ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಜಗಳ, ಪ್ರಕರಣ ದಾಖಲು

ಉಡುಪಿ: Udupi Fight in public: ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಗರದ ನರ್ಮ್ ಸರಕಾರಿ ಬಸ್ ನಿಲ್ದಾಣದ ಬಳಿಯಲ್ಲಿ ಈ ಘಟನೆ ನಡೆದಿದೆ.
ದಿನಾಂಕ 05/10/2025 ರಂದು ಸಂಜೆ 4:45ರ ಸುಮಾರಿಗೆ, ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು (ASI) ಹರೀಶ್ ಅವರು ಹಗಲು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.
Also Read: ಕುಂದಾಪುರ : ಕೃಷಿ ಹೆಸರಲ್ಲಿ ಚಿನ್ನದ ಚೈನ್ ಅಡವಿಟ್ಟು 4.5 ಲಕ್ಷ ವಂಚನೆ
ಉಡುಪಿ ತಾಲೂಕಿನ ಮೂಡನಿಡಂಬೂರು ಗ್ರಾಮದ ನರ್ಮ್ ಸರ್ಕಾರಿ ಬಸ್ ನಿಲ್ದಾಣದ ಬಳಿ ನಾಲ್ಕು ಜನ ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮತ್ತು ಪರಸ್ಪರ ದೂಡಾಡಿಕೊಂಡು ಜಗಳವಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಎಎಸ್ಐ ಹರೀಶ್ ಅವರು ಸ್ಥಳಕ್ಕೆ ತೆರಳಿ ಈ ರೀತಿ ವರ್ತಿಸಬಾರದು ಎಂದು ತಿಳುವಳಿಕೆ ನೀಡಿದರೂ, ಆರೋಪಿಗಳು ತಮ್ಮ ಜಗಳವನ್ನು ಮುಂದುವರೆಸಿದರು.
Also read: Manipal News: ಮಣಿಪಾಲ: ಯುವಕ ನಾಪತ್ತೆ, ಸೇತುವೆ ಬಳಿ ಬೈಕ್ ಪತ್ತೆ
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರವೀಣ್ ಮತ್ತು ಬಂಗಾರಪ್ಪ ವಿರುದ್ದ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.



