ರಕ್ಷಿತಾ ಶೆಟ್ಟಿ ಹುಟ್ಟುಹಬ್ಬಕ್ಕೆ ‘ಹೊಸಬದುಕು’ ಆಶ್ರಮ ಸಾಕ್ಷಿ: ನಿವಾಸಿಗಳೊಂದಿಗೆ ಕುಣಿದು ಕುಪ್ಪಳಿಸಿದ ಬಿಗ್ ಬಾಸ್ ರನ್ನರ್ ಅಪ್!

Bigg Boss Runner up Rakshitha Shetty Birthday: ಯಾವುದೇ ಆಡಂಬರವಿಲ್ಲದೆ ಆಶ್ರಮದ ನಿವಾಸಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಕ್ಷಿತಾ ಶೆಟ್ಟಿ ಅವರ ಸರಳತೆಯನ್ನು ಕಂಡ ಸ್ಥಳೀಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಉಡುಪಿ: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿ ಜನಪ್ರಿಯತೆ ಗಳಿಸಿರುವ ರಕ್ಷಿತಾ ಶೆಟ್ಟಿ ಅವರು (Bigg Boss Runner up Rakshitha Shetty), ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸುದ್ದಿಯಾಗಿದ್ದಾರೆ. ಉಡುಪಿಯ ಸಾಲಿಗ್ರಾಮದಲ್ಲಿರುವ ‘ಹೊಸಬದುಕು’ ಆಶ್ರಮದಲ್ಲಿ (Udupi Hosabaduku Ashram) ನಿವಾಸಿಗಳೊಂದಿಗೆ ಸಮಯ ಕಳೆಯುವ ಮೂಲಕ ರಕ್ಷಿತಾ ತಮ್ಮ ಹುಟ್ಟಿದ ದಿನಕ್ಕೆ ಅರ್ಥಪೂರ್ಣ ಮೆರುಗು ನೀಡಿದ್ದಾರೆ.

ಸರಳತೆ ಮೆರೆದ ಬಿಗ್ ಬಾಸ್ ಬೆಡಗಿ
ತಮ್ಮ ಹುಟ್ಟುಹಬ್ಬದ ಸಂಭ್ರಮದ ನಡುವೆಯೂ ಸಮಾಜಮುಖಿ ಚಿಂತನೆ ಮೆರೆದ ರಕ್ಷಿತಾ, ಆಶ್ರಮದ ನಿವಾಸಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ಕೇವಲ ದಾನ ಮಾಡುವುದಷ್ಟೇ ಅಲ್ಲದೆ, ಆಶ್ರಮದ ಜನರೊಂದಿಗೆ ಬೆರೆತು ಅವರ ಕಷ್ಟ-ಸುಖಗಳನ್ನು ಆಲಿಸಿ ಸಂಭ್ರಮ ಹಂಚಿಕೊಂಡರು.

ಹಾಡಿಗೆ ಹೆಜ್ಜೆ ಹಾಕಿದ ರಕ್ಷಿತಾ
ಕಾರ್ಯಕ್ರಮದ ವೇಳೆ ಆಶ್ರಮದ ನಿವಾಸಿಗಳು ರಕ್ಷಿತಾ ಅವರಿಗಾಗಿ ಹಾಡುಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಧ್ವನಿಗೂಡಿಸಿದ ರಕ್ಷಿತಾ, ಲವಲವಿಕೆಯಿಂದ ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು. ತೆರೆಯ ಮೇಲೆ ಕಂಡಿದ್ದ ತಾರೆಯೊಬ್ಬರು ತಮ್ಮ ನಡುವೆ ಬಂದು ಸಾಮಾನ್ಯರಂತೆ ಬೆರೆತು ಡ್ಯಾನ್ಸ್ ಮಾಡಿದ್ದನ್ನು ಕಂಡು ಆಶ್ರಮದ ನಿವಾಸಿಗಳು ಹರ್ಷ ವ್ಯಕ್ತಪಡಿಸಿದರು.

Earth Speed: ಭೂಮಿಯ ವೇಗಕ್ಕೆ ಬ್ರೇಕ್: ಹೆಚ್ಚಾಗುತ್ತಿದೆ ಹಗಲಿನ ಅವಧಿ! ಕಾರಣವೇನು?

ಮೆಚ್ಚುಗೆಯ ಸುರಿಮಳೆ
ಯಾವುದೇ ಆಡಂಬರವಿಲ್ಲದೆ ಆಶ್ರಮದ ನಿವಾಸಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಕ್ಷಿತಾ ಶೆಟ್ಟಿ ಅವರ ಸರಳತೆಯನ್ನು ಕಂಡ ಸ್ಥಳೀಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಶ್ರಮದ ಸದಸ್ಯರು ಕೂಡ ರಕ್ಷಿತಾ ಅವರ ಭೇಟಿಯಿಂದ ನಮಗೆ ತುಂಬಾನೇ ಸಂತೋಷವಾಗಿದೆ ಎಂದು ತಿಳಿಸಿ, ಅವರಿಗೆ ಶುಭಾಶಯಗಳನ್ನು ಕೋರಿದರು.

[youtube https://www.youtube.com/watch?v=o6NcliZQa6Y]

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories