ಯೂಟ್ಯೂಬ್ನಿಂದ ಭರ್ಜರಿ ಕೊಡುಗೆ: ಇನ್ಮುಂದೆ ‘ಫ್ರೀ’ ಬಳಕೆದಾರರಿಗೂ ಸಿಗಲಿದೆ ಪಿಕ್ಚರ್-ಇನ್-ಪಿಕ್ಚರ್ ಫೀಚರ್
ದೀರ್ಘಾವಧಿಯ ಪಾಡ್ಕಾಸ್ಟ್ ಅಥವಾ ಟಾಕ್ ಶೋ ನೋಡುವವರಿಗೆ ಇದು ವರದಾನ. ಕಮೆಂಟ್ ಮತ್ತು ಶಿಫಾರಸುಗಳ ಕಿರಿಕಿರಿ ಇಲ್ಲದೆ, ಸರಳ ಇಂಟರ್ಫೇಸ್ ಮೂಲಕ ಹ್ಯಾಂಡ್ಸ್-ಫ್ರೀ ಅನುಭವ ನೀಡುತ್ತದೆ.

ಯೂಟ್ಯೂಬ್ (YouTube) ಕೋಟ್ಯಾಂತರ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಷ್ಟು ದಿನ ಕೇವಲ ‘ಪ್ರೀಮಿಯಂ’ ಚಂದಾದಾರರಿಗೆ ಮಾತ್ರ ಸೀಮಿತವಾಗಿದ್ದ ಪಿಕ್ಚರ್-ಇನ್-ಪಿಕ್ಚರ್ (PiP) ವೈಶಿಷ್ಟ್ಯವನ್ನು ಈಗ ಜಗತ್ತಿನಾದ್ಯಂತ ಇರುವ ಉಚಿತ ಬಳಕೆದಾರರಿಗೂ ವಿಸ್ತರಿಸಲು ಕಂಪನಿ ಮುಂದಾಗಿದೆ.
ಏನಿದು ಪಿಕ್ಚರ್-ಇನ್-ಪಿಕ್ಚರ್ (PiP) ?
- ನೀವು ಯೂಟ್ಯೂಬ್ನಲ್ಲಿ ವಿಡಿಯೋ ನೋಡುತ್ತಲೇ ಮೊಬೈಲ್ನಲ್ಲಿ ವಾಟ್ಸಾಪ್ ಮೆಸೇಜ್ ಮಾಡಬೇಕೆ? ಅಥವಾ ಬ್ರೌಸಿಂಗ್ ಮಾಡಬೇಕೆ? ಇನ್ಮುಂದೆ ಇದು ಸುಲಭ.
- ನೀವು ವಿಡಿಯೋ ಪ್ಲೇ ಆಗುತ್ತಿರುವಾಗ ಆಪ್ನಿಂದ ಹೊರಬಂದರೂ, ವಿಡಿಯೋ ಸಣ್ಣ ವಿಂಡೋ ರೂಪದಲ್ಲಿ ಸ್ಕ್ರೀನ್ ಮೇಲೆ ಪ್ಲೇ ಆಗುತ್ತಲೇ ಇರುತ್ತದೆ.
- ಈ ಸಣ್ಣ ಪ್ಲೇಯರ್ ಅನ್ನು ನೀವು ಸ್ಕ್ರೀನ್ನ ಎಲ್ಲಿ ಬೇಕಾದರೂ ಸರಿಸಬಹುದು ಮತ್ತು ಅದರ ಗಾತ್ರವನ್ನು ಬದಲಾಯಿಸಬಹುದು.
ಉಚಿತವಾಗಿದ್ರೂ ಕಂಡಿಷನ್ ಅಪ್ಲೇ
ಉಚಿತ ಬಳಕೆದಾರರಿಗೆ ಈ ಸೌಲಭ್ಯ ಸಿಕ್ಕರೂ ಒಂದು ಕಂಡೀಷನ್ ಇದೆ. ಸಂಗೀತ (Music Videos) ವಿಡಿಯೋಗಳಿಗೆ ಇದು ಅನ್ವಯಿಸುವುದಿಲ್ಲ. ಕೇವಲ ಸಾಮಾನ್ಯ ವಿಡಿಯೋಗಳಿಗೆ ಮಾತ್ರ PiP ಮೋಡ್ ಲಭ್ಯವಿರುತ್ತದೆ. ಮ್ಯೂಸಿಕ್ ವಿಡಿಯೋಗಳನ್ನು ಬ್ಯಾಕ್ಗ್ರೌಂಡ್ನಲ್ಲಿ ಕೇಳಲು ಇಂದಿಗೂ ಪ್ರೀಮಿಯಂ ಚಂದಾದಾರಿಕೆ ಅನಿವಾರ್ಯ.
Also Read : ಒಪ್ಪೋ ಫೈಂಡ್ X10 : 8000mAh ಬ್ಯಾಟರಿ , 200MP ಕ್ಯಾಮೆರಾ – ಬೆಲೆ ಎಷ್ಟು ಗೊತ್ತಾ ?
ಪ್ರೀಮಿಯಂ ಬಳಕೆದಾರರಿಗಾಗಿ ಬರಲಿವೆ ಹೊಸ AI ಫೀಚರ್ಗಳು
ಉಚಿತ ಬಳಕೆದಾರರಿಗೆ PiP ನೀಡುತ್ತಿರುವ ಬೆನ್ನಲ್ಲೇ, ಪ್ರೀಮಿಯಂ ಸದಸ್ಯರಿಗಾಗಿ ಯೂಟ್ಯೂಬ್ ಕೆಲವು ಅದ್ಬುತ ಫೀಚರ್ಗಳನ್ನು ಪರೀಕ್ಷಿಸುತ್ತಿದೆ:
ಆಟೋ ಸ್ಪೀಡ್ (Auto Speed): ಇದು ಕೃತಕ ಬುದ್ಧಿಮತ್ತೆ (AI) ಬಳಸಿ ವಿಡಿಯೋದ ವೇಗವನ್ನು ತಾನಾಗಿಯೇ ನಿರ್ಧರಿಸುತ್ತದೆ. ವಿಡಿಯೋದಲ್ಲಿ ಅನಗತ್ಯ ವಿರಾಮ ಅಥವಾ ಪುನರಾವರ್ತನೆಗಳಿದ್ದಾಗ ವೇಗ ಹೆಚ್ಚಿಸುತ್ತದೆ ಮತ್ತು ಪ್ರಮುಖ ಭಾಗಗಳಲ್ಲಿ ವೇಗ ತಗ್ಗಿಸಿ ಸ್ಪಷ್ಟತೆ ನೀಡುತ್ತದೆ.
Also Read : Google I/O 2026 : ಆಂಡ್ರಾಯ್ಡ್ 17 ಮತ್ತು ಜೆಮಿನಿ AI ಕ್ರಾಂತಿ ! ಪಿಕ್ಸೆಲ್ 11 ಏನಿದು ಹೊಸ ಫೀಚರ್ಸ್
ಆನ್ ದಿ ಗೋ ಕಂಟ್ರೋಲ್ (On-the-go Control)
ದೀರ್ಘಾವಧಿಯ ಪಾಡ್ಕಾಸ್ಟ್ ಅಥವಾ ಟಾಕ್ ಶೋ ನೋಡುವವರಿಗೆ ಇದು ವರದಾನ. ಕಮೆಂಟ್ ಮತ್ತು ಶಿಫಾರಸುಗಳ ಕಿರಿಕಿರಿ ಇಲ್ಲದೆ, ಸರಳ ಇಂಟರ್ಫೇಸ್ ಮೂಲಕ ಹ್ಯಾಂಡ್ಸ್-ಫ್ರೀ ಅನುಭವ ನೀಡುತ್ತದೆ.
ಮೇಲ್ದರ್ಜೆಗೇರಿದ ಯೂಟ್ಯೂಬ್ ತಂತ್ರಜ್ಞಾನ
ಇಂದಿನ ಕಾಲದಲ್ಲಿ ಜನರು ಮಲ್ಟಿಟಾಸ್ಕಿಂಗ್ (ಒಂದೇ ಸಮಯದಲ್ಲಿ ಹಲವು ಕೆಲಸ) ಇಷ್ಟಪಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಯೂಟ್ಯೂಬ್ ತನ್ನ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುತ್ತಿದೆ. ಈ ಹೊಸ ಅಪ್ಡೇಟ್ ಹಂತಹಂತವಾಗಿ ಎಲ್ಲಾ ದೇಶಗಳ ಮತ್ತು ಎಲ್ಲಾ ಡಿವೈಸ್ಗಳ ಬಳಕೆದಾರರಿಗೆ ತಲುಪಲಿದೆ.
YouTube Opens Picture in Picture Feature to Free Users Worldwide


