ವೇಗಿ ಎಸ್.ಶ್ರಿಶಾಂತ್ ನಿಷೇಧ ಇಂದು ಅಂತ್ಯ : ಪುನರಾರಂಭಕ್ಕೆ ಅಭಿಮಾನಿಗಳ ಕಾತರ

0

ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ನಿಷೇಧಕ್ಕೊಳಗಾಗಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್ ಅವರ ನಿಷೇಧದ ಅವಧಿ ಇಂದಿಗೆ (ಸೆಪ್ಟೆಂಬರ್ 13) ಮುಕ್ತಾಯವಾಗಿದೆ. 37 ವರ್ಷದ ಶ್ರೀಶಾಂತ್ ಮತ್ತೆ ಕ್ರಿಕೆಟ್ ಗೆ ಮರಳಲು ಸಜ್ಜಾಗಿದ್ದಾರೆ. ಈ ನಡುವಲ್ಲೇ ಅಭಿಮಾನಿಗಳು ಟ್ವೀಟರ್ ಟ್ರೆಂಡ್ ಶುರುವಿಟ್ಟುಕೊಂಡಿದ್ದಾರೆ.

2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಶಾಂತ್, 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡ ಕಾರಣದಿಂದ ಕ್ರಿಕೆಟ್ ಜೀವನ ಅಧಃಪತನಗೊಂಡಿತ್ತು.

ಬಿಸಿಸಿಐ ಮೊದಲಿಗೆ ಅವರಿಗೆ ಆಜೀವ ನಿಷೇಧ ಶಿಕ್ಷೆ ವಿಧಿಸಿದ್ದರೂ, ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಕಾರಣದಿಂದಾಗಿ 2019ರಲ್ಲಿ ನಿಷೇಧ ಶಿಕ್ಷೆ 7 ವರ್ಷಗಳಿಗೆ ಇಳಿದಿತ್ತು. ಇದರಿಂದಾಗಿ ಶ್ರೀಶಾಂತ್ 7 ವರ್ಷಗಳ ಬಳಿಕ ಕೊನೆಗೂ ಕ್ರಿಕೆಟ್ ಮೈದಾನಕ್ಕೆ ಮರಳುವಂತಾಗಿದೆ.

ಶ್ರೀಶಾಂತ್ ನಿಷೇಧದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಶಾಂತ್ ಸಾಧನೆಯ ಕುರಿತು ಸಾಕಷ್ಟು ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಅಗಸ್ಟ್ ತಿಂಗಳಿನಿಂದಲೇ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿರುವ ಶ್ರೀಶಾಂತ್ ಈ ಬಾರಿ ರಣಜಿ ಪಂದ್ಯವಾಡೋದು ಬಹುತೇಕ ಖಚಿತ.

ಟೀಮ್ ಇಂಡಿಯಾ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿರುವ ಕೇರಳ ವೇಗಿ ಶ್ರೀಶಾಂತ್ ಕ್ರಮವಾಗಿ 87, 75 ಮತ್ತು 7 ವಿಕೆಟ್ ಕಬಳಿಸಿದ್ದಾರೆ.

ಕೇರಳ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕೂಡ ಶ್ರೀಶಾಂತ್ ಆಗಮನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ರಣಜಿ ಪಂದ್ಯಾವಳಿಗಾಗಿ ಶ್ರೀಶಾಂತ್ ಕಠಿಣ ಅಭ್ಯಾಸ ನಡೆಸಲಿದ್ದಾರೆ.

ಇನ್ನು ಮುಂದಿ ವರ್ಷದ ಐಪಿಎಲ್ ಹಾಗೂ ಟಿ 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಬಯಕೆಯನ್ನು ಶ್ರೀಶಾಂತ್ ಹೊಂದಿದ್ದಾರೆ.

ನಿಷೇಧಕ್ಕೆ ಒಳಗಾಗಿರುವ ಶ್ರೀಶಾಂತ್ ಇದುವರೆಗೆ ಬಿಸಿಸಿಐ ಮಾನ್ಯತೆ ಪಡೆದ ಕ್ರಿಕೆಟ್ ಮೈದಾನ ಹಾಗೂ ಅದರ ವ್ಯವಸ್ಥೆಯನ್ನು ಬಳಸಿಕೊಳ್ಳುವಂತಿರಲಿಲ್ಲ.

ಹೀಗಾಗಿ ಕೇರಳದ ಕ್ರಿಕೆಟ್ ಕ್ಲಬ್ ವೊಂದರಲ್ಲಿ ಅವರು ಬೌಲಿಂಗ್ ಅಭ್ಯಾಸವನ್ನು ಮಾಡುತ್ತಿದ್ದಾರೆ. ಆದ್ರೆ ಇಂದಿನಿಂದ ಶ್ರೀಶಾಂತ್ ಬಿಸಿಸಿಐನ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದಾಗಿದೆ.

Leave A Reply

Your email address will not be published.