ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾ ಫೋನ್‌ ದರದಲ್ಲಿ ಭಾರಿ ಕಡಿತ! ಪ್ರೀಮಿಯಂ ಆಂಡ್ರಾಯ್ಡ್‌ ಫೋನ್‌ ಖರೀದಿಗೆ ಸಕಾಲ

Samsung Galaxy S24 Ultra Price To Drop: ಇ–ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ತನ್ನ ಮುಂಬರುವ ಬಿಗ್‌ ಬಿಲಿಯನ್‌ ಡೇ ಸೇಲ್‌ ನ ಟೀಸರ್‌ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಅದರ ಪ್ರಕಾರ ಈ ಮಾರಾಟವು ಇದೇ ಸೆಪ್ಟೆಂಬರ್‌ 23 ರಿಂದ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್‌ ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌, ಇಯರ್‌ ಬಡ್‌ ಇತ್ಯಾದಿಗಳಿಗೆ ಹೆಚ್ಚಿನ ಡೀಲ್‌ ಗಳನ್ನು ಕಾಣಬಹುದಾಗಿದೆ.

ಇದು ಐಫೋನ್‌ 16, ಐಫೋನ್ 16 ಪ್ರೊ ಮ್ಯಾಕ್ಸ್‌, ಐಫೋನ್ 15 ಮುಂತಾದ ಐಫೋನ್‌ ಮಾದರಿಗಳಿಗೆ ಅಧಿಕೃತವಾಗಿ ಅಧ್ಭುತ ಡೀಲ್‌ಗಳನ್ನು ಪ್ರಕಟಿಸಿದೆ. ಆದರೆ ನೀವು ಪ್ರೀಮಿಯಂ ಆಂಡ್ರಾಯ್ಡ್‌ ಫೋನ್‌ ಖರೀದಿಸುವ ಯೋಚನೆಯಿದ್ದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾ ಫೋನ್‌ ನಿಮ್ಮ ಆಯ್ಕೆಗಳಲ್ಲಿ ಒಂದು ಎಂದು ತಿಳಿಯಬಹುದು.

ಏಕೆಂದರೆ ಇತ್ತೀಚೆಗೆ ಸೋರಿಕೆಯಾದ ಮಾಹಿತಿಯ ಪ್ರಕಾರ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾದ ಬೆಲೆ ಬಹಳಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

Samsung Galaxy S24 Ultra ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾ ಬೆಲೆ

ಫ್ಲಿಪ್‌ಕಾರ್ಟ್‌ ಇನ್ನೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾ ದ ಡೀಲ್‌ ಬೆಲೆಯನ್ನು ಬಹಿರಂಗಪಡಿಸಿಲ್ಲವಾದರೂ ಸೋರಿಕೆಯಾದ ಮಾಹಿತಿಯ ಪ್ರಕಾರ ಕಳೆದ ವರ್ಷದ ಸ್ಯಾಮ್‌ಸಂಗ್‌ ಫ್ಲಾಗ್‌ಶಿಪ್‌ ಫೋನ್ ನ ಬೆಲೆ 60,000 ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ.

ಸೋರಿಕೆಯಾದ ಟೀಸರ್‌ನ ಪ್ರಕಾರ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾ ಕ್ಯಾಶ್‌ಬ್ಯಾಕ್‌ ಮತ್ತು ಬ್ಯಾಂಕ್‌ ಕೊಡುಗೆಯೊಂದಿಗೆ 59,999ಕ್ಕೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಆದರೆ ಅದರ 256ಜಿಬಿ ಸ್ಟೋರೇಜ್‌ ರೂಪಾಂತರವು 1,29,999ಕ್ಕೆ ಬಿಡುಗಡೆ ಮಾಡಲಾಗಿತ್ತು. ಅದರ ಪ್ರಸ್ತುತ ಬೆಲೆಯನ್ನು 83,990ಕ್ಕೆ ಡೀಲ್‌ ಮಾಡಲಾಗಿದೆ.

ಇದನ್ನು ಗಮನಿಸಿದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾ ಫೋನ್‌ ಕಡಿಮೆ ಬೆಲೆಗೆ ಸಿಗಬಹುದು ಎಂದು ಅಂದಾಜಿಸಬಹುದಾಗಿದೆ.

ಇದನ್ನೂ ಓದಿ: ಬಾಲಕಿಯರೇ ಗಮನಿಸಿ! ಉನ್ನತ ಶಿಕ್ಷಣಕ್ಕಾಗಿ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ 2025 ಕ್ಕೆ ಇಂದೇ ಅರ್ಜಿ ಸಲ್ಲಿಸಿ

ಸೋರಿಕೆಯಾದ ಮಾಹಿತಿ ನಿಜವಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 24 ಅಲ್ಟ್ರಾ ಮಾರಾಟ ಸಮಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಪಡೆಯಲಿದೆ. ಇಷ್ಟೇ ಅಲ್ಲೇ ಈ ಡೀಲ್‌ ಬೆಲೆ ನಿಜವಾಗಿಯೂ ಲೈವ್‌ ಆದರೆ, ಆ ಬೆಲೆಯನ್ನು ಕೆಲವು ನಿಮಿಷಗಳವರೆಗೆ ಮಾತ್ರ ಗ್ರಾಹಕರಿಗೆ ನೀಡಬಹುದು.

ಫ್ಲಿಪ್‌ಕಾರ್ಟ್‌ನಲ್ಲಿ ಈಗಾಗಲೇ ಬಹಿರಂಗಪಡಿಸಲಾದ ಡೀಲ್‌ಗಳು

  • ಸ್ಯಾಮ್‌ಸಂಗ್ ಗ್ಯಾಲಕ್ಸಿ S24: 40,000 ರೂ.ಗಿಂತ ಕಡಿಮೆ
  • ಐಫೋನ್ 16: 51,999 ರೂ.
  • ಐಫೋನ್ 16 ಪ್ರೊ: 69,999 ರೂ. (ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ರೂ. 5000 ರಿಯಾಯಿತಿ ಸೇರಿ)
  • ಐಫೋನ್ 16 ಪ್ರೊ ಮ್ಯಾಕ್ಸ್: 89,999 ರೂ. (ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ರೂ. 5000 ರಿಯಾಯಿತಿ ಸೇರಿ)

ಇದನ್ನೂ ಓದಿ: ಇನ್ನಷ್ಟು ಅಗ್ಗವಾದ ಮಾರುತಿ ಆಲ್ಲೊ ಕೆ10: ಹಬ್ಬದ ಸೀಸನ್‌ನ್ನಲ್ಲಿ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್!

(Buy Samsung Galaxy S24 Ultra phone below 60000 rs in upcoming Flipkart big billion day sale)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories