ಕಡಿಮೆ ಬಜೆಟ್‌ನಲ್ಲಿ 5G ಸ್ಮಾರ್ಟ್‌ಫೋನ್ : 200MP ಕ್ಯಾಮೆರಾ, ಭರ್ಜರಿ ಬ್ಯಾಟರಿ ಇರೋ ಈ ಫೋನ್ ಬೆಲೆ ಎಷ್ಟು ಗೊತ್ತಾ ?

best budget 5g smartphones : ಭಾರತದ ಪ್ರಮುಖ ಸ್ಮಾರ್ಟ್‌ಪೋನ್‌ ಕಂಪೆನಿಗಳಾದ ವಿವೋ (Vivo), ಸ್ಯಾಮ್‌ಸಂಗ್ (Samsung) ಮತ್ತು ಒನ್‌ಪ್ಲಸ್ (OnePlus) ಸಂಸ್ಥೆಗಳು ಕೇವಲ 15 ರಿಂದ 20 ಸಾವಿರ ರೂಪಾಯಿ ಆಸುಪಾಸಿನಲ್ಲಿ ಡಿಎಸ್‌ಎಲ್‌ಆರ್ (DSLR) ಮಾದರಿಯ 200 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್‌ಗಳನ್ನು ಜೂನ್ ಮೊದಲ ವಾರದಲ್ಲೇ ಬಿಡುಗಡೆ ಮಾಡುತ್ತಿವೆ.

best budget 5g smartphones : ನೀವೇನಾದ್ರೂ ಜೂನ್ ತಿಂಗಳಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಸುದ್ದಿ. ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಪ್ರೀಮಿಯಂ ಫೀಚರ್ಸ್ ಹೊಂದಿರುವ ಬಜೆಟ್ ಫ್ರೆಂಡ್ಲಿ 5G ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜುಗೊಳಿಸಿವೆ.

ಭಾರತದ ಪ್ರಮುಖ ಸ್ಮಾರ್ಟ್‌ಪೋನ್‌ ಕಂಪೆನಿಗಳಾದ ವಿವೋ (Vivo), ಸ್ಯಾಮ್‌ಸಂಗ್ (Samsung) ಮತ್ತು ಒನ್‌ಪ್ಲಸ್ (OnePlus) ಸಂಸ್ಥೆಗಳು ಕೇವಲ 15 ರಿಂದ 20 ಸಾವಿರ ರೂಪಾಯಿ ಆಸುಪಾಸಿನಲ್ಲಿ ಡಿಎಸ್‌ಎಲ್‌ಆರ್ (DSLR) ಮಾದರಿಯ 200 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್‌ಗಳನ್ನು ಜೂನ್ ಮೊದಲ ವಾರದಲ್ಲೇ ಬಿಡುಗಡೆ ಮಾಡುತ್ತಿವೆ.

200MP ಕ್ಯಾಮೆರಾ ಮತ್ತು ಭರ್ಜರಿ ಬ್ಯಾಟರಿ ಲೈಫ್!

ಈ ಹೊಸ ತಲೆಮಾರಿನ ಬಜೆಟ್ 5G ಫೋನ್‌ಗಳಲ್ಲಿ ಕೇವಲ ಕ್ಯಾಮೆರಾ ಮಾತ್ರವಲ್ಲದೆ, ಇಡೀ ದಿನ ಗೇಮಿಂಗ್ ಮತ್ತು ರೀಲ್ಸ್ ನೋಡಿದರೂ ಮುಗಿಯದ 6000mAh ಸಾಮರ್ಥ್ಯದ ದೈತ್ಯ ಬ್ಯಾಟರಿ ಹಾಗೂ 80W ವರೆಗಿನ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರೊಂದಿಗೆ ನಯವಾದ ಅಲ್ಟ್ರಾ-ಸ್ಲಿಮ್ ಡಿಸೈನ್ ಹಾಗೂ ಸ್ಮೂತ್ ಸ್ಕ್ರಾಲಿಂಗ್‌ಗಾಗಿ 120Hz ರಿಫ್ರೆಶ್ ರೇಟ್ ಹೊಂದಿರುವ ಅಮೊಲೆಡ್ (AMOLED) ಡಿಸ್ಪ್ಲೇ ಇರಲಿದೆ.

ಆಫರ್ ಬೆಲೆ ಮತ್ತು ಲಾಂಚ್ ಆಫರ್ಸ್

ಮೂಲಗಳ ಪ್ರಕಾರ, ಆರಂಭಿಕ ಲಾಂಚ್ ಆಫರ್ ಆಗಿ ಪ್ರಮುಖ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಖರೀದಿ ಮಾಡುವ ಗ್ರಾಹಕರಿಗೆ ತಕ್ಷಣವೇ 2,000 ರೂಪಾಯಿವರೆಗೆ ಫ್ಲಾಟ್ ಡಿಸ್ಕೌಂಟ್ ಸಿಗಲಿದೆ. ಇದರ ಜೊತೆಗೆ ಹಳೆಯ ಫೋನ್‌ಗಳಿಗೆ ಅತ್ಯುತ್ತಮ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿರಲಿದೆ.

best budget 5g smartphones launching in india June 2026

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories