World Test Championship : 2ನೇ ಸ್ಥಾನದಲ್ಲಿ ಟೀಮ್ ಇಂಡಿಯಾ, ಹೇಗಿದೆ ಭಾರತದ ಫೈನಲ್ ಹಾದಿ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಭಾರತ, 2021-23ನೇ ಸಾಲಿನ (World Test Championship) ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ (ICC World Test Championship – WTC) ಮತ್ತಷ್ಟು ಹತ್ತಿರವಾಗಿದೆ.

ಬಾಂಗ್ಲಾದೇಶ ವಿರುದ್ದ ಮೀರ್’ಪುರದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಭಾನುವಾರ ಅಂತ್ಯಗೊಂಡ ದ್ವಿತೀಯ ಟೆಸ್ಟ್ (India vs Bangladesh test match) ಪಂದ್ಯವನ್ನು ಭಾರತ 3 ವಿಕೆಟ್’ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು ಕೆ.ಎಲ್ ರಾಹುಲ್ ಬಳಗ 2-0 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು.

ಬಾಂಗ್ಲಾ ವಿರುದ್ಧ ಭಾರತ ಟೆಸ್ಟ್ ಸರಣಿ ಗೆದ್ದ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಪಾಯಿಂಟ್ಸ್ ಟೇಬಲ್ ಬಿಡುಗಡೆಗೊಂಡಿದೆ. ಈ ಸಾಲಿನಲ್ಲಿ ಭಾರತ ಆಡಿರುವ 5 ಟೆಸ್ಟ್ ಸರಣಿಗಳ 14 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು 4 ಪಂದ್ಯಗಳಲ್ಲಿ ಸೋಲು ಕಂಡಿದ್ದು, 2 ಪಂದ್ಯಗಳು ಡ್ರಾಗೊಂಡಿವೆ. ಈ ಮೂಲಕ 58.92ರ ಸರಾಸರಿಯಲ್ಲಿ 99 ಅಂಕ ಕಲೆ ಹಾಕಿರುವ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 13 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ಒಂದನ್ನು ಸೋತು 3 ಪಂದ್ಯಗಳನ್ನು ಡ್ರಾ ಮಾಡಿಕೊಂಡು 120 ಅಂಕ ಗಳಿಸಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್’ಗೆ ಅರ್ಹತೆ ಪಡೆಯಲಿವೆ.

ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ 2021-23ರ ಪಾಯಿಂಟ್ಸ್ ಪಟ್ಟಿ (ಟಾಪ್-5) (ICC World Test Championship 2021-23 Points Table) :
ತಂಡ ಸರಣಿ ಪಂದ್ಯ ಗೆಲುವು ಸೋಲು ಡ್ರಾ ಪಾಯಿಂಟ್ಸ್ ಪಾಯಿಂಟ್ಸ್%
ಆಸ್ಟ್ರೇಲಿಯಾ 05 13 09 01 03 120 76.92
ಭಾರತ 05 14 08 04 02 99 58.92
ದಕ್ಷಿಣ ಆಫ್ರಿಕಾ 05 11 06 05 00 72 54.44
ಶ್ರೀಲಂಕಾ 05 10 05 04 01 64 53.33
ಇಂಗ್ಲೆಂಡ್ 06 22 10 08 04 124 46.97

76.92% ಅಂಕಗಳನ್ನು ಗಳಿಸಿರುವ ಆಸ್ಟ್ರೇಲಿಯಾ ಈಗಾಗಲೇ ಫೈನಲ್’ನಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದೆ. ಮತ್ತೊಂದು ಸ್ಥಾನಕ್ಕಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ : KL Rahul Out : ಕಳಪೆ ಫಾರ್ಮ್‌ಗೆ ಸಿಗಲಿದೆ ಗೇಟ್ ಪಾಸ್ ಶಿಕ್ಷೆ, ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕೆ.ಎಲ್ ರಾಹುಲ್ ಔಟ್ ?

ಇದನ್ನೂ ಓದಿ : CSK new captain: ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಿಕ್ಕಿಯೇ ಬಿಟ್ಟ ಹೊಸ ಕ್ಯಾಪ್ಟನ್, ಈತನೇ ಧೋನಿ ಉತ್ತರಾಧಿಕಾರಿ

ಇದನ್ನೂ ಓದಿ : Ravichandran Ashwin : “ನಿನ್ನನ್ನು ಇನ್ನೂ ನಾನು ಬ್ಲಾಕ್ ಮಾಡಿಲ್ಲವೇ” ರವಿಚಂದ್ರನ್ ಅಶ್ವಿನ್ ಹೀಗಂದದ್ದು ಯಾರಿಗೆ, ಯಾಕೆ?

ಭಾರತ Vs ದಕ್ಷಿಣ ಆಫ್ರಿಕಾ ಫೈನಲ್ ರೇಸ್:

  • ಮುಂಬರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 4-0 ಅಂತರದಲ್ಲಿ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತದ ಅಂಕ ಸರಾಸರಿ 68.05ಕ್ಕೇರಲಿದೆ. ಆಗ ದಕ್ಷಿಣ ಆಫ್ರಿಕಾ ತಂಡ ಮುಂದಿನ ನಾಲ್ಕೂ ಟೆಸ್ಟ್ ಪಂದ್ಯಗಳನ್ನು ಗೆದ್ದರೂ ಪಾಯಿಂಟ್ಸ್ ಸರಾಸರಿ 66.66 ಇರಲಿದ್ದು, ಫೈನಲ್ ತಲುಪಲು ಸಾಧ್ಯವಾಗುವುದಿಲ್ಲ.
  • ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 3-0 ಅಂತರದಲ್ಲಿ ಗೆದ್ದರೆ ಭಾರತದ ಅಂಕ ಸರಾಸರಿ 64.35ಕ್ಕೇರಲಿದೆ. ಆಗ ದಕ್ಷಿಣ ಆಫ್ರಿಕಾ ತಂಡ ಮುಂದಿನ ನಾಲ್ಕೂ ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಪಾಯಿಂಟ್ಸ್ ಸರಾಸರಿ 66.66ನೊಂದಿಗೆ ಫೈನಲ್ ತಲುಪಲಿದೆ.

World Test Championship: Team India in 2nd position, how is India’s final path? Here is complete information

Comments are closed.