ಭಾರತದಲ್ಲಿ ಮತ್ತೆ ಶುರುವಾಗುತ್ತೆ ಟಿಕ್ ಟಾಕ್ !

0

ನವದೆಹಲಿ : ಚೀನಾ- ಭಾರತ ನಡುವೆ ಸಂಘರ್ಷವಾಗುತ್ತಿದ್ದಂತೆಯೇ ಚೀನಾ ಮೂಲದ್ದು ಅನ್ನುವ ಕಾರಣಕ್ಕೆ ಕೇಂದ್ರ ಸರಕಾರ ಟಿಕ್ ಟಾಕ್ ಆಪ್ ಬ್ಯಾನ್ ಮಾಡಿದೆ. ಭಾರತದಲ್ಲಿ ಬ್ಯಾನ್ ಆಗಿರುವ ಶಾರ್ಟ್​ ವಿಡಿಯೋ ಆ್ಯಪ್​ ಟಿಕ್​ಟಾಕ್​ ಇದೀಗ ಭಾರತದಲ್ಲಿ ಮತ್ತೆ ಸೇವೆ ಆರಂಭಿಸುವ ಉತ್ಸಾಹದಲ್ಲಿದೆ.

ಭಾರತದಲ್ಲಿ ಕೋಟ್ಯಾಂತರ ಗ್ರಾಹಕರನ್ನು ಹೊಂದಿದ್ದ ಶಾಟ್ ವಿಡಿಯೋ ಆ್ಯಪ್ ಟಿಕ್ ಟಾಕ್ ಸಾಕಷ್ಟು ಜನಪ್ರಿಯವಾಗಿತ್ತು. ಟಿಕ್ ಟಾಕ್ ನಿಂದಲೇ ಬೈಟ್ ಡ್ಯಾನ್ಸ್ ಕಂಪೆನಿ ಕೋಟ್ಯಾಂತರ ರೂಪಾಯಿ ಆದಾಯವನ್ನೂ ಪಡೆಯುತ್ತಿತ್ತು. ಆದರೆ ಚೀನಾ ಮೂಲಕ ಕಂಪೆನಿಯಾಗಿರುವ ಟಿಕ್ ಟಾಕ್ ಚೀನಾಗೆ ಭಾರತೀಯ ಗ್ರಾಹಕರ ಗೌಪ್ಯ ಮಾಹಿತಿಯನ್ನ ಪಾಪಿ ಚೀನಾಗೆ ರವಾನಿಸುತ್ತಿದೆ ಎಂಬ ಕಾರಣಕ್ಕೆ ನಿಷೇಧಕ್ಕೆ ಒಳಗಾಗಿದೆ. ಜಾಗತಿಕವಾಗಿ ಉತ್ತಮ ವಹಿವಾಟು ಸಂಬಂಧ ಉಳಿಸಿಕೊಳ್ಳಲು ಚೀನಾದಿಂದ ಅಂತರ ಕಾಪಾಡಿಕೊಳ್ಳಲೇಬೇಕಿದೆ. ಹೀಗಾಗಿ ತನ್ನ ಕೇಂದ್ರ ಸ್ಥಾನವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದು, ಚೀನಾವನ್ನೇ ಬಿಟ್ಟೋಡುತ್ತಿದೆ.

ಇಂಗ್ಲೆಂಡ್​ನಲ್ಲಿ ತನ್ನ ಮುಖ್ಯ ಕಚೇರಿ ಆರಂಭಿಸಲು ಇಂಗ್ಲೆಂಡ್ ಸರಕಾರದೊಂದಿಗೆ ಮಾತುಕತೆ ನಡೆಸಿದೆ. ಅಲ್ಲದೇ ಕೇಂದ್ರ ಕಚೇರಿಗೆ ಲಂಡನ್​ ಸೇರಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಸ್ಥಳವೂ ಅಂತಿಮವಾಗಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ. ಭಾರತದ ಬಳಿಕ ಅಮೆರಿಕ ಕೂಡ ಚೀನಿ ಆ್ಯಪ್​ಗಳನ್ನು ನಿಷೇಧಿಸಿದೆ. ಹಲವು ಐರೋಪ್ಯ ದೇಶಗಳಲ್ಲೂ ಇದರ ಚೀನಾ ಮೂಲದ ಬಗ್ಗೆ ಅಸಮಾಧಾನವಿದೆ. ಈ ಕಾರಣಕ್ಕಾಗಿ ಚೀನಾದಿಂದ ಹೊರಗಿದ್ದುಕೊಂಡೇ ಕಾರ್ಯಾಚರಿಸಲು ಕಂಪನಿ ಯೋಜನೆ ರೂಪಿಸಿದೆ.

ಲಂಡನ್​ ಹೊರತುಪಡಿಸಿ ಬೇರಾವ ಸ್ಥಳಗಳನ್ನು ಕಂಪನಿ ಗುರುತಿಸಿದೆ ಎನ್ನುವುದು ಖಚಿತವಾಗಿಲ್ಲ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿನ ಸಿಬ್ಬಂದಿ ಹೊಂದಿದೆ. ಅಲ್ಲದೇ, ಅಮೆರಿಕದ ಕೆವಿನ್​ ಮೇಯರ್​ ಇದರ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಹೀಗಾಗಿ ಅಮೆರಿಕದಲ್ಲೂ ನೆಲೆ ಕಂಡುಕೊಳ್ಳಬಹುದು ಎಂದು ಹೇಳಲಾಗಿದೆ. ಒಂದೊಮ್ಮೆ ಟಿಕ್ ಟಾಕ್ ಚೀನಾದಿಂದ ದೂರವುಳಿದಿದ್ದೇ ಆದಲ್ಲಿ ಮತ್ತೆ ಭಾರತದಲ್ಲಿ ಆ್ಯಪ್​ ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.

Leave A Reply

Your email address will not be published.