ಪ್ರತ್ಯೇಕ ಹಾಲು ಒಕ್ಕೂಟ ಬೇಡಿಕೆ ಈಡೇರಿಕೆ: ನೂತನ ಯುಎಚ್‌ಟಿ ಹಾಲು ಸಂಸ್ಕರಣಾ ಘಟನೆ ಲೋಕಾರ್ಪಣೆ

ಹಾವೇರಿ: (UHT milk processing event) ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟವಾಗಬೇಕೆಂಬ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ. ನೂತನ ಯುಎಚ್‌ಟಿ ಹಾಲು ಸಂಸ್ಕರಣ, ಪ್ಯಾಕಿಂಗ್‌ ಸ್ಥಾವರ, ಹಾಲು ಸ್ಯಾಚೆಟ್ ಪ್ಯಾಕಿಂಗ್‌ ಘಟಕ ಲೋಕಾರ್ಪಣೆಯಾಗಿದ್ದು, ಇಲ್ಲಿಂದಲೇ ಪ್ಯಾಕೆಟ್‌ ಮಾಡಿ ಹಾಲು ಪೂರೈಸುವ ಕನಸು ಸಹ ನನಸಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಜಂಗಮಕೊಪ್ಪದಲ್ಲಿ ಕೆಎಂಎಫ್‌ ಹಾಗೂ ಹಾವೆಮುಲ್‌ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಯುಎಚ್‌ಟಿ ಹಾಲು ಸಂಸ್ಕರಣ, ಪ್ಯಾಕಿಂಗ್‌ ಸ್ಥಾವರ, ಹಾಲು ಸ್ಯಾಚೆಟ್‌ ಪ್ಯಾಕಿಂಗ್‌ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, “ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಾಲು ಸಂಸ್ಕರಣಾ ಹಾಗೂ ಹಾಲು ಸ್ಯಾಚೆಟ್‌ ಪ್ಯಾಕಿಂಗ್‌ ಘಟಕವನ್ನು ಸ್ಥಾಪಿಸಲಾಗಿದೆ. ಎಂಬತ್ತು ಸಾವಿರ ಲೀ. ಒಂದು ಲಕ್ಷ ಲೀಟರ್‌ ಹಾಲನ್ನು ಟೆಟ್ರಾ ಪ್ಯಾಕ್‌ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಯಾಚೆಟ್‌ ಹಾಲು ಘಟಕದ ಸಾಮರ್ಥ್ಯ 25 ರಿಂದ 50 ಸಾವಿರ ಲೀ. ಇದೆ ” ಎಂದರು.

ಅತ್ಯಾಧುನಿಕ ತಂತ್ರಜ್ಞಾನದ ಜರ್ಮನ್‌ ದೇಶದಿಂದ ಆಮದು ಮಾಡಿಕೊಂಡ ಯಂತ್ರವನ್ನು ಅಳವಡಿಸಲಾಗಿದೆ. ಗುಡ್‌ ಲೈಫ್‌ ಹೆಸರಿನಲ್ಲಿ ತಯಾರಾಗುವ ಹಾಲಿನ ಪೊಟ್ಟಣವನ್ನು ಆರು ತಿಂಗಳ ವರೆಗೆ ಯಾವುದೇ ಶಿಥಿಲಿಕರಣ ವ್ಯವಸ್ಥೆ ಇಲ್ಲದೇ ಬಳಸಬಹುದಾಗಿದೆ. ಕರ್ನಾಟಕದಲ್ಲಿ ಅತ್ಯುನ್ನತ ತಂತ್ರಜ್ಞಾನದ ಸ್ಯಾಚೆಟ್‌ ಪ್ಯಾಕೆಟ್‌ ತಯಾರಿಸುವ ಘಟಕ ಹಾವೇರಿಯಲ್ಲಿ ಸ್ಥಾಪಿಸಲಾಗಿದೆ. ಇದರೊಂದಿಗೆ ನೂರು ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆಗೆ ದೊರೆತಿದೆ ಎಂದರು.

ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದ್ದತೆ ಕಾರಣವಾಗಿದೆ. ನೂರ ಇಪ್ಪತ್ತು ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಆರು ಎಕರೆ ವಿಸ್ತೀರ್ಣದಲ್ಲಿ ಯುಎಚ್‌ಟಿ ಘಟಕ ಸ್ಥಾಪನೆಯಾಗಿರುವುದು ಸಂತಸ ತಂದಿದೆ ಎಂದು ಸಹಕಾರ ಖಾತೆ ಸಚಿತ ಎಸ್‌. ಟಿ. ಸೋಮಶೇಖರ್‌ ಹೇಳಿದರು. ನಗರದಲ್ಲಿ ಮೆಗಾ ಡೇರಿ ಘಟಕ ಉದ್ಘಾಟನೆ ಮಾಡುವ ಮೂಲಕ ಹಾಲು ಉತ್ಪಾದಕ ರೈತರ ಆಶೋತ್ತರಗಳನ್ನು ಈಡೇರಿಸದ ಸಮಾಧಾನವಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು

ಇದನ್ನೂ ಓದಿ : Challagatta to Whitefield Metro: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಿಕ್ತು ಉತ್ತರ: ಸದ್ಯದಲ್ಲೇ ಸಂಚಾರ ಆರಂಭಿಸಲಿದೆ ಚಲ್ಲಘಟ್ಟ ಟೂ ವೈಟಫೀಲ್ಡ್ ಮೆಟ್ರೋ

UHT milk processing event: Individual milk union demand fulfillment: New UHT milk processing event launched

Comments are closed.