ರಾಜ್ಯದಲ್ಲಿ ಫೆಬ್ರವರಿ ಮೊದಲ ವಾರದವರೆಗೂ ಚಳಿಯ ಕಾಟ : ಮಿತಿಮೀರಲಿದೆ ಶೀತ ಅಲೆ
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಆದರೆ ಮುಂದಿನ 2-3 ವಾರಗಳವರೆಗೆ ರಾಜ್ಯದಲ್ಲಿ ಚಳಿಗಾಲ ವೀಪರೀತ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಶೀತ ಅಲೆ ಪರಿಸ್ಥಿತಿ ಮಿತಿಮೀರಲಿದೆ ಎಂದು ಐಎಂಡಿ ತಿಳಿಸಿದೆ. ಫೆಬ್ರವರಿ ಮೊದಲ ವಾರದವರೆಗೂ ರಾಜ್ಯದಲ್ಲಿ ಇದೇ ರೀತಿಯ ಹವಾಮಾನ ಮುಂದುವರಲಿಯಲಿದೆ ಎನ್ನಲಾಗಿದೆ.
ಬಂಗಾಳ ಕೊಲ್ಲಿಯಿಂದ ಬೀಸುತ್ತಿರುವ ಪೂರ್ವ ಮಾರುತಗಳಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ರಾತ್ರಿ ಸಮಯದಲ್ಲಿ ತಾಪಮಾನ ಇಳೀಕೆಯಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಗೂಗಲ್ ಪೇ, ಫೋನ್ ಪೇನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದ್ದೀರಾ? ಮರಳಿ ಪಡೆಯಲು ಇಲ್ಲಿದೆ ದಾರಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತುತ 17 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುತ್ತಿದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ ಮುಂತಾದ ಜಿಲ್ಲೆಗಳಲ್ಲಿ ದಟ್ಟ ಮಂಜು ಮತ್ತು ತೀವ್ರ ಚಳಿ ಮುಂದುವರಿದಿದೆ. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ವರ್ಷಧಾರೆ ಕೂಡ ಕಂಡು ಬಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಕೊಂಚ ತಾಪಮಾನ ಏರಿಕೆ ಕಂಡು ಬಂದಿದ್ದರೂ ಸಹ ಮುಂಜಾವಿನ ಸಂದರ್ಭದಲ್ಲಿ ಶೀತ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



