ಫೋರ್ಥ್‌ಫೋಕಸ್‌ ಸಂಸ್ಥೆಯ ಮುಡಿಗೆ ಮತ್ತೊಂದು ಗರಿ: ವರ್ಡ್‌ಪ್ರೆಸ್.ಕಾಂ ಮತ್ತು ವೂ ಪಾಲುದಾರ ಮಾನ್ಯತೆ

ಫೋರ್ಥ್‌ಫೋಕಸ್‌ ಸಂಸ್ಥೆಗೆ ಅಧಿಕೃತವಾಗಿ ವರ್ಡ್‌ಪ್ರೆಸ್‌.ಕಾಂ ಮತ್ತು ವೂ (ವೂಕಾರ್ಮರ್ಸ್‌) ಪಾಲುದಾರರಾಗಿ  ಕಾರ್ಯನಿರ್ವಹಿಸಲಿದೆ. ಈ ಮಾನ್ಯತೆಯಿಂದಾಗಿ ಫೋರ್ಥ್‌ಫೋಕಸ್‌ ಕೂಡಾ ಜಾಗತಿಕವಾಗಿ ಹೆಚ್ಚು ಬಳಸುವ ಡಿಜಿಟಲ್‌ ವೇದಿಕೆಗಳಾದ ವರ್ಡ್‌ಪ್ರೆಸ್‌.ಕಾಂ ಮತ್ತು ವೂಕಾರ್ಮರ್ಸ್‌ನೊಂದಿಗೆ ನೇರವಾಗಿ ಕೆಲಸ ಮಾಡುವ ಸಂಸ್ಥೆಯಾಗಿ ಹೊರಹೊಮ್ಮಿದೆ.

ಜಾಲತಾಣಗಳನ್ನು ನಿರ್ಮಾಣ ಮಾಡುವ, ಇ–ಕಾಮರ್ಸ್‌ ಸಮಸ್ಯೆಗಳಿಗೆ ಪರಿಹಾರ ನೀಡುವುದರಲ್ಲಿ ಪರಿಣತಿ ಹೊಂದಿರುವ ಫೋರ್ಥ್‌ಫೋಕಸ್‌ ಸಂಸ್ಥೆಯ ಮುಡಿಗೆ ಈಗ ಮತ್ತೊಂದು ಗರಿ. ಇದೀಗ ಫೋರ್ಥ್‌ಫೋಕಸ್‌ ಸಂಸ್ಥೆಗೆ ಅಧಿಕೃತವಾಗಿ ವರ್ಡ್‌ಪ್ರೆಸ್‌.ಕಾಂ ಮತ್ತು ವೂ (ವೂಕಾರ್ಮರ್ಸ್‌) ಪಾಲುದಾರರಾಗಿ  ಕಾರ್ಯನಿರ್ವಹಿಸಲಿದೆ. ಈ ಮಾನ್ಯತೆಯಿಂದಾಗಿ ಫೋರ್ಥ್‌ಫೋಕಸ್‌ ಕೂಡಾ ಜಾಗತಿಕವಾಗಿ ಹೆಚ್ಚು ಬಳಸುವ ಡಿಜಿಟಲ್‌ ವೇದಿಕೆಗಳಾದ ವರ್ಡ್‌ಪ್ರೆಸ್‌.ಕಾಂ ಮತ್ತು ವೂಕಾರ್ಮರ್ಸ್‌ನೊಂದಿಗೆ ನೇರವಾಗಿ ಕೆಲಸ ಮಾಡುವ ಸಂಸ್ಥೆಯಾಗಿ ಹೊರಹೊಮ್ಮಿದೆ.

ಫೋರ್ಥ್‌ಫೋಕಸ್‌ ಸಂಸ್ಥೆ 10 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿದೆ. ಅದು 8 ಕ್ಕೂ ಹೆಚ್ಚು ದೇಶಗಳಲ್ಲಿ 350ಕ್ಕೂ ಹೆಚ್ಚು ತನ್ನ ಗ್ರಾಹಕರನ್ನು ಹೊಂದಿದೆ. ಅವರಿಗೆ ಜಾಲತಾಣ ಹಾಗೂ ಇ–ಕಾಮರ್ಸ್‌ ಪರಿಹಾರಗಳನ್ನು ಒದಗಿಸಿದೆ. ಇ–ಕಾಮರ್ಸ್‌ ಜಾಲತಾಣಗಳು, ಕಸ್ಟಮ್‌ ಜಾಲತಾಣ ವ್ಯವಸ್ಥೆಗಳ ನಿರ್ಮಾಣದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಜಾಲತಾಣ ನಿರ್ವಹಣೆಯಲ್ಲಿ ಉಂಟಾಗುವ ತೊಡಕುಗಳನ್ನು ಬಗೆಹರಿಸುವ,  ಸಂಕೀರ್ಣ ವೆಬ್‌ಸೈಟ್‌ ಅಭಿವೃದ್ಧಿ, ಜಾಲತಾಣಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ಮತ್ತು ಹೆಚ್ಚಿಸುವ ಮುಂತಾದ ಅನುಭವ ಹೊಂದಿದೆ.

ವರ್ಡ್‌ಪ್ರೆಸ್‌.ಕಾಂ, ಜಾಲತಾಣಗಳನ್ನು ನಿರ್ಮಾಣ ಮಾಡಿಕೊಳ್ಳಲು ಅನುವು ಮಾಡಿಕೊಡುವ ವೇದಿಕೆಯಾಗಿ ಪ್ರಸಿದ್ಧವಾಗಿದೆ. ಇದು ಜಾಲತಾಣಗಳಿಗೆ ಭದ್ರತೆ, ವೇಗ ಮತ್ತು ವಿಸ್ತಾರಗೊಳಿಸಲು ಅನುವು ಮಾಡಿಕೊಡುತ್ತದೆ. ಜಾಲತಾಣಗಳ ನಿರ್ವಹಣೆಯಲ್ಲಿ ಉಂಟಾಗುವ ಜಟಿಲತೆಗಳನ್ನು ತಪ್ಪಿಸಲು, ವ್ಯವಹಾರಗಳಿಗಾಗಿ ಹೆಚ್ಚಿನ ಕಾರ್ಯಕ್ಷಮತೆಯ ಜಾಲತಾಣಗಳನ್ನು ರೂಪಿಸಲು ಇದು ಸಹಾಯ ಮಾಡುತ್ತದೆ.

ವೂ (ವೂಕಾಮರ್ಸ್‌), ಇದು ಇ–ಕಾಮರ್ಸ್‌ ವೇದಿಕೆಯಾಗಿ ಬಳಸುವ ವ್ಯವಸ್ಥೆಯಾಗಿದೆ. ಇದು ವ್ಯಾಪಾರಿಗಳು ತಮ್ಮ ಆನ್‌ಲೈನ್ ಅಂಗಡಿಯ ವಿಂಡೋಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುವ ಮತ್ತು ಕಾಲಕಾಲಕ್ಕೆ ಹೊಸತನ್ನು ಸೇರ್ಪಡಿಸಬಹುದಾದ ಅವಕಾಶವನ್ನು ನೀಡುತ್ತದೆ.

ಸಂಸ್ಥೆಯ ಈ ಸಾಧನೆಯ ಕುರಿತು ಮಾತನಾಡಿದ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿ. ಗೌತಮ್ ನಾವಡ ಅವರು ‘ನಾವು ಬಹಳ ವರ್ಷಗಳಿಂದ ನಿರಂತರವಾಗಿ ದುಡಿದ ಪರಿಶ್ರಮದ ಫಲವಾಗಿದೆ. ಇನ್ನು ಮುಂದೆಯೂ ನಮ್ಮ ಸಂಪೂರ್ಣ ಗಮನ ಸದಾ ವ್ಯಾಪಾರ–ವ್ಯವಹಾರಕ್ಕೆ ನೇರ ಪ್ರಯೋಜನ ನೀಡುವ ಪರಿಹಾರಗಳ ಮೇಲೆಯೇ ಇರುತ್ತದೆ. ಕುಂದಾಪುರದಿಂದಲೇ ಜಗತ್ತಿನ ಗ್ರಾಹಕರೊಂದಿಗೆ ಕೆಲಸ ಮಾಡುವ ಅನುಭವ, ಗುಣಮಟ್ಟದ ಕೆಲಸಗಳೇ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ.’ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಫೋರ್ಥ್‌ಫೋಕಸ್ ಸಂಸ್ಥೆಯು ವರ್ಡ್‌ಪ್ರೆಸ್.ಕಾಂ ಹಾಗೂ ವೂ ಆಧಾರಿತ ಜಾಲತಾಣ ಹಾಗೂ ಇ–ಕಾಮರ್ಸ್‌ ಗೆ ಸಂಬಂಧಿಸಿದ  ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಹೆಚ್ಚು ಒತ್ತು ಕೊಡಲಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories