Maharaja Trophy T20: ಮಹಾರಾಜ ಟ್ರೋಫಿ ಟಿ20ಯಲ್ಲಿ ಕನ್ನಡವೇ ಇಲ್ಲ, ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ಕನ್ನಡಿಗರು ಗರಂ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಶ್ರಯದಲ್ಲಿ ನಡೆಯಲಿರುವ (Maharaja Trophy T20) ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದ ಕ್ರಿಕೆಟ್ ಹಬ್ಬವೆಂದೇ ಕರೆಯಲ್ಪಡುವ ಮಹಾರಾಜ ಟಿ20 ಲೀಗ್ ಆಗಸ್ಟ್ 13ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಆದರೆ ಟೂರ್ನಿ ಆರಂಭಕ್ಕೂ ಮೊದಲೇ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ಕರ್ನಾಟಕದ ಕ್ರಿಕೆಟ್ ಪ್ರಿಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾರಣ, ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಪ್ರೊಮೋಷನ್ ವೀಡಿಯೊಗಳಲ್ಲಿ ಕನ್ನಡದ ಕಡೆಗಣನೆ.

ಟಿ20 ಟೂರ್ನಿಯನ್ನು ಪ್ರೊಮೋಟ್ ಮಾಡಲು ಟೂರ್ನಿಯಲ್ಲಿ ಆಡಲಿರುವ ಆಟಗಾರರು ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯ ವೀಡಿಯೊಗಳನ್ನು ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ಆದರೆ ಯಾವ ವೀಡಿಯೊದಲ್ಲೂ ಕನ್ನಡ ಭಾಷೆಯ ಸುಳಿವೇ ಇಲ್ಲ. ಎಲ್ಲರೂ ಇಂಗ್ಲೀಷ್’ನಲ್ಲಿ ಮಾತನಾಡುವ ವೀಡಿಯೊಗಳಿದ್ದು, ಇದರ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್ ಅನ್ನು ನೋಡಿ ಕಲಿಯಿರಿ ಅಂತ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಮಚಂದ್ರ ಎಂಬ ಕ್ರಿಕೆಟ್ ಅಭಿಮಾನಿ ಕಟು ಶಬ್ದಗಳಿಂದ ಮನಸ್ಸಿನ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ : Shut the noise: ಕೆ.ಎಲ್ ರಾಹುಲ್ ಸೆಲೆಬ್ರೇಷನ್ copy ಮಾಡಿದ ವಿಂಡೀಸ್ ಆಲ್ರೌಂಡರ್

“ಎಂತಹ ಹೇಡಿಗಳಯ್ಯ ನೀವು @maharaja_t20? ನಮ್ಮ ಆಟಗಾರರನ್ನ ಕನ್ನಡದಲ್ಲಿ ಮಾತಾಡಿಸಿ ಅಂದದಕ್ಕೆ ಕಮೆಂಟ್ಸ್ disable ಮಾಡಿ ಮತ್ತದೇ ಇಂಗ್ಲಿಷ್ ತುಣುಕುಗಳನ್ನ ಹಾಕ್ತೀರಲ್ಲಾ, ನಾಚಿಕೆ ಆಗಲ್ವಾ? ಈ ಸಂಪತ್ತಿಗೆ ಕನ್ನಡಿಗರು ದುಡ್ಡು ಕೊಟ್ಟು ನಿಮ್ಮ ದೊಂಬರಾಟ ನೋಡಬೇಕಾ? @TNPremierLeague ನ ನೋಡಿ ಕಲಿರೋ ಮನೆಹಾಳ್ರಾ” ಎಂದು ರಾಮಚಂದ್ರ ಎಂಬವರು ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 13ರಂದು ನಡೆಯುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್ ತಂಡ, ಕಳೆದ ಬಾರಿಯ ರನ್ನರ್ಸ್ ಅಪ್ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ. ಈ ಬಾರಿ ಒಟ್ಟು 24 ಲೀಗ್ ಪಂದ್ಯಗಳು ನಡೆಯಲಿದ್ದು, ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಸಂಪೂರ್ಣ ವೇಳಾಪಟ್ಟಿ(Maharaja Trophy T20 complete schedule) :

  • ಆಗಸ್ಟ್ 13: ಗುಲ್ಬರ್ಗ ಮಿಸ್ಟಿಕ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 13: ಹುಬ್ಬಳ್ಳಿ ಟೈಗಸ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 14: ಮಂಗಳೂರು ಡ್ರಾಗನ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 14: ಗುಲ್ಬರ್ಗ ಮಿಸ್ಟಿಕ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 15: ಮೈಸೂರು ವಾರಿಯರ್ಸ್ Vs ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 15: ಶಿವಮೊಗ್ಗ ಲಯನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 16: ಹುಬ್ಬಳ್ಳಿ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 16: ಗುಲ್ಬರ್ಗ ಮಿಸ್ಟಿಕ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 17: ಗುಲ್ಬರ್ಗ ಮಿಸ್ಟಿಕ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 17: ಮಂಗಳೂರು ಡ್ರಾಗನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 18: ಶಿವಮೊಗ್ಗ ಲಯನ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 18: ಮಂಗಳೂರು ಡ್ರಾಗನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 19: ಬೆಂಗಳೂರು ಬ್ಲಾಸ್ಟರ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 19: ಶಿವಮೊಗ್ಗ ಲಯನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 20: ಮೈಸೂರು ವಾರಿಯರ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 20: ಮಂಗಳೂರು ಡ್ರಾಗನ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 21: ಗುಲ್ಬರ್ಗ ಮಿಸ್ಟಿಕ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 21: ಮಂಗಳೂರು ಡ್ರಾಗನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 22: ಹುಬ್ಬಳ್ಳಿ ಟೈಗರ್ಸ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 22: ಮೈಸೂರು ವಾರಿಯರ್ಸ್ Vs ಶಿವಮೊಗ್ಗ ಲಯನ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 23: ಗುಲ್ಬರ್ಗ ಮಿಸ್ಟಿಕ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 23: ಮಂಗಳೂರು ಡ್ರಾಗನ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 5.30ಕ್ಕೆ)
  • ಆಗಸ್ಟ್ 24: ಮಂಗಳೂರು ಡ್ರಾಗನ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ಕ್ಕೆ)
  • ಆಗಸ್ಟ್ 24: ಗುಲ್ಬರ್ಗ ಮಿಸ್ಟಿಕ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 5.30ಕ್ಕೆ)

Maharaja Trophy T20: No Kannada in Maharaja Trophy T20, Kannadigas go hard against State Cricket Association

Comments are closed.