumar Yadav Life Story

Comments are closed.