ಅಪಘಾತದಿಂದಾಗಿ ತೀವ್ರ ನಿಗಾ ಘಟಕ್ಕೆ ಸೇರಿದ ಬಡ ಯುವಕ: ಆಕಾಶ್ ಚಿಕಿತ್ಸೆಗೆ ಬೇಕಿದೆ ನಿಮ್ಮ ನೆರವಿನ ಹಸ್ತ
ನೆರವು ನೀಡಿ: ಬೀಜಾಡಿ: ಉಡುಪಿ ಜಿಲ್ಲೆಯ ಬೀಜಾಡಿಯ ಶೇಖರ್ ಬಿ.ಪಿ ಮತ್ತು ಗೀತಾ ಅವರ ಮಗ ಆಕಾಶ್ ಬೆಂಗಳೂರಿನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 21 ವರ್ಷದ ಆಕಾಶ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಆಕಾಶ್ ಅವರ ಚಿಕಿತ್ಸೆಗೆ ಬಹಳಷ್ಟು ಹಣ ಖರ್ಚಾಗುತ್ತಿದೆ. ಎರಡು ದಿನದ ಆಸ್ಪತ್ರೆಯ ವೆಚ್ಚ ಸುಮಾರು 7 ಲಕ್ಷ ದಾಟಿದೆ. ಬಡ ಕುಟುಂಬದಿಂದ ಬಂದು ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದ ಆಕಾಶ್ ಅವರು ಚೇತರಿಸಿಕೊಳ್ಳಲು ಇನ್ನೂ ಚಿಕಿತ್ಸೆಯ ಅಗತ್ಯವಿದೆ. ಅದಕ್ಕೆ ಸಾಕಷ್ಟು ಹಣ ಕೂಡಾ ಖರ್ಚಾಗಲಿದೆ. ಆಕಾಶ್ ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದೆ. ಸಹಾಯ ಮಾಡ ಬಯಸುವವರು ಈ ಫೋನ್ ಪೇ ನಂಬರ್ 9901268700 ಅಥವಾ 9945330256 ಗೆ ತಮ್ಮ ಕೈಲಾದಷ್ಟು ನೆರವು ನೀಡಿ ಆಕಾಶ್ ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡಬಹುದಾಗಿದೆ.



