ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರದ ಬಂಪರ್ ಯೋಜನೆ! ಸುರಕ್ಷಿತ ಹೂಡಿಕೆ, ಉತ್ತಮ ಬಡ್ಡಿ

ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರದ ಎಸ್‌ಸಿಎಸ್‌ಎಸ್ ಯೋಜನೆ ಸುರಕ್ಷಿತ ಹೂಡಿಕೆಯೊಂದಿಗೆ ಉತ್ತಮ ಬಡ್ಡಿ ನೀಡುತ್ತಿದ್ದು ತ್ರೈಮಾಸಿಕ ಆದಾಯ ಹಾಗೂ ತೆರಿಗೆ ಸೌಲಭ್ಯಗಳ ಲಾಭ ಪಡೆಯುವ ಅವಕಾಶವನ್ನು ಒದಗಿಸುತ್ತದೆ.

ಕೇಂದ್ರ ಸರ್ಕಾರವು ಹಿರಿಯ ನಾಗರಿಕರು ಹಾಗೂ ನಿವೃತ್ತಿ ಹೊಂದಿದವರ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಗರಿಕರ ಉಳಿತಾಯ ಯೋಜನೆ ಎಸ್‌ಸಿಎಸ್‌ಎಸ್ ಅನ್ನು ಜಾರಿಗೊಳಿಸಿದೆ. ಸುರಕ್ಷಿತ ಹೂಡಿಕೆಯೊಂದಿಗೆ ನಿಗದಿತ ಆದಾಯ ಬಯಸುವವರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.

ಪ್ರಸ್ತುತ ಈ ಯೋಜನೆಯಲ್ಲಿ ವಾರ್ಷಿಕ ಶೇ 8.2ರಷ್ಟು ಬಡ್ಡಿದರ ದೊರೆಯುತ್ತಿದೆ. ಹೂಡಿಕೆದಾರರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ನಿವೃತ್ತಿ ನಂತರ ನಿಯಮಿತ ಆದಾಯ ಬಯಸುವವರಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ.

ತಿಂಗಳಿಗೆ ಸುಮಾರು 20 ಸಾವಿರ ರೂಪಾಯಿ ಆದಾಯ ಪಡೆಯಲು ಬಯಸುವವರು ವರ್ಷಕ್ಕೆ ಸುಮಾರು 2.40 ಲಕ್ಷ ರೂಪಾಯಿ ಬಡ್ಡಿ ಆದಾಯ ಗಳಿಸಬೇಕಾಗುತ್ತದೆ. ಇದಕ್ಕಾಗಿ ಅಂದಾಜು 29.27 ಲಕ್ಷ ರೂಪಾಯಿಗಳಷ್ಟು ಹೂಡಿಕೆ ಅಗತ್ಯವಾಗುತ್ತದೆ. ಈ ಹೂಡಿಕೆಗೆ ಲಭ್ಯವಾಗುವ ಬಡ್ಡಿಯನ್ನು ತ್ರೈಮಾಸಿಕವಾಗಿ ಸುಮಾರು 60 ಸಾವಿರ ರೂಪಾಯಿಗಳಂತೆ ಪಡೆಯಬಹುದು.

ಈ ಯೋಜನೆಯ ಮತ್ತೊಂದು ವಿಶೇಷತೆ ಎಂದರೆ ಹಳೆಯ ತೆರಿಗೆ ಪದ್ಧತಿ ಅನುಸರಿಸುವವರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ದೊರೆಯುತ್ತದೆ. ಆದರೆ ಯೋಜನೆಯಿಂದ ದೊರೆಯುವ ಬಡ್ಡಿ ಆದಾಯಕ್ಕೆ ಅನ್ವಯಿಸುವ ತೆರಿಗೆ ನಿಯಮಗಳು ಜಾರಿಯಲ್ಲಿರುತ್ತವೆ. ನಿಗದಿತ ಮಿತಿಯನ್ನು ಮೀರುವ ಬಡ್ಡಿ ಆದಾಯಕ್ಕೆ ಟಿಡಿಎಸ್ ಕಡಿತವಾಗುವ ಸಾಧ್ಯತೆ ಇದೆ. ಅಗತ್ಯವಿದ್ದರೆ ಅರ್ಹರು ಫಾರ್ಮ್ 15ಜಿ ಅಥವಾ 15ಎಚ್ ಸಲ್ಲಿಸಬಹುದು.

ಎಸ್‌ಸಿಎಸ್‌ಎಸ್ ಖಾತೆಯ ಅವಧಿ ಐದು ವರ್ಷಗಳಾಗಿದ್ದು, ನಂತರ ಮತ್ತಷ್ಟು ಮೂರು ವರ್ಷಗಳ ಕಾಲ ವಿಸ್ತರಿಸಿಕೊಳ್ಳುವ ಅವಕಾಶವೂ ಇದೆ. ಅವಧಿ ಪೂರ್ಣಗೊಂಡ ಬಳಿಕ ಖಾತೆಯನ್ನು ಮುಚ್ಚಬಹುದು. ಖಾತೆದಾರರ ಮರಣದ ಸಂದರ್ಭದಲ್ಲಿ ಖಾತೆ ಮುಚ್ಚುವವರೆಗೆ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯಿಸುವ ಬಡ್ಡಿದರದಂತೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories