ಕನ್ನಡಿಗ ಸುನಿಲ್ ಜೋಷಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆ

0

ನವದೆಹಲಿ : ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ಸುನಿಲ್ ಜೋಷಿ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಅಡ್ವೈಸರಿ ಸಮಿತಿ ಸುನಿಲ್ ಜೋಷಿ ಅವರನ್ನು ನೇಮಕ ಮಾಡಿದೆ. ಮಾಜಿ ಆಟಗಾರರಾದ ಕನ್ನಡಿಗ ವೆಂಕಟೇಶ್ ಪ್ರಸಾದ್ ಮತ್ತು ಅಜಿತ್ ಅಗರ್ಕರ್ ಅಧ್ಯಕ್ಷಗಾದಿಯ ರೇಸ್ ನಲ್ಲಿದ್ದರು. ಎಡಗೈ ಸ್ಪೀನ್ನರ್ ಸುನಿಲ್ ಜೋಷಿ 15 ಟೆಸ್ಟ್, 69 ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದರು.

ಕರ್ನಾಟಕ ರಣಜಿ ತಂಡದ ಆಟಗಾರನಾಗಿ, ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಸುನಿಲ್ ಜೋಷಿ ಒಟ್ಟು 15 ಟೆಸ್ಟ್ ಪಂದ್ಯವನ್ನು ಆಡಿದ್ದು 1470 ರನ್ ಗಳಿಸಿದ್ರೆ 41 ವಿಕೆಟ್ ಪಡೆದಿದ್ದಾರೆ.

ಇನ್ನು ಏಕದಿನ ಸರಣಿಯಲ್ಲಿ ಒಟ್ಟು 69 ಪಂದ್ಯಗಳನ್ನು ಆಡಿದ್ದು 2509 ರನ್ ಬಾರಿಸೋದ್ರ ಜೊತೆಗೆ 69 ವಿಕೆಟ್ ಪಡೆದಿದ್ದಾರೆ. 160 ಪ್ರಥಮ ದರ್ಜೆ, 163 ಲಿಸ್ಟ್ ಎ ಪಂದ್ಯ ಹಾಗೂ 15 ಟಿ20 ಪಂದ್ಯಗಳನ್ನು ಆಡಿದ್ದಾರೆ.

Leave A Reply

Your email address will not be published.