ಐಪಿಎಲ್ ಗಾಗಿ ದುಬೈಗೆ ತೆರಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ಒಡತಿ

0

ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಗಾಗಿ ಇದೀಗ ದಿನಗಣನೆ ಶುರುವಾಗಿದೆ. ಈ ನಡುವಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ-ಒಡತಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ ದುಬೈಗೆ ತೆರಳಿದ್ದಾರೆ.

ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡುವ ಗಮನ ಸೆಳೆಯುತ್ತ ಬಂದಿರುವ ಪ್ರೀತಿ ಝಿಂಟಾ ಈ ಬಾರಿ ದುಬೈನಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

ಲಾಕ್ ಡೌನ್ ವೇಳೆಯಲ್ಲಿ ಪತಿಯೊಂದಿಗೆ ಅಮೇರಿಕಾದಲ್ಲಿ ವಾಸವಿದ್ದ ಪ್ರೀತಿ ಝಿಂಟಾ ಇದೀಗ ದುಬೈಗೆ ಆಗಮಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ 6 ದಿನಗಳ ಕ್ವಾರಂಟೈನ್ ಗೆ ಒಳಪಡಲಿದ್ದಾರೆ.

ಈ ಮುನ್ನ 2014ರಲ್ಲಿ ಯುಎಇಯಲ್ಲಿ ಮೊದಲ ಬಾರಿ ಐಪಿಎಲ್ ಟೂರ್ನಿಯ ಮೊದಲಾರ್ಧದ ಪಂದ್ಯಗಳು ನಡೆದಿದ್ದ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ ಎಲ್ಲ 5 ಪಂದ್ಯಗಳಲ್ಲಿ ಗೆದ್ದು ಅಜೇಯ ಸಾಧನೆ ಮಾಡಿತ್ತು. ಈ ಬಾರಿಯೂ ಬಲಿಷ್ಟ ತಂಡವನ್ನೇ ಪಂಜಾಬ್ ಹೊಂದಿದೆ.

ಕನ್ನಡಿಗ ನಾಯಕ ಕೆ.ಎಲ್.ರಾಹುಲ್ ಹಾಗೂ ಕೋಚ್ ಅನಿಲ್ ಕುಂಬ್ಳೆ ಸಾರಥ್ಯದಲ್ಲಿ ಕಿಂಗ್ಸ್ ಇಲೆವೆನ್ ಈ ಬಾರಿ ಟ್ರೋಫಿ ಜಯಿಸುವ ವಿಶ್ವಾದಲ್ಲಿದೆ. ಈ ಬಾರಿ ಪ್ರೇಕ್ಷಕರಿಗೆ ಪಂದ್ಯಾಟ ವೀಕ್ಷಣೆಗೆ ಅವಕಾಶವಿಲ್ಲದೇ ಇರೋದ್ರಿಂದ ಪ್ರೀತಿ ಝಿಂಟಾ ತಂಡಕ್ಕೆ ಸ್ಪೂರ್ತಿಯನ್ನು ತುಂಬಲಿದ್ದಾರೆ.

Leave A Reply

Your email address will not be published.