CM Siddaramaiah breakfast Meeting : ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ನಾಟಿಕೋಳಿ ಬ್ರೇಕ್ ಪಾಸ್ಟ್

CM Siddaramaiah breakfast Meeting : ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಬಣ್ಣಬಣ್ಣದ ಚರ್ಚೆಗೆ ಕಾರಣವಾಗಿದ್ದ ಇನ್ನೊಂದು ಬ್ರೇಕ್ ಪಾಸ್ಟ್ ಮುಕ್ತಾಯಗೊಂಡಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಮೆನುವಿನ್ನೊಂದಿಗೆ ಇಡ್ಲಿ ಸವಿದಿದ್ದಾರೆ.
ಡಿಕೆ ಶಿವಕುಮಾರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಒಬ್ಬರೇ ಆಗಮಿಸಿದರು. ಅವರನ್ನು ಡಿ.ಕೆ.ಶಿವಕುಮಾರ್, ಕುಣಿಗಲ್ ರಂಗನಾಥ್ ಜತೆಗೆ ಶಿವಕುಮಾರ್ ಸ್ವಾಗತಿಸಿದರು. ಕನಕಪುರದಿಂದ ತಂದು ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ನಾಟಿ ಕೋಳಿಯಿಂದ ತಯಾರಿಸಿದ ಸಾರು ಹಾಗೂ ಪಲ್ಯದ ಜತೆಗೆ ಇಡ್ಲಿ ನೀಡಲಾಯಿತು.
ಡಿ.ಕೆ.ಶಿವಕುಮಾರ್ ಈಗಾಗಲೇ ನಾನ್ ವೆಜ್ ತ್ಯಜಿಸಿರುವುದರಿಂದ ಅವರು ವೆಜ್ ಪದಾರ್ಥವನ್ನು ಮಾತ್ರ ಬಳಸಿದರು ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಮೀಟಿಂಗ್ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಪಟ್ಟ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ : ಏಚ್ಚರ…. ಎಚ್ಚರ….! ರಾಜ್ಯದಲ್ಲಿ ಹೆಚ್ಚಿದ ಇಲಿಜ್ವರ ಆತಂಕ : ಸೋಂಕಿತರ ಪಟ್ಟಿಯಲ್ಲಿ ಉಡುಪಿಗೆ ಪ್ರಥಮ ಸ್ಥಾನ
ಕೇಂದ್ರ ಸಚಿವರು ಹಾಗೂ ಸಂಸದರ ಜತೆಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಕರ್ನಾಟಕ ಭವನದಲ್ಲಿ ಇನ್ನೊಂದು ಬ್ರೇಕ್ ಪಾಸ್ಟ್ ಮೀಟಿಂಗ್ ನಡೆಸುವ ಬಗ್ಗೆ ಈ ಸಂದರ್ಭದಲ್ಲಿ ಪ್ರಸ್ತಾಪವಾಗಿದೆ.
ನಮ್ಮ ಮನೆಯಲ್ಲೂ ಬ್ರೇಕ್ ಫಾಸ್ಟ್ ಮೀಟಿಂಗ್ : ಜಿ.ಪರಮೇಶ್ವರ್
ಈ ಮಧ್ಯೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಾತಾವರಣ ತಿಳಿಯಾಗಿದೆ.ಕರೆದರೆ ನಾನು ಹೋಗುತ್ತಿದ್ದೆ. ನಮ್ಮಮನೆಯಲ್ಲೂ ಸಮಯ ಬಂದಾಗ ಬ್ರೇಕ್ ಪಾಸ್ಟ್ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಮದ್ಯಪಾನ ನಿಷೇಧ ಮಾಡಿ : ಸಿಎಂ ಸಿದ್ದರಾಮಯ್ಯಗೆ ನೀರೆಕೃಷ್ಣ ಶೆಟ್ಟಿ ಮನವಿ
CM Siddaramaiah breakfast Meeting DCM DK Shivakumar house



