Suicide Attempt: ಗೋಳಗುಮ್ಮಟದಿಂದ ಜಿಗಿದು ವ್ಯಕ್ತಿಯೋರ್ವ ಸಾವು: ಆತ್ಮಹತ್ಯಾ ತಾಣವಾಗುತ್ತಿದೆಯಾ ಪ್ರವಾಸಿ ಸ್ಥಳ..?

ವಿಜಯಪುರ: (Suicide Attempt) ಗೋಳಗುಮ್ಮಟದ ಮೇಲಿಂದ ಜಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಸ್ಮಾರಕದ ಆವರಣದಲ್ಲಿ ನಡೆದಿದೆ. ಸಲೀಂ ತಿಕೋಟ್ಟರ್‌ ಎನ್ನುವವರು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.

ವಿಜಯಪುರದಲ್ಲಿರುವ ಗೋಳಗುಮ್ಮಟದ ವೀಕ್ಷಣೆಗೆಂದು ಬಂದಿದ್ದ ವ್ಯಕ್ತಿ(Suicide Attempt), ಗೋಳಗುಮ್ಮಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಯಾವುದೇ ಕಾರಣ ತಿಳಿದುಬಂದಿಲ್ಲ.ಕೆಲ ಸಮಯಗಳ ಕಾಲ ಗೋಳಗುಮ್ಮಟದ ಆವರಣದಲ್ಲಿ ಆತಂಕ ಸೃಷ್ಟಿಯಾಗಿದ್ದು, ಗೋಳಗುಮ್ಮಟದ ವೀಕ್ಷಣೆಗೆ ಬಂದ ಪ್ರವಾಸಿಗರೆದುರೇ ಆತ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ.

ಘಟನೆ ನಡೆದ ಸ್ಥಳಕ್ಕೆ ಗೋಳಗುಮ್ಮಟ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಇದೇ ಸ್ಥಳದಲ್ಲಿ ಮಹಾರಾಷ್ಟ್ರ ಮೂಲದ ವ್ಯಕ್ತಿಯೋರ್ವ ಸ್ಮಾರಕದಿಂದ ಜಿಗಿದು ಸಾವನ್ನಪ್ಪಿದ್ದ. ಮಹಾರಾಷ್ಟ್ರ ಮೂಲದ ಸೋಮನಾಥ ತರನಾಳಕರ ಎಂಬಾತ ಪ್ರೀತಿಸಿದ ಹುಡುಗಿಗೆ ಬೇರೊಂದು ಮದುವೆ ನಿಶ್ಚಯವಾದ ಕಾರಣ ಮನನೊಂದು ಆತ ಗೋಳಗುಮ್ಮಟ ಸ್ಮಾರಕದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : Milk price hike Karnataka : ಹಾಲಿನ ದರ ಏರಿಕೆ: ಆದೇಶ ಜಾರಿಗೂ ಮುನ್ನವೇ ಬ್ರೇಕ್ ಹಾಕಿದ ಸಿಎಂ

ಇದನ್ನೂ ಓದಿ : Accident insurance: KSRTC ಸಿಬ್ಬಂದಿಗೆ ಸಿಹಿಸುದ್ದಿ: 1 ಕೋಟಿ ರೂ. ಮೊತ್ತದ ಅಪಘಾತ ವಿಮೆ ಜಾರಿ

ಇದನ್ನೂ ಓದಿ : Surathkal toll: ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ; ಸುರತ್ಕಲ್ ಟೋಲ್ ರದ್ದು

Suicide Attempt: ಪ್ರವಾಸಿ ಸ್ಥಳವೀಗ ಆತ್ಮಹತ್ಯಾ ತಾಣ

ಜನಪ್ರೀಯ ಐತಿಹಾಸಿಕ ಪ್ರವಾಸಿ ತಾಣವಾದ ಗೋಳಗುಮ್ಮಟ ಇದೀಗ ಆತ್ಮಹತ್ಯೆಯ ತಾಣವಾಗಿ ಬದಲಾಗುತ್ತಿದೆ. ಗೋಳಗುಮ್ಮಟದಲ್ಲಿ ಇದು ಎರಡನೇ ಆತ್ಮಹತ್ಯೆಯ ಪ್ರಕರಣವಾಗಿದ್ದು, ಸಲೀಂ ತಿಕೋಟ್ಟರ್‌ ಸಾವಿಗೆ ಯಾವುದೇ ರೀತಿಯ ನಿಖರ ಕಾರಣ ತಿಳಿದು ಬಂದಿಲ್ಲ.

(Suicide Attempt) An incident in which a person committed suicide by jumping from the top of the Dome took place in the premises of the historic Dome of the Dome Memorial in Vijayapura. Salim Tikotter is a person who committed suicide.

Comments are closed.