ಹೈಟೆಕ್ ವೇಶ್ಯಾವಾಟಿಕೆ ದಂಧೆ : ಐವರ ಬಂಧನ

ಧಾರವಾಡ : ಮನೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆ ದಂಧೆಯನ್ನು ಬಯಲು ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡದ ಸಿಸಿಬಿ ಪೊಲೀಸರ ತಂಡ ಯಶಸ್ವಿಯಾಗಿದೆ.

ನಗರದ ಮಗದುಮ್‌ ಕಲ್ಯಾಣ ಮಂಟಪದ ಹಿಂಭಾಗದ ಚೆನ್ನಬಸವೇಶ್ವರ ನಗರದ ಮನೆಯೊಂದರಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿಯ‌ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸ್‌ ಇನ್ಸಪೆಕ್ಟರ್‌ ಭರತ ರೆಡ್ಡಿ, ಅಲ್ತಾಫ ಮುಲ್ಲಾ ನೇತೃತ್ವದ ತಂಡ ಈ‌ ದಾಳಿಯನ್ನು ನಡೆಸಿದ್ದು, ಯುವತಿಯರನ್ನು ರಕ್ಷಿಸಿದ್ದು, ತಂಡ ದಂಧೆಯನ್ನ ಬಯಲಿಗೆಳೆಯುವಲ್ಲಿ ಯಶಸ್ಸಿಯಾಗಿದೆ. ಈ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.