ಭಾರತದಲ್ಲಿ ಬಂದ್‌ ಆಗುತ್ತಾ ಒನ್‌ಪ್ಲಸ್‌ ಫೋನ್‌ ವ್ಯಾಪಾರ? ಇಲ್ಲಿದೆ ಖಚಿತ ಮಾಹಿತಿ

OnePlus shutdown in India: ಈ ವಿಷಯವಾಗಿ ಗ್ರಾಹಕರಲ್ಲಿ ಉಂಟಾಗಿದ್ದ ಆತಂಕಕ್ಕೆ ಈಗ ಒನ್‌ಪ್ಲಸ್ ಇಂಡಿಯಾ ಸಿಇಒ ರಾಬಿನ್ ಲಿಯು (Robin Liu) ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ.

OnePlus CEO clarifies about Shutdown in India Rumors

OnePlus shutdown in India:: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ಒನ್‌ಪ್ಲಸ್’ (OnePlus) ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ ಮತ್ತು ಕಂಪನಿಯನ್ನು ಹಂತಹಂತವಾಗಿ ಮುಚ್ಚಲಾಗುತ್ತಿದೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದವು. ಈ ವಿಷಯವಾಗಿ ಗ್ರಾಹಕರಲ್ಲಿ ಉಂಟಾಗಿದ್ದ ಆತಂಕಕ್ಕೆ ಈಗ ಒನ್‌ಪ್ಲಸ್ ಇಂಡಿಯಾ ಸಿಇಒ ರಾಬಿನ್ ಲಿಯು (Robin Liu) ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ.

ವದಂತಿಗೆ ಕಾರಣವೇನು?

ವಿದೇಶಿ ತಂತ್ರಜ್ಞಾನ ವೆಬ್‌ಸೈಟ್ ‘ಆಂಡ್ರಾಯ್ಡ್ ಹೆಡ್‌ಲೈನ್ಸ್’ ಪ್ರಕಟಿಸಿದ ವರದಿಯೊಂದು ಈ ಗೊಂದಲಕ್ಕೆ ನಾಂದಿ ಹಾಡಿತ್ತು. ಒನ್‌ಪ್ಲಸ್‌ನ ಮಾತೃ ಸಂಸ್ಥೆಯಾದ ಒಪ್ಪೋ (OPPO), ಆಂತರಿಕ ಪುನರ್ರಚನೆಯ ಭಾಗವಾಗಿ ಒನ್‌ಪ್ಲಸ್ ಬ್ರ್ಯಾಂಡ್ ಅನ್ನು ಹಂತಹಂತವಾಗಿ ವಿಲೀನಗೊಳಿಸುತ್ತಿದೆ, ಹಲವು ಹೊಸ ಉತ್ಪನ್ನಗಳ ಬಿಡುಗಡೆಯನ್ನು ರದ್ದುಗೊಳಿಸಿದೆ ಮತ್ತು ಜಾಗತಿಕವಾಗಿ ತಂಡದ ಗಾತ್ರವನ್ನು ಕಡಿಮೆ ಮಾಡುತ್ತಿದೆ ಎಂದು ಆ ವರದಿ ಹೇಳಿತ್ತು. ಇದು ಭಾರತದ ಮಾರುಕಟ್ಟೆಯಲ್ಲೂ ಒನ್‌ಪ್ಲಸ್ ವ್ಯವಹಾರ ನಿಲ್ಲಿಸಲಿದೆ ಎಂಬ ಸಂಶಯಕ್ಕೆ ದಾರಿಯೊಂತಿತ್ತು.

ಸಿಇಒ ನೀಡಿದ ಸ್ಪಷ್ಟನೆ:

ಈ ವದಂತಿಗಳನ್ನು ಕಟುವಾಗಿ ಅಲ್ಲಗಳೆದಿರುವ ರಾಬಿನ್ ಲಿಯು, “ನಮ್ಮ ಕಂಪನಿಯ ಬಗ್ಗೆ ಹರಡುತ್ತಿರುವ ಸುದ್ದಿಗಳು ಸುಳ್ಳು ಮತ್ತು ದಿಕ್ಕು ತಪ್ಪಿಸುವಂತದ್ದಾಗಿವೆ. ಭಾರತದಲ್ಲಿ ಒನ್‌ಪ್ಲಸ್ ಕಾರ್ಯಾಚರಣೆ ಎಂದಿನಂತೆ ಸಹಜವಾಗಿ ನಡೆಯುತ್ತಿದೆ. ನಾವು ನಮ್ಮ ಗ್ರಾಹಕರಿಗೆ ನೀಡಿದ ಭರವಸೆಯಂತೆ ಅತ್ಯುತ್ತಮ ಉತ್ಪನ್ನ ಮತ್ತು ಸೇವೆಯನ್ನು ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಎಕ್ಸ್ (X) ಖಾತೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಕಂಪನಿಯ ಅಧಿಕೃತ ಘೋಷಣೆಗಳನ್ನು ಮಾತ್ರ ನಂಬುವಂತೆ ಅವರು ವಿನಂತಿಸಿದ್ದಾರೆ.

ಜಿಯೋ, ಏರ್​ಟೆಲ್​ ಬಳಕೆದಾರರಿಗೆ ಬಿಗ್​ ಶಾಕ್​ : ರೀಚಾರ್ಜ್​ ದರ ಶೀಘ್ರದಲ್ಲೇ ಮತ್ತಷ್ಟು ಏರಿಕೆ

ಭಾರತಕ್ಕೆ ಒನ್‌ಪ್ಲಸ್ ಬದ್ಧತೆ:

ಕಂಪನಿಯ ಪ್ರಕಾರ, ಭಾರತವು ಒನ್‌ಪ್ಲಸ್ ಪಾಲಿಗೆ ಅತಿ ದೊಡ್ಡ ಮತ್ತು ಪ್ರಮುಖ ಮಾರುಕಟ್ಟೆಯಾಗಿದೆ.

  • ಕಾರ್ಯಾಚರಣೆ: ಎಲ್ಲ ರಿಟೇಲ್ ಮಳಿಗೆಗಳು ಮತ್ತು ಸೇವಾ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
  • ಹೊಸ ಉತ್ಪನ್ನಗಳು: ಕಂಪನಿಯು ತನ್ನ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆಯೇ ಹೊರತು ವ್ಯವಹಾರ ನಿಲ್ಲಿಸುತ್ತಿಲ್ಲ. ಇತ್ತೀಚೆಗಷ್ಟೇ ಒನ್‌ಪ್ಲಸ್ 15 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
  • ಸೇವೆ: ಈಗಾಗಲೇ ಫೋನ್ ಖರೀದಿಸಿರುವ ಗ್ರಾಹಕರಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಮಾರಾಟದ ನಂತರದ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.

ಒಟ್ಟಾರೆಯಾಗಿ, ಒನ್‌ಪ್ಲಸ್ ಕಂಪನಿಯು ಒಪ್ಪೋದೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡುತ್ತಿರುವುದರಿಂದ ಕೆಲವು ಬದಲಾವಣೆಗಳಾಗುತ್ತಿವೆ ಅಷ್ಟೇ, ಆದರೆ ಬ್ರ್ಯಾಂಡ್ ಮುಚ್ಚುವ ಯಾವುದೇ ಯೋಜನೆ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

Scroll to Top