Unethical activity in Bangalore: ರಾಜ್ಯ ರಾಜಧಾನಿಯಲ್ಲಿ ಹೆಚ್ಚಿದ ಅನೈತಿಕ ಚಟುವಟಿಕೆ: ಸ್ಕೈವಾಕ್‌ ಮೇಲೆ ತ್ಯಾಜ್ಯ, ಕಾಂಡೋಮ್‌ ಪತ್ತೆ

ಬೆಂಗಳೂರು : (Unethical activity in Bangalore) ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಜನರು ರಸ್ತೆ ದಾಟಲು ಭಯ ಪಡುವಂತಹ ಸ್ಥಿತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಪಾಲಿಕೆ ಸ್ಕೈವಾಕ್‌ ನಿರ್ಮಾಣ ಮಾಡಿದ್ದು, ಒಂದೆಡೆಯಲ್ಲಿ ಸ್ಕೈವಾಕ್‌ ಶಿಥಿಲಾವಸ್ಥೆಗೆ ತಲುಪಿದೆ. ಇನ್ನೊಂದೆಡೆ ಅನೈತಿಕ ಚಟುವಟಿಕೆಗಳಿಗೆ ಸಾಕ್ಷಿಯಗುತ್ತಿದೆ. ಸ್ಕೈವಾಕ್‌ ಮೇಲೆ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾದ ತ್ಯಾಜ್ಯಗಳು ಪತ್ತೆಯಾಗುತ್ತಿದ್ದು, ಜನರಿಗೆ ಶಾಕ್‌ ನೀಡುತ್ತಿದೆ.

ಸಿಲಿಕಾನ್‌ ಸಿಟಿಯಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ನಗರದ ಕೆಲವೆಡೆ ಬೆಂಗಳೂರು ಮಹಾನಗರ ಪಾಲಿಕೆ ಸ್ಕೈವಾಕ್‌ ನಿರ್ಮಾಣ ಮಾಡಿದೆ. ಆದರೆ ಒಂದಷ್ಟು ಮಂದಿ ಮಾತ್ರ ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹೌದು ಬೆಂಗಳೂರಿನ ಮೆಜೆಸ್ಟಿಕ್​ನ ಸಮೀಪದ ಸಂತೋಷ್ ಥಿಯೇಟರ್​ ಬಳಿ ಇರುವ ಸ್ಕೈವಾಕ್​ ಜನರಿಗೆ ಸದುಪಯೋಗ ಆಗದೇ, ಪುಂಡರ ಅಡ್ಡವಾಗಿ ಮಾರ್ಪಟ್ಟಿದೆ. ಸ್ಕೈವಾಕ್‌ನಲ್ಲೇ ಕಾಂಡೋಮ್, ಮದ್ಯದ ಬಾಟಲಿ, ವೈಟ್ನರ್​, ಸಿಗರೇಟ್ ಸೇರಿದಂತೆ ಹಲವು ತ್ಯಾಜ್ಯ ವಸ್ತುಗಳು ಪತ್ತೆಯಾಗುತ್ತಿದೆ. ಇದೀಗ ಬೆಂಗಳೂರು ಜನರಿಗೆ ಈ ಸ್ಕೈವಾಕ್​ ಮೇಲೆ ಓಡಾಡೋದಕ್ಕೂ ಭಯ ಶುರುವಾಗಿದೆ.

ಮೊದಲೇ ಬೆಂಗಳೂರಿನಲ್ಲಿ ಪುಂಡರ ಹಾವಳಿಗಳು ಹೆಚ್ಚುತ್ತಿದ್ದು, ಕಂಡಕಂಡಲ್ಲೇ ಕೊಲೆ ಮಾಡುವುದು, ಹಾಡಹಗಲೇ ಒಬ್ಬರ ಜೀವ ತೆಗೆಯುವುದು, ಅತ್ಯಾಚಾರ, ಅಪಹರಣದಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಈಗಾಗಲೇ ಇಂತಹ ಪ್ರಕರಣಗಳಿಂದ ಬೇಸತ್ತ ಜನರು ಇದೀಗ ರಸ್ತೆಯಲ್ಲಿ ಓಡಾಡುವಾಗಲು ಛೀಮಾರಿ ಹಾಕಿಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ಸಿಲಿಕಾನ್‌ ಸಿಟಿ ಎನ್ನುವುದು ದಿನೇ ದಿನೇ ಅಪರಾಧಿಗಳ ಬೀಡಾಗಿ ಮಾರ್ಪಾಡಾಗುತ್ತಿದೆ.

ಇದನ್ನೂ ಓದಿ : Karnataka Election date announce : ಮೇ 10 ಕ್ಕೆ ಚುನಾವಣೆ : 13 ಕ್ಕೆ ಚುನಾವಣಾ ಫಲಿತಾಂಶ

ಇದನ್ನೂ ಓದಿ : Industrial Planning Proposal Clear: 3,451.24 ಕೋಟಿ ಹೂಡಿಕೆಯ 55 ಕೈಗಾರಿಕಾ ಯೋಜನೆ ಪ್ರಸ್ತಾವನೆ ತೆರವುಗೊಳಿಸಿದ ರಾಜ್ಯ ಸರಕಾರ

ಇದನ್ನೂ ಓದಿ : ಮೇ ಮೊದಲ ವಾರ ಕರ್ನಾಟಕ ವಿಧಾನಸಭಾ ಚುನಾವಣೆ : ಇಂದೇ ಮುಹೂರ್ತ ಫಿಕ್ಸ್

Unethical activity in Bangalore: Increased unethical activity in state capital: Garbage, condom found on skywalk

Comments are closed.