ಉಡುಪಿ ಶ್ರೀಕೃಷ್ಣ ಮಠದ ಕನಕನ ಕಿಂಡಿಗೆ ಪ್ರಮೋದ್ ಮಧ್ವರಾಜ್‌ರಿಂದ ‘ಕನಕ ಕವಚ’ ಸಮರ್ಪಣೆ

Promod Madhwaraj Kanaka Kavacha : ಉಡುಪಿ : ಭಾರತದ ಪವಿತ್ರ ಪುಣ್ಯಕ್ಷೇತ್ರವಾಗಿರುವ ಉಡುಪಿಯ ಶ್ರೀಕೃಷ್ಣ ಮಠದ ಕನಕ ಕಿಂಡಿಗೆ ಸೇವಾ ರೂಪದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಅತ್ಯಾಕರ್ಷಕವಾದ ಸ್ವರ್ಣಮಯ ಕನಕ ಕವಚವನ್ನು ಹಸ್ತಾಂತರ ಮಾಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮ್ಮುಂಜೆಯ ನಿವಾಸದಲ್ಲಿ ಕನಕ ಕವಚಕ್ಕೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕುರುಬ ಸಮುದಾಯದ ಮೇಲೆ ಅವರಿಗಿರುವ ಪ್ರೀತಿ, ಕನಕದಾಸರ ಮೇಲಿನ ಭಕ್ತಿಯ ಪ್ರತೀಕವಾಗಿ ಸ್ವರ್ಣಮಯ ಕವಚವನ್ನು ಶ್ರೀಕೃಷ್ಣ ಮಠಕ್ಕೆ ಸಮರ್ಪಿಸಿದ್ದಾರೆ.
ಉಡುಪಿ ಜಿಲ್ಲಾ ಕುರುಬ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿಯೇ ಶ್ರೀಕೃಷ್ಣಮಠಕ್ಕೆ ಸ್ವರ್ಣ ಕವಚ ಹಸ್ತಾಂತರಿಸಲಾಗಿದೆ. ಪ್ರಮೋದ್ ಮಧ್ವರಾಜ್ ಅವರ ತಂದೆ ಮಧ್ವರಾಜ್ ಅವರು ಕೂಡ ಪ್ರಭಾವಿ ರಾಜಕಾರಣಿಯಾಗಿದ್ದರು.

ಉಡುಪಿಯ ಶ್ರೀ ಕೃಷ್ಣಮಠದಲ್ಲಿನ ಕನಕ ಗೋಪುರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಪ್ರಮೋದ್ ಮಧ್ವರಾಜ್ ಅವರು ಕನಕನ ಕಿಂಡಿಗೆ ಸ್ವರ್ಣ ಕವಚವನ್ನು ನಿರ್ಮಿಸಿಕೊಟ್ಟಿದ್ದಾರೆ.
ಕುರುಬ ಸಮುದಾಯದವರು ಕನಕನ ಗೋಪುರ ನಿರ್ಮಾಣದ ಬಳಿಕ ಮಧ್ವರಾಜ್ ಅವರ ಕುಟುಂಬವನ್ನು ಹೆಚ್ಚು ಗೌರವ ಭಾವನೆಯಿಂದ ಕಾಣುತ್ತಿದೆ. ಇದೀಗ ಕನಕನ ಕಿಂಡಿಗೆ ಸ್ವರ್ಣ ಕವಚವನ್ನು ಸಮರ್ಪಣೆ ಮಾಡ್ತಾ ಇರೋದ್ರಿಂದಾಗಿ ಪ್ರಮೋದ್ ಮಧ್ವರಾಜ್ ಅವರಿಗೆ ಗೌರವ ಸಮರ್ಪಿಸಿದ್ದಾರೆ.
ಇದನ್ನೂ ಓದಿ : ಗೋಪಾಲ ಖಾರ್ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ : ಗಿನ್ನಿಸ್ ದಾಖಲೆ ವೀರನ ಹೊಸ ಸಾಧನೆ

ಉಡುಪಿಗೆ ನಮೋ ಭೇಟಿ: ಸಿಂಗಾರಗೊಳ್ಳುತ್ತಿದೆ ಕೃಷ್ಣನಗರಿ
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಪ್ರಧಾನಿಯಾಗಿ ಉಡುಪಿಗೆ ನರೇಂದ್ರ ಮೋದಿ ಅವರ ಮೊದಲ ಭೇಟಿ ಇದಾಗಿದೆ. ನೆವಂಬರ್ 28ರಂದು ಬೆಳಗ್ಗೆ 12 ಗಂಟೆಗೆ ಉಡುಪಿಯ ಶ್ರೀ ಕೃಷ್ಣಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ. ನಂತರ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠ ಹಮ್ಮಿಕೊಂಡಿರುವ ಬೃಹತ್ ಲಕ್ಷ ಕಂಠ ಗೀತೋತ್ಸವದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಜಿಲ್ಲಾಡಳಿತ ಸಕಲ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.
ಉಡುಪಿ ನಗರದಲ್ಲಿರುವ ರಸ್ತೆಗಳ ದುರಸ್ಥಿ ಕಾರ್ಯವನ್ನು ಮಾಡಲಾಗುತ್ತಿದ್ದು, ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣಗೊಳ್ಳುತ್ತಿದೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರ ಭೇಟಿಗಾಗಿ ಶ್ರೀಕೃಷ್ಣ ನಗರ ಸಿಂಗಾರಗೊಳ್ಳುತ್ತಿದೆ.
ಇದನ್ನೂ ಓದಿ : ಶಂಕರನಾರಾಯಣ : ಪತಿಯ ಹಿಂಸೆ ತಡೆಯಲಾರದೆ ಪತ್ನಿ ಆತ್ಮಹತ್ಯೆ
Promod Madhwaraj Dedicates Kanaka Kavacha to Kanakana Kindi at Udupi Sri Krishna Math



