ಹಿರಿಯ ಪತ್ರಕರ್ತ ಗಣೇಶ್‌ ಪ್ರಭು ನಿಧನ; ಉಡುಪಿ ಪತ್ರಕರ್ತರ ಸಂಘದಿಂದ ಸಂತಾಪ

senior journalist Ganesh Prabhu passed away: ಇವರ ಅಗಲಿಕೆಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿದೆ.

ಉಡುಪಿ : ಜಿಲ್ಲೆಯ ಹಿರಿಯ ಪತ್ರಕರ್ತರಾದ ಗಣೇಶ್ ಪ್ರಭು (61) ಅವರು ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.

ಗಣೇಶ್ ಪ್ರಭು ಅವರು ಪತ್ರಿಕಾ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಅನುಭವಿಗಳಾಗಿದ್ದು, ಮಣಿಪಾಲದಿಂದ ಪ್ರಕಟವಾಗುತ್ತಿದ್ದ ಮಾರ್ನಿಂಗ್ ನ್ಯೂಸ್ ಆಂಗ್ಲ ದಿನಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಬಳಿಕ ಖ್ಯಾತ ಆಂಗ್ಲ ದಿನಪತ್ರಿಕೆ ದಿ ಹಿಂದುಯ ಉಡುಪಿ ಜಿಲ್ಲಾ ವರದಿಗಾರರಾಗಿ ಸುಮಾರು 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ರೆನಾಲ್ಟ್‌ನಿಂದ ಸ್ಕೋಡಾವರೆಗೆ : ವೆಂಟಿಲೇಟೆಡ್‌ ಸೀಟುಗಳಿರುವ ಅಗ್ಗದ ಟಾಪ್‌ 5 ಕಾರುಗಳು

ನಿವೃತ್ತಿಯ ನಂತರವೂ ಅವರು ಪತ್ರಿಕಾ ಕ್ಷೇತ್ರದೊಂದಿಗೆ ನಂಟು ಮುಂದುವರಿಸಿಕೊಂಡು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಸರಳ ಸ್ವಭಾವ, ನಿಷ್ಠಾವಂತ ವರದಿಗಾರಿಕೆ ಹಾಗೂ ವೃತ್ತಿಪರ ನಿಲುವಿನಿಂದ ಅವರು ಪತ್ರಕರ್ತರ ವಲಯದಲ್ಲಿ ಗೌರವ ಪಡೆದಿದ್ದರು.

ಇವರ ಅಗಲಿಕೆಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories