ವಿಶ್ವಕಪ್ 2023ರಲ್ಲಿ(World Cup 2023) ಭಾರತ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಮತ್ತೆ ಅಂಕಪಟ್ಟಿಯಲ್ಲಿ( ICC World Cup 2023 Points Table) ಅಗ್ರಸ್ಥಾನಕ್ಕೇರಿದೆ. ವಿರಾಟ್ ಕೊಹ್ಲಿ (Virat Kohli Century) ಅವರ ಆಕರ್ಷಕ ಶತಕದಿಂದ ಇದೀಗ ಭಾರತ ಮತ್ತು ಬಾಂಗ್ಲಾದೇಶ (IND vs BAN) ವಿರುದ್ದದ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ.

ಪುಣೆಯಲ್ಲಿ ನಡೆದ ICC ODI ವರ್ಲ್ಡ್ ಕಪ್ 2023 ರ 17 ನೇ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ 2023ರ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟಾಸ್ ಸೋತ ಭಾರತ ಮೊದಲು ಬೌಲಿಂಗ್‌ಗೆ ಇಳಿಯಿತು. ಬಾಂಗ್ಲಾದೇಶವ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿ ಟೀಂ ಇಂಡಿಯಾಗೆ 257 ರನ್ ಗಳ ಟಾರ್ಗೆಟ್ ನೀಡಿತು.

ಭಾರತದ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್, ಶಾರ್ದೂಲ್ ಠಾಕೂರ್ 1 ವಿಕೆಟ್, ಕುಲದೀಪ್ ಯಾದವ್ 1 ವಿಕೆಟ್, ರವೀಂದ್ರ ಜಡೇಜಾ 2 ವಿಕೆಟ್ ಮತ್ತು ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು. ಏತನ್ಮಧ್ಯೆ, ಗಾಯದಿಂದ ಹೊರಗುಳಿದ ಹಾರ್ದಿಕ್ ಪಾಂಡ್ಯ ಅವರ ಓವರ್ ಅನ್ನು ವಿರಾಟ್ ಕೊಹ್ಲಿ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ : IND Vs BAN : ಸಂಕಷ್ಟಕ್ಕೆ ಸಿಲುಕಿದ ರೋಹಿತ್ ಶರ್ಮಾ : ಭಾರತ ತಂಡ ನಾಯಕನ ವಿರುದ್ದ ದಾಖಲಾಯ್ತು 3 ಪ್ರಕರಣ

ಸಾವಾಲಿನ ಮೊತ್ತವನ್ನು ಬೆನ್ನಟ್ಟಿದ ರೋಹಿತ್ ಬಳಗ ಆರಂಭದಲ್ಲಿಯೇ ಅಬ್ಬರಿಸಲು ಆರಂಭಿಸಿತು. ಈ ಮೂಲಕ ಟೀಂ ಇಂಡಿಯಾ 2023ರ ವಿಶ್ವಕಪ್‌ನಲ್ಲಿ ಸತತ 4ನೇ ಗೆಲುವನ್ನು ದಾಖಲಿಸಿತು. ಅಂತಿಮವಾಗಿ ಭಾರತ ತಂಡ 41.3 ಓವರ್‌ಗಳಲ್ಲಿ 3 ವಿಕೆಟ್‌ಗೆ 261 ರನ್ ಗಳಿಸಿ 7 ವಿಕೆಟ್‌ಗಳ ಬೃಹತ್ ಜಯ ದಾಖಲಿಸಿತು. ಅಂತಿಮವಾಗಿ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿ ಮಿಂಚಿದರು.
ಇದನ್ನೂ ಓದಿ : ಐಪಿಎಲ್ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್ ರವೀಂದ್ರ
ಬಾಂಗ್ಲಾದೇಶ ನೀಡಿದ 257 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಭರ್ಜರಿ ಆರಂಭ ಸಿಕ್ಕಿತ್ತು. ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆರಂಭದಲ್ಲೇ ಉತ್ತಮ ಆರಂಭ ಒದಗಿಸಿದರು. ರೋಹಿತ್ 48 ರನ್, ಶುಭಮನ್ ಗಿಲ್ 53 ರನ್ ಮತ್ತು ಶ್ರೇಯಸ್ ಅಯ್ಯರ್ 19 ರನ್ ಗಳಿಸಿದರು. ಆದರೆ ಕಿಂಗ್ ಕೊಹ್ಲಿ ಕೊನೆಗೂ ಅಮೋಘ ಶತಕ ಬಾರಿಸಿ ಮಿಂಚಿದರು.

ಕಿಂಗ್ ಕೊಹ್ಲಿ 97 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ ಅಜೇಯ 103 ರನ್ ಗಳಿಸಿದರೆ, ಕನ್ನಡಿಗ ಕೆಎಲ್ ರಾಹುಲ್ 34 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ಭಾರತ ತಂಡಕ್ಕೆ ಸಾಕಷ್ಟು ನೆರವಾಗುತ್ತಿದೆ.
ಇದನ್ನೂ ಓದಿ : ರೋಹಿತ್ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ
ಬಾಂಗ್ಲಾದೇಶ ವಿರುದ್ದ ಹಾರ್ದಿಕ್ ಪಾಂಡ್ಯಗೆ ಗಾಯ, ತಂಡದಿಂದ ಔಟ್
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ವೇಳೆಯಲ್ಲಿ ಗಾಯಗೊಂಡಿದ್ದಾರೆ. ಈ ಹಿಂದೆ ಪಾಂಡ್ಯ ಬೆನ್ನು ನೋವಿನ ಕಾರಣಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಅಲ್ಲದೇ ಸಾಕಷ್ಟು ತಿಂಗಳುಗಳ ಕಾಲ ಅವರು ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದರು. ಬೆನ್ನು ನೋವಿನ ಕಾರಣಕ್ಕೆ ಅವರು ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದೀಗ ವಿಶ್ವಕಪ್ ಪಂದ್ಯದ ವೇಳೆಯಲ್ಲಿ ಗಾಯಗೊಂಡಿರುವುದು ಭಾರತಕ್ಕೆ ದೊಡ್ಡ ಹೊಡೆತ ಕೊಟ್ಟಿದೆ.
india vs Bangaladesh Virat Kohli Massive Century india 4th win in world Cup 2023 Hardik Pandya Ruled Out