ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮತ್ತೊಂದು ಬಲಿ : ಬಿಸಿಲ ತಾಪಕ್ಕೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾವು

ರಾಜ್ಯದಲ್ಲಿ ಬಿಸಿಲ ಧಗೆ ಮಿತಿಮೀರಿದೆ. 2 ದಿನಗಳ ಹಿಂದೆಯಷ್ಟೇ ಬೀದರ್​ನಲ್ಲಿ 20 ವರ್ಷದ ಯುವಕ ಬಿಸಿಲಿನ ಝಳ ತಾಳಲಾರದೇ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮತ್ತೊಂದು ಸಾವು ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಸರ್ಕಾರಿ ಅಧಿಕಾರಿ ಹೀಟ್​ ಸ್ಟ್ರೋಕ್​ಗೆ ಬಲಿಯಾಗಿದ್ದಾರೆ..!

ಮೃತರನ್ನು ರಾಯಬಾಗ ಪಟ್ಟಣದ ನಿವಾಸಿ 38 ವರ್ಷದ ವೆಂಕಟೇಶ ಬಳ್ಳಾರಿ ಎಂದು ಗುರುತಿಸಲಾಗಿದೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಬಸವೇಶ್ವರ ಜಯಂತಿ ಸಂದರ್ಬದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮಳೆಯ ಸಿಹಿ ಸುದ್ದಿ: ಮುಂದಿನ 5 ದಿನ ಎಲ್ಲೆಲ್ಲಿ ಮಳೆ ? ಅತ್ತ ಸುಡುತ್ತಿರುವ ಬಿಸಿಲಿಗೆ ಸಿಗಲಿದೆಯೇ ಮುಕ್ತಿ

ಬಸವೇಶ್ವರ ಜಯಂತಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ವೆಂಕಟೇಶ ತಲೆ ತಿರುಗಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಬಿಸಿಲಿನ ಬೇಗೆ ತಾಳಲಾರದೇ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ವೆಂಕಟೇಶ್​ ಆಪ್ತ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ದಿನಕ್ಕೊಂದು ಸಾವು ಸಂಭವಿಸುತ್ತಿರುವುದು ಆತಂಕಕ್ಕೆ ದಾರಿ ಮಾಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories